ಶ್ರೀ ಅಮರನಾಥ ಮಂದಿರ ಮಂಡಳಿಗೆ ಅರಣ್ಯ ಜಾಗದ ವರ್ಗಾವಣೆಯನ್ನು ಪ್ರತಿಭಟಿಸಿ ನಡೆಸುತ್ತಿರುವ ಮುಷ್ಕರ ಮುಂದುವರಿದಿರುವ ಹಿನ್ನೆಲೆಯಲ್ಲಿ ಶುಕ್ರವಾರವೂ ಜಮ್ಮುವಿನಿಂದ ಅಮರನಾಥ ಯಾತ್ರೆಯನ್ನು ತಡೆಹಿಡಿಯಲಾಗಿದೆ.
ಭಗವತಿ ನಗರದ ಯಾತ್ರಾರ್ಥಿಗಳ ಶಿಬಿರದಿಂದ ಅಮರನಾಥ ಗುಹಾದೇವಾಲಯಕ್ಕೆ ತೆರಳುವುದರಿಂದ ಭಕ್ತರನ್ನು ತಡೆಯಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಕಳೆದ ಕೆಲವು ದಿನಗಳಿಂದ ಕಣಿವೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಯಾತ್ರಿಕರ ಸುರಕ್ಷತಾ ದೃಷ್ಟಿಯಿಂದ ಅವರನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥ ಯಾತ್ರೆಯು ಜೂನ್ 17ರಿಂದ ಆರಂಭವಾಗಿದ್ದು, ಮೂಲ ಶಿಬಿರದಿಂದ ಯಾತ್ರಿಗಳನ್ನು ತಡೆಯುತ್ತಿರುವುದು ಇದು ಮೂರನೆ ಸಲವಾಗಿದೆ. ಜೂನ್ 20ರಂದು ಕೆಟ್ಟ ಹವಾಮಾನದಿಂದಾಗಿ ತಡೆಯಲಾಗಿದ್ದರೆ, ಜೂನ್ 25ರಂದು ಜನದಟ್ಟಣೆಯಿಂದಾಗಿ ತಡೆಯಲಾಗಿತ್ತು.
|