ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಣಿಕ್‌ಶಾ ಅಂತ್ಯಕ್ರಿಯೆಗೆ ಸಕಲ ಸರಕಾರಿ ಗೌರವ  Search similar articles
ಗುರುವಾರ ತಡರಾತ್ರಿ ವಿಧಿವಶರಾದ ಫೀಲ್ಡ್ ಮಾರ್ಶಲ್ ಸಾಮ್ ಮಾಣಿಕ್ ಶಾ ಅವರ ಅಂತ್ಯ ಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಮಾಡಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಶುಕ್ರವಾರ ಮುಂಜಾನೆ, 1971ರ ಭಾರತ - ಪಾಕಿಸ್ತಾನ ಯುದ್ಧದ ನಾಯಕನಿಗೆ ಸೇನಾ ಗೌರವ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಬಳಿಕ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ,ಕೇಂದ್ರವು ಅಗಲಿದ ಮಹಾನ್ ಸೇನಾನಿಗೆ ಸರಕಾರಿ ಗೌರವ ನೀಡಲಿದೆ ಎಂದು ಹೇಳಿದೆ.

ಅಂತ್ಯಕ್ರಿಯೆಯ ವೇಳೆಗೆ ರಕ್ಷಣಾ ಇಲಾಖೆಯ ರಾಜ್ಯಸಚಿವ ಪಲ್ಲಂ ರಾಜು ಅವರು ಕೇಂದ್ರ ಸರಕಾರವನ್ನು ಪ್ರತಿನಿಧಿಸಲಿದ್ದಾರೆ. ಭೂತಾನ್ ಸೇನೆಯ ಮುಖ್ಯಸ್ಥ ಕಿನ್ಲೆ ಡೋರ್ಜಿ ಅವರೂ ಈ ಸಂದರ್ಭದಲ್ಲಿ ಆಗಮಿಸಲಿದ್ದಾರೆ.

ಮಣಿಕ್‌ಶಾ ಅವರ ಗೌರವಾರ್ಥ ತಮಿಳ್ನಾಡು ಸರಕಾರ ಒಂದು ದಿನದ ಶೋಕಾಚರಣೆ ಘೋಷಿಸಿದ್ದು, ರಾಷ್ಟ್ರಧ್ವಜವನ್ನು ಅರ್ಧಕ್ಕಿಳಿಸಲಾಗಿದೆ. ನೀಲಗಿರಿಯಲ್ಲಿ ಶೇಕ್ಷಣಿಕ ಸಂಸ್ಥೆಗಳಿಗೆ ರಜೆ ಸಾರಲಾಗಿದೆ.

ಮಣಿಕ್‌ಶಾ ಅವರ ನಿವಾಸದಲ್ಲಿ ಪಾರ್ಸಿ ಸಂಪ್ರದಾಯಗಳ ಪ್ರಕಾರ ಅಂತಿಮ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ, ಮೃತ ದೇಹವನ್ನು ಮದ್ರಾಸ್ ರೆಜಿಮೆಂಟ್ ಕೇಂದ್ರಕ್ಕೆ ತರಲಾಗುವುದು ಮತ್ತು ಅಲ್ಲಿ ಎರಡು ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.

ಬಳಿಕ ಉದಕ ಮಂಡಲದಲ್ಲಿ ಪಾರ್ಸಿ ಸ್ಮಶಾನದಲ್ಲಿ ರಾಷ್ಟ್ರಗೌರವ, ಸೇನಾ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.
ಮತ್ತಷ್ಟು
ಜಮ್ಮು: ಅಮರನಾಥ ಯಾತ್ರೆ ಮತ್ತೆ ಸ್ಥಗಿತ
ಬಿಹಾರ, ಕೇರಳ, ಅಸ್ಸಾಂಗಳಿಗೆ ಹೊಸ ರಾಜ್ಯಪಾಲರು
ಸರಬ್‌ಜಿತ್‌ಗೆ ಜೀವದಾನ: ಸ್ಪಷ್ಟನೆ ಕೇಳಿದ ಭಾರತ
ಫೀಲ್ಡ್ ಮಾರ್ಶಲ್ ಮಾಣಿಕ್ ಶಾ ನಿಧನ
ಲೋಕಸಭಾ ಚುನಾವಣಾಗೆಗೆ ಬಿಜೆಪಿ ಪಟ್ಟಿ ಸಿದ್ಧ
ಭ್ರಷ್ಟಾಚಾರ: ಭಾರತಕ್ಕೆ 74ನೆ ಸ್ಥಾನ