ಲೋಕಸಭಾ ಚುನಾವಣೆಯ ಮುಂದಾಗಿಯೂ, ಅಯೋಧ್ಯಾದಲ್ಲಿ ರಾಮಮಂದಿರವನ್ನು ಪುನರ್ ನಿರ್ಮಾಣ ಮಾಡುವಂತೆ ಎನ್‌ಡಿಎ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಒತ್ತಾಯಿಸಿದ್ದಾರೆ.
ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಗೊಳ್ಳುವವರೆಗೆ ದೇಶದ ಜನರಿಗೆ ತೃಪ್ತಿ ಇರುವುದಿಲ್ಲ ಎಂದು ಅಡ್ವಾಣಿ ಕಾನ್ಫುರದಲ್ಲಿ ನಡೆದ ರ‌್ಯಾಲಿಯ ವೇಳೆ ತಿಳಿಸಿದ್ದಾರೆ.
ರಾಮಮಂದಿರದ ಕುರಿತಾದ ಹಿಂದುತ್ವ ಪರ ಘೋಷಣೆಗಳ ನಡುವೆಯೂ, ರಾಮಮಂದಿರ ಹೊರತಾಗಿ ದೇಶವನ್ನು ದುಷ್ಟ ಮತ್ತು ಅಪಾಯದಿಂದ ರಕ್ಷಿಸಲು ಭಾರತ್ ಮಾತಾ ದೇವಾಲಯವನ್ನೂ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ ಅವರು ಇದು ಅತ್ಯಂತ ಅಗತ್ಯವೂ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಹಿಂಸಾಚಾರ ಮತ್ತು ತೊಂದರೆಗಳು ಉಂಟಾಗದಂತೆ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಕಳೆದವಾರ ಅಡ್ವಾಣಿ ದೆಹಲಿಯಲ್ಲಿ ಮಾತುಕತೆ ನಡೆಸಿದ್ದರು.
|