ಜಮ್ಮು: ಜಮ್ಮು-ಶ್ರೀನಗರಗಳ ರಂಬನ್ ವಲಯದಲ್ಲಿ ಭೂಕುಸಿತ ಮತ್ತು ಕಲ್ಲುದುರುವಿಕೆಯಿಂದ ರಾಷ್ಟ್ರೀಯ ಹೆದ್ದಾರಿಯು ಎರಡು ಪ್ರದೇಶಗಳಲ್ಲಿ ರಸ್ತೆತಡೆಯುಂಟಾಗಿದ್ದರೂ, ಆಧಿಕಾರಿಗಳು ಶನಿವಾರದಂದು ಅಮರನಾಥ ಯಾತ್ರಾರ್ಥಿಗಳಿಗೆ ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಗುಹಾ ದೇವಾಲಯದತ್ತ ಮಂದುವರಿಯಲು ಅವಕಾಶ ನೀಡಿದರು.
ಮುಷ್ಕರದ ಮುಂದುವರಿಕೆ ಹಿನ್ನೆಲೆಯಲ್ಲಿ ಶುಕ್ರವಾರ ಯಾತ್ರೆಯನ್ನು ತಡೆ ಹಿಡಿಯಲಾಗಿತ್ತು. ಶುಕ್ರವಾರ 193 ಮಕ್ಕಳು, 1034 ಮಹಿಳೆಯರನ್ನೊಳಗೊಂಡ 4105 ಯಾತ್ರಾರ್ಥಿಗಳ ಹೊಸ ತಂಡಕ್ಕೆ ಭಗವತಿ ನಗರದ ಶಿಬಿರದಿಂದ ಯಾತ್ರೆ ಮುಂದುವರಿಸಲು ಅಧಿಕಾರಿಗಳು ಅವಕಾಶ ನೀಡಿದರು. ಮುಂಜಾನೆ 6.15ಕ್ಕೆ ಯಾತ್ರೆ ಹೊರಟಿದೆ.
ಇಂದು 89 ಬಸ್‌ಗಳನ್ನೊಳಗೊಂಡಂತೆ ಒಟ್ಟಾರೆ 126 ವಾಹನಗಳ ಸಾಲುಗಳಲ್ಲಿ ಸೂಕ್ತ ಬೆಂಗಾವಲಿನೊಂದಿಗೆ ತಂಡವು ಹೊರಟಿದೆ ಎಂದು ತಿಳಿಸಿದ ಆಧಿಕಾರಿಗಳು, ವಾಹನಗಳು ಈಗಾಗಲೇ 9.40ರ ವೇಳೆಗೆ ಬಟೋಟೆಯನ್ನು ದಾಟಿವೆ ಎಂದು ಹೇಳಿದ್ದಾರೆ. ರಂಬನ್ ಬಳಿ ಚಂದೇರ್‌ಕೋಟೆಯ ಮುಂದಿನ ರಸ್ತೆ ತಡೆಯುಂಟಾಗಿರುವ ಕಾರಣ ಅಲ್ಲಿ ತಡೆಹಿಡಿಯಲ್ಪಡ ಬಹುದು ಎಂದು ಅವರು ತಿಳಿಸಿದ್ದಾರೆ.
|