ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾರಿಸ್ಕಾದಲ್ಲಿ ಮತ್ತೊಮ್ಮೆ ಹುಲಿಗಳ ಘರ್ಜನೆ  Search similar articles
PTI
ಸುಮಾರು ಏಳು ವರ್ಷಗಳ ಬಳಿಕ ರಾಜಸ್ಥಾನದ ಸಾರಿಸ್ಕಾ ವಜ್ಯಜೀವಿ ಧಾಮದಲ್ಲಿ ಮತ್ತೆ ವ್ಯಾಘ್ರನ ಘರ್ಜನೆ ಕೇಳಿಬರಲಿದೆ. ಶನಿವಾರ ಇಲ್ಲಿಗೆ ಎರಡು ಹುಲಿಮರಿಗಳ ಆಗಮನವಾಗುತ್ತಿದೆ.

ರಣತಂಬೋರ್ ಹುಲಿ ಉದ್ಯಾನವನದಿಂದ ಒಂದು ಹೆಣ್ಣು ಮತ್ತು ಇನ್ನೊಂದು ಗಂಡು ಹುಲಿಮರಿಗಳು ಇಲ್ಲಿಗೆ ಆಗಮಿಸಲಿವೆ, ಹವಾಮಾನ ಚೆನ್ನಾಗಿದ್ದು ಎಲ್ಲವೂ ಯೋಜನೆಯಂತೆ ನಡೆಯಲಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಕಾರ್ಯದರ್ಶಿ ರಾಜೇಶ್ ಗೋಪಾಲ್ ಹೇಳಿದ್ದಾರೆ.

"ನಾಳೆ ಒಣಹವಾಮಾನವಿದ್ದು ಹುಲಿಮರಿಗಳನ್ನು ಕರೆತರುವ ಹೆಲಿಕಾಫ್ಟರ್ ಯಾವುದೇ ತೊಂದರೆ ಇಲ್ಲದೆ ಇಳಿಯಬಹುದು" ಎಂಬುದಾಗಿ ಅವರು ಶುಕ್ರವಾರ ಹೇಳಿದ್ದಾರೆ.

ಈ ಎರಡೂ ಹುಲಿಮರಿಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಅವುಗಳ ಆಗಮನದ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು
ಜಮ್ಮು: ಅಮರನಾಥ ಯಾತ್ರೆ ಪುನಾರಂಭ
ಅಣುಒಪ್ಪಂದ ಕುರಿತ ಸೋನಿಯಾ ಸಭೆ
ಚೆನ್ನೈ, ಅಂಡಮಾನ್‌ನಲ್ಲಿ ಲಘು ಭೂಕಂಪ
ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿ ಆಗ್ರಹ
ಎಡಪಕ್ಷಗಳಿಗೆ ಮೊಯ್ಲಿ ತರಾಟೆ
ಮಾಣಿಕ್‌ಶಾ ಅಂತ್ಯಕ್ರಿಯೆಗೆ ಸಕಲ ಸರಕಾರಿ ಗೌರವ