ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆಗೆ ಸಜ್ಜಾಗಲು ಸೋನಿಯಾ ಕರೆ  Search similar articles
PTI
ಚುನಾವಣೆಯ ರಣಕಹಳೆ ಊದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಚುನಾವಣೆಗೆ ಸಜ್ಜಾಗುವಂತೆ ತನ್ನ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ಮೂಲಕ ಅಣು ಒಪ್ಪಂದದಲ್ಲಿ ಮುಂದುವರಿಯುವ ಸುಳಿವನ್ನೂ ನೀಡಿದ್ದಾರೆ.

ಪಕ್ಷದ ಹಿರಿಯ ನಾಯಕ ವೀರಪ್ಪ ಮೊಯ್ಲಿ ಸೋನಿಯಾ ಅವರ ಸಂದೇಶವನ್ನು ಪತ್ರಿಕಾಗೊಷ್ಠಿಯಲ್ಲಿ ಶನಿವಾರ ಘೋಷಿಸಿದರು.
ಕೇಂದ್ರದ 2008ನೆ ಸಾಲಿನ ಬಜೆಟ್‌ನಲ್ಲಿ ಹಣಕಾಸು ಸಚಿವ ಚಿದಂಬರಂ ಘೋಷಿಸಿರುವ 60 ಕೋಟಿ ರೂಪಾಯಿ ರೈತರ ಸಾಲಮನ್ನಾದಂತಹ ಪಕ್ಷದ ಸಾಧನೆಗಳನ್ನು ಜನತೆಗೆ ಮನದಟ್ಟು ಮಾಡುವಂತೆ ಸೋನಿಯಾ ಕಾಂಗ್ರೆಸ್ ನಾಯಕರಿಗೆ ನಿರ್ದೇಶನ ನೀಡಿದ್ದಾರೆ.

ಅವರು ಪಕ್ಷದ ಚುನಾವಣಾ ತಯಾರಿಯ ಪರಾಮರ್ಷೆ ನಡೆಸುತ್ತಿದ್ದು, ಇದರಲ್ಲಿ ಲೋಕಸಭಾ ಚುನಾವಣೆಯಲ್ಲದೆ, ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಳೂ ಸೇರಿವೆ.

ಸೋನಿಯಾ ಗಾಂಧಿಯವರ ಈ ಕರೆಯು, ಯುಪಿಎ ಸರಕಾರ ಅಣು ಒಪ್ಪಂದದಲ್ಲಿ ಮುಂದುವರಿಯುವ ಸೂಚನೆ ನೀಡಿದೆ. ಹಣದುಬ್ಬರ ರಾಕೆಟ್‌ನಂತೆ ಮೇಲುರುತ್ತಿರುವ ಈ ಸಂದರ್ಭದಲ್ಲಿ ಚುನಾವಣೆಯ ಅಪಾಯವನ್ನು ಎದುರಿಸಲು ಸಿದ್ಧರಾಗಿರುವ ಸೋನಿಯಾ, ಪ್ರಧಾನಿ ಮನಮೋಹನ್ ಸಿಂಗ್ ಅವರ ಪತ್ರಿಷ್ಠೆಯನ್ನು ಕಾಪಾಡಲು ಮುಂದಾಗಿದ್ದಾರೆ.

ಸೋನಿಯಾ ಅವರು ಶನಿವಾರ ನಡೆಸಿದ ಸಭೆಯ ಕಾರ್ಯಸೂಚಿಯಲ್ಲಿ ಅಣುಒಪ್ಪಂದ ಇರಲಿಲ್ಲ. ಇದೀಗಾಗಲೇ ಪಕ್ಷದ ಎರಡು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಣು ಒಪ್ಪಂದದ ವಿಷಯ ಚರ್ಚಿಸಲಾಗಿದ್ದು, ಇನ್ನಷ್ಟು ಚರ್ಚೆಯ ಅಗತ್ಯವಿಲ್ಲ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.
ಎಲ್ಲಾ ರಾಜ್ಯಗಳಲ್ಲೂ ಪಕ್ಷವನ್ನು ಪುನಶ್ಚೇತನಗೊಳಿಸಲು ಕಾರ್ಯತಂತ್ರ ರೂಪಿಸುವಂತೆ ಮತ್ತು ವೇಳಾನಿಗದಿತ ಯೋಜನೆಗಳನ್ನು ಹಮ್ಮಿಕೊಳ್ಳಲು ಸೋನಿಯಾ ಹಿರಿಯ ನಾಯಕರಿಗೆ ನಿರ್ದೇಶನ ನೀಡಿದ್ದಾರೆ.
ಮತ್ತಷ್ಟು
ಸಾರಿಸ್ಕಾದಲ್ಲಿ ಮತ್ತೊಮ್ಮೆ ಹುಲಿಗಳ ಘರ್ಜನೆ
ಜಮ್ಮು: ಅಮರನಾಥ ಯಾತ್ರೆ ಪುನಾರಂಭ
ಅಣುಒಪ್ಪಂದ ಕುರಿತ ಸೋನಿಯಾ ಸಭೆ
ಚೆನ್ನೈ, ಅಂಡಮಾನ್‌ನಲ್ಲಿ ಲಘು ಭೂಕಂಪ
ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿ ಆಗ್ರಹ
ಎಡಪಕ್ಷಗಳಿಗೆ ಮೊಯ್ಲಿ ತರಾಟೆ