ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಕೆ ಸರಕಾರದಿಂದ ಬೆಂಬಲ ಹಿಂಪಡೆದ ಪಿಡಿಪಿ  Search similar articles
ಅಮರನಾಥ ಮಂದಿರ ಭೂವಿವಾದಕ್ಕೆ ಸಂಬಂಧಿಸಿದಂತೆ, ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷ (ಪಿಡಿಪಿ)ವು ಶನಿವಾರ ಕಾಂಗ್ರೆಸ್ ನೇತೃತ್ವದ ಜಮ್ಮು ಕಾಶ್ಮೀರ ಸರಕಾರಕ್ಕೆ ನೀಡಿರುವ ಬೆಂಬಲ ವಾಪಾಸ್ ಪಡೆದಿದೆ.

ಇದರಿಂದಾಗಿ ಗುಲಾಂ ನಬಿ ಅಜಾದ್ ಸರಕಾರ ಬಹುಮತ ಕಳೆದುಕೊಂಡಿದೆ.

ಪಿಡಿಪಿ ಮುಖ್ಯಸ್ಥೆ ಮಹಬೂಬಾ ಮುಫ್ತಿ ಅವರು ಬೆಂಬಲ ಹಿಂಪಡೆದಿರುವ ವಿಚಾರವನ್ನು ಘೋಷಿಸಿದ್ದಾರೆ. "ನಾವು ಜನತೆಯ ಸ್ಥಿತಿಯ ಕುರಿತು ಭಾವಶೂನ್ಯವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಅಮರ್‌ನಾಥ ಮಂದಿರಕ್ಕೆ ಅರಣ್ಯಭೂಮಿ ನೀಡಿಕೆಯನ್ನು ಪ್ರತಿಭಟಿಸಿ ನಡೆಸುತ್ತಿರುವ ಪ್ರತಿಭಟನೆ ಆರನೆ ದಿನಕ್ಕೆ ತಲುಪಿದೆ. ಸರಕಾರವು ಬಿಕ್ಕಟ್ಟು ಶಮನಕ್ಕೆ ಯಾವುದೇ ಸಮಯೋಚಿತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮುಫ್ತಿ ದೂರಿದ್ದಾರೆ.

ಅಮರ್‌ನಾಥ ಮಂದಿರ ಮಂಡಳಿಗೆ ಅರಣ್ಯ ಭೂಮಿಯನ್ನು ನೀಡಲು ಕೈಗೊಂಡಿರುವ ನಿರ್ಧಾರವನ್ನು ಜೂನ್ 30ರೊಳಗೆ ಹಿಂಪಡೆಯದಿದ್ದರೆ, ಬೆಂಬಲ ಹಿಂತೆಗೆಯುವುದಾಗಿ ಪಿಡಿಪಿಯು ಈ ಹಿಂದೆಯೇ ಬೆದರಿಕೆ ಹಾಕಿತ್ತು.

ಪಿಡಿಪಿ ಶಾಸಕರು ಪಕ್ಷಾಧ್ಯಕ್ಷೆ ಮೆಹಬೂಬಾ ಮುಫ್ತಿಯವರ ನಿವಾಸದಲ್ಲಿ ಸಭೆ ಸೇರಲಿದ್ದಾರೆ. ಶನಿವಾರ ಲಂಡನ್‌ನಿಂದ ವಾಪಾಸ್ಸಾದ ಮುಫ್ತಿಯವರು ಉಪಮುಖ್ಯಮಂತ್ರಿ ಮುಝಾಫರ್ ಬೇಗ್ ಅವರನ್ನು ಭೇಟಿ ಮಾಡಿದರು.
ಮತ್ತಷ್ಟು
ಚುನಾವಣೆಗೆ ಸಜ್ಜಾಗಲು ಸೋನಿಯಾ ಕರೆ
ಸಾರಿಸ್ಕಾದಲ್ಲಿ ಮತ್ತೊಮ್ಮೆ ಹುಲಿಗಳ ಘರ್ಜನೆ
ಜಮ್ಮು: ಅಮರನಾಥ ಯಾತ್ರೆ ಪುನಾರಂಭ
ಅಣುಒಪ್ಪಂದ ಕುರಿತ ಸೋನಿಯಾ ಸಭೆ
ಚೆನ್ನೈ, ಅಂಡಮಾನ್‌ನಲ್ಲಿ ಲಘು ಭೂಕಂಪ
ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿ ಆಗ್ರಹ