ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೃಹಬಂಧನದಿಂದ ಗಿಲಾನಿ ಬಿಡುಗಡೆ  Search similar articles
ಗೃಬಂಧನಕ್ಕೀಡಾಗಿದ್ದ ಹುರಿಯತ್ ಕಾನ್ಫೆರೆನ್ಸ್‌ನ ಅಧ್ಯಕ್ಷ ಸಯ್ಯದ್ ಅಲಿ ಶಾ ಗಿಲಾನಿ ಅವರನ್ನು ನಾಲ್ಕು ದಿನಗಳ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಆಧಿಕೃತ ಮೂಲಗಳು ತಿಳಿಸಿವೆ.

ಹುರಿಯತ್ ಕಾನ್ಫೆರೆನ್ಸ್‌ನ ಬಾತ್ಮೀದಾರರಾದ ಅಯಾಜ್ ಅಕ್ಬರ್ ಅವರು, ಜೂನ್ 23ರ ಸಂಜೆಯಿಂದ ಹೈದರ್‌ಪೋರದಲ್ಲಿರುವ ಗಿಲಾನಿಯವರ ಮನೆಯ ಸುತ್ತಲೂ ನಿಯೋಜಿಸಲಾಗಿದ್ದ ಪೋಲಿಸ್ ಸಿಬ್ಬಂದಿಗಳನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ

ಅವರು ಅರಣ್ಯ ಭೂಮಿಯನ್ನು ಶ್ರಿ ಅಮರನಾಥ ಮಂದಿರ ಮಂಡಳಿಗೆ ವರ್ಗಾಯಿಸುವುದರ ವಿರುದ್ಧ ನಡೆಸುವ ಮೆರವಣಿಗೆಗಾರರ ಮುಂದಾಳತ್ವ ವಹಿಸದಂತೆ ತಡೆಯಲು ಗಿಲಾನಿ ಅವರನ್ನು ಗೃಹಬಂಧನದಲ್ಲಿರಿಸಲಾಗಿತ್ತು ಎಂದರು.

ಅವರು ಗಿಲಾನಿಯವರು ಈಗಾಗಲೇ ಜನರಲ್ಲಿ ಸರಕಾರಿ ಭೂಮಿಯ ವರ್ಗಾವಣೆಯ ವಿರುದ್ಧ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಕಳೆದ ಕೆಲವು ದಿನಗಳಿಂದ ಮುಷ್ಕರದ ಮುಂದುವರಿಕೆಯಿಂದ ತೊಂದರೆಗೀಡಾಗಿರುವ ಅಮರನಾಥ ಯಾತ್ರಿಗಳಿಗೆ ಊಟ ಮತ್ತು ವಸತಿಯನ್ನು ಒದಗಿಸಬೇಕೆಂದು ಕೂಡ ಹುರಿಯತ್ ಅಧ್ಯಕ್ಷರು ಕೇಳಿಕೊಂಡಿದ್ದಾರೆ

ಯಾತ್ರಿಗಳು ತಮ್ಮ ಅತಿಥಿಗಳು ಮತ್ತು ತಾವು ಯಾವುದೇ ಧರ್ಮ ಅಥವಾ ಯಾತ್ರೆಯ ವಿರೋಧಿಗಳಲ್ಲ ಎಂದು ಮನಗಾಣಿಸಲು ಅವರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಎಂದು ಗಿಲಾನಿ ಹೇಳಿದ್ದಾರೆ.
ಮತ್ತಷ್ಟು
ಅರುಷಿ ಮೊಬೈಲ್ ನಾಶಮಾಡಿದ ರಾಜ್‌ಕುಮಾರ್
ಜೆಕೆ ಸರಕಾರದಿಂದ ಬೆಂಬಲ ಹಿಂಪಡೆದ ಪಿಡಿಪಿ
ಚುನಾವಣೆಗೆ ಸಜ್ಜಾಗಲು ಸೋನಿಯಾ ಕರೆ
ಸಾರಿಸ್ಕಾದಲ್ಲಿ ಮತ್ತೊಮ್ಮೆ ಹುಲಿಗಳ ಘರ್ಜನೆ
ಜಮ್ಮು: ಅಮರನಾಥ ಯಾತ್ರೆ ಪುನಾರಂಭ
ಅಣುಒಪ್ಪಂದ ಕುರಿತ ಸೋನಿಯಾ ಸಭೆ