ಭಾರತ ಅಮೆರಿಕ ಅಣು ಒಪ್ಪಂದವನ್ನು ಮುಂದುವರಿಸಲು ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದ ನಂತರ ಯುಪಿಎ ಸರಕಾರದೊಂದಿಗಿನ ಎಡಪಕ್ಷದ ಸಂಬಂಧ ಒಡೆದುಹೋಗುವುದು ಸನ್ನಿಹಿತವಾಗುತ್ತಿರುವುದರೊಂದಿಗೆ, ಒಪ್ಪಂದವನ್ನು ವಿರೋಧಿಸುತ್ತಿರುವ ಸಿಪಿಐ-ಎಂ ಈ ಕುರಿತಾಗಿ ಚರ್ಚೆ ನಡೆಸಲು ರವಿವಾರ ದೆಹಲಿಯಲ್ಲಿ ತುರ್ತುಸಭೆ ಸೇರಲಿದೆ.
ಕಾಂಗ್ರೆಸ್ ಬೆಂಬಲಿತ ಮನಮೋಹನ್ ಸಿಂಗ್ ಅಣು ಒಪ್ಪಂದವನ್ನು ಮುಂದುವರಿಸಿದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸಿಪಿಐ-ಎಂ ಪೊಲಿಟ್‌ಬ್ಯೂರೋ ನಡೆಸುತ್ತಿರುವ ಏಕ ದಿನ ಸಭೆಯಲ್ಲಿ ಮಾತುಕತೆ ನಡೆಸಲಿವೆ.
ಪಕ್ಷದ ಮುಖ್ಯಸ್ಥರು ನೀಡುವ ನಿರ್ಧಾರಕ್ಕೆ ಪೊಲಿಟ್‌ಬ್ಯೂರೋ ಒಪ್ಪಿಗೆ ಸೂಚಿಸಲಿದ್ದು, ಇದರೊಂದಿಗೆ ಚುನಾವಣಾ ಸಿದ್ಧತೆಯ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಯಿದೆ.
ಏನೇ ಆದರೂ, ಪರಮಾಣು ಒಪ್ಪಂದವನ್ನು ಯುಪಿಎ ಸರಕಾರವು ಮುಂದುವರಿಸಿದರೆ, ಬೆಂಬಲವನ್ನು ಹಿಂತೆಗೆದುಕೊಳ್ಳುವು ದೃಢ ನಿರ್ಧಾರವನ್ನು ಸಿಪಿಎಂ ತೆಗೆದುಕೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಾಸ್ತವವಾಗಿ, ಮನಮೋಹನ್ ಸಿಂಗ್ ಅವರ ಒಪ್ಪಂದ ಮುಂದುವರಿಕೆಯು ಪ್ರಸಕ್ತ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಪ್ರಕಾಶ್ ಕಾರಟ್ ಅವರು ಶುಕ್ರವಾರ ತಿಳಿಸಿದ್ದರು.
|