ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಡ್ವಾಣಿಗೆ ಪ್ರಧಾನಮಂತ್ರಿಯಾಗುವ ಆತುರ: ಲಾಲೂ  Search similar articles
ಲೋಕಾಸಭಾ ಚುನಾವಣೆಗೆ ಬಿಜೆಪಿಯು ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿರುವ ಬೆನ್ನಲ್ಲೇ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಮೇಲೆ ಆರ್‌ಜೆಡಿ ಪಕ್ಷವು ತೀವ್ರ ವಾಗ್ದಾಳಿ ನಡೆಸಿದ್ದು, ಅಡ್ವಾಣಿ ಅವರು ಪ್ರಧಾನಮಂತ್ರಿಯಾಗಲು ಕಾತರರಾಗಿದ್ದಾರೆ ಎಂದು ಟೀಕಿಸಿದೆ.

ಕಾನ್ಫುರದಲ್ಲಿ ನಡೆದ ರ‌್ಯಾಲಿಯಲ್ಲಿ ಅಡ್ವಾಣಿ ಅವರು ಜಾತ್ಯಾತೀತದ ಮೂಲಕ್ಕೆ ಸವಾಲನ್ನೆಸೆದಿದ್ದು, ಅಧಿಕಾರ ಪಡೆದುಕೊಳ್ಳಲು ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಅಯೋಧ್ಯಾ ವಿವಾದವನ್ನು ಮೇಲಕ್ಕೆತ್ತುತ್ತಿರುವ ಬಗ್ಗೆ ಟೀಕಿಸಿದ ಲಾಲೂ, ಕೋಮುವಾದದ ರೋಗಾಣುವನ್ನು ಅಡ್ವಾಣಿಯವರು ದೇಶದೆಲ್ಲೆಡೆ ಪಸರಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಅಣುಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಸಕ್ತ ರಾಜಕೀಯ ಬೆಳವಣಿಗೆಯ ಫಲವಾಗಿ, ಆರ್‌ಜೆಡಿ ಪಕ್ಷದ ಭವಿಷ್ಯದ ನಿರ್ಧಾರಗಳ ಬಗ್ಗೆ ಮಾತುಕತೆ ನಡೆಸಲು ತನ್ನ ಪಕ್ಷದ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಲಾಲು ಪ್ರಸಾದ್, ಅಡ್ವಾಣಿ ರಾಮಮಂದಿರ ಸ್ಥಾಪನೆಯ ವಿವಾದವನ್ನು ಮರುಹುಟ್ಟುಹಾಕುತ್ತಿರುವ ಮೂಲಕ,ಹಸ್ತಿನಾಪುರದ ಸ್ಥಾನವನ್ನು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಲಾಲು ಆರೋಪಿಸಿದ್ದಾರೆ.

ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಗೊಳಿಸುವಂತೆ ಎನ್‌ಡಿಎ ಸರಕಾರದ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಅವರು ಶನಿವಾರ ಒತ್ತಾಯಿಸಿದ್ದರು.

ಭಾರತ್ ಮಾತಾ ದೇವಾಲಯ ನಿರ್ಮಿಸಬೇಕೆಂಬ ಅಡ್ವಾಣಿಯವರ ಸಲಹೆಯು ಪ್ರಧಾನಮಂತ್ರಿಯಾಗುವ ಅವರ ಕಾತರವನ್ನು ಪ್ರತಿಬಂಬಿಸುತ್ತದೆ ಎಂದ ಲಾಲೂ, ಅಡ್ವಾಣಿ ಅವರನ್ನು 'ವ್ಯಾಕುಲ್ ಭಾರತ್' ಎಂಬುದಾಗಿ ಟೀಕಿಸಿದ್ದಾರೆ.
ಮತ್ತಷ್ಟು
ಅಣು ಒಪ್ಪಂದ: ಇಂದು ಸಿಪಿಎಂ ಪೊಲಿಟ್‌ಬ್ಯೂರೋ ಸಭೆ
ಗೃಹಬಂಧನದಿಂದ ಗಿಲಾನಿ ಬಿಡುಗಡೆ
ಅರುಷಿ ಮೊಬೈಲ್ ನಾಶಮಾಡಿದ ರಾಜ್‌ಕುಮಾರ್
ಜೆಕೆ ಸರಕಾರದಿಂದ ಬೆಂಬಲ ಹಿಂಪಡೆದ ಪಿಡಿಪಿ
ಚುನಾವಣೆಗೆ ಸಜ್ಜಾಗಲು ಸೋನಿಯಾ ಕರೆ
ಸಾರಿಸ್ಕಾದಲ್ಲಿ ಮತ್ತೊಮ್ಮೆ ಹುಲಿಗಳ ಘರ್ಜನೆ