ಒರಿಸ್ಸಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಹಡೆಯ ಪೊಲೀಸರು ನಡೆಸುತ್ತಿದ್ದ ದೋಣಿಯ ಮೇಲೆ ಮಾವೋವಾದಿಗಳು ಗುಂಡುದಾಳಿ ನಡೆಸಿದ ಪರಿಣಾಮವಾಗಿ ಸುಮಾರು 36 ಪೊಲೀಸರು ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶಕ್ಕೆ ಸೇರಿದ ಸುಮಾರು 65 ಮಂದಿ ಭದ್ರತಾಸಿಬ್ಬಂದಿಗಳು ಮಾವೋವಾದಿಗಳ ಮೇಲೆ ಜಂಟಿ ಕಾರ್ಯಾಚರಣೆ ನಡೆಸಲು ಚಿರಾಕೊಂಡ ಎಂಬಲ್ಲಿಗೆ ಮೋಟಾರ್‌ಬೋಟ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೆಟ್ಟದ ಮೇಲೆ ಅವಿತಿದ್ದ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಸುಮಾರು 28ರಷ್ಟು ಮಂದಿ ಈಜಿ ದಡ ಸೇರಿದರೆ, ಅನೇಕರು ಕಾಣೆಯಾಗಿದ್ದಾರೆ. ಕಾಣೆಯಾದವರಿಗಾಗಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
|