ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭೂವಿವಾದ: ಜಮ್ಮು ಬಂದ್‌ಗೆ ಬಿಜೆಪಿ ಕರೆ  Search similar articles
ಅಮರನಾಥ ಮಂಡಳಿಗೆ 100 ಎಕರೆ ಅರಣ್ಯಭೂಮಿ ಬೇಡಿಕೆಯನ್ನು ಜಮ್ಮು ಕಾಶ್ಮೀರ ರಾಜ್ಯಪಾಲ ಹಾಗೂ ಮಂಡಳಿಯ ಅಧ್ಯಕ್ಷರೂ ಆಗಿರುವ ಎನ್.ಎನ್.ವೋರಾ ಅವರು ಹಿಂತೆಗೆದಿರುವುದನ್ನು, ಹಿಂದೂ ಬಾಹುಳ್ಯದ ಜಮ್ಮು ಪ್ರಾಂತ್ಯದ ವಿವಿಧ ರಾಜಕೀಯ ಪಕ್ಷಗಳು ಪ್ರಬಲವಾಗಿ ವಿರೋಧಿಸಿವೆ.

ಬಿಜೆಪಿಯು ಸೋಮವಾರ ಸಂಪೂರ್ಣ ಜಮ್ಮು ಬಂದ್‌ಗ ಕರೆ ನೀಡಿದೆ.

"ಈ ಪ್ರಕರಣಕ್ಕೆ ಕಾಂಗ್ರೆಸ್ ಮತ್ತು ಪಿಡಿಪಿ ಕೋಮು ಬಣ್ಣ ನೀಡಿದೆ. ಮತ್ತು ಇವರಿಗೆ ನ್ಯಾಶನಲ್ ಕಾನ್ಫರೆನ್ಸ್ ಬೆಂಬಲಿಸುತ್ತಿದೆ. ಇದರಿಂದಾಗಿ ಜಮ್ಮು ಜನತೆಯ ಭಾವನೆಗಳಿಗೆ ನೋವುಂಟಾಗಿದೆ" ಎಂದು ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ಆರ್.ಪಿ.ಸಿಂಗ್ ಹೇಳಿದ್ದಾರೆ.

ಜಮ್ಮುವಿನಲ್ಲಿ ನೆಲೆಕಾಣಲು ಪ್ರಯತ್ನಿಸುತ್ತಿರುವ ಬಿಎಸ್‌ಪಿ ಮತ್ತು, ಲೋಕಜನಶಕ್ತಿಗಳೂ ಸಹ ತಿರುಗಿಬಿದ್ದ ಸರಕರಾದ ಕ್ರಮವನ್ನು ಖಂಡಿಸಿವೆ.

2006ರ ತನಕದ ಸಂಯುಕ್ತ ಸರಕಾರದ ಅಂಗವಾಗಿದ್ದ ಪ್ಯಾಂಥರ್ಸ್ ಪಕ್ಷವೂ ಈ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡಲು ನಿರಾಕರಿಸಿದೆ.
ಮತ್ತಷ್ಟು
ಭೂ ಬೇಡಿಕೆ ಹಿಂಪಡೆದ ಅಮರನಾಥ ಮಂಡಳಿ
ನಕ್ಸಲ್ ದಾಳಿ: 30 ಪೊಲೀಸರ ಸಾವು
ಅಣು ಒಪ್ಪಂದಕ್ಕೆ ಬೆಂಬಲವಿಲ್ಲ: ಎಡಪಕ್ಷ ಸ್ಪಷ್ಟನೆ
ಅಡ್ವಾಣಿಗೆ ಪ್ರಧಾನಮಂತ್ರಿಯಾಗುವ ಆತುರ: ಲಾಲೂ
ಅಣು ಒಪ್ಪಂದ: ಇಂದು ಸಿಪಿಎಂ ಪೊಲಿಟ್‌ಬ್ಯೂರೋ ಸಭೆ
ಗೃಹಬಂಧನದಿಂದ ಗಿಲಾನಿ ಬಿಡುಗಡೆ