ಯುಪಿಎ ಸರಕಾರದಿಂದ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಭಾನುವಾರ ಎಡಪಕ್ಷಗಳು ಒಡ್ಡಿರುವ ಬೆದರಿಕೆಯ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರಧಾನಿ ಮನಮೋಹನ್ ಸಿಂಗ್ ಇದರಲ್ಲಿ 'ಹೊಸದೇನಿಲ್ಲ' ಎಂದು ಹೇಳಿದ್ದಾರೆ.
ಆದರೆ, ಅಣುಒಪ್ಪಂದ ಕಾರ್ಯಗತವಾಗುವ ದೃಢವಿಶ್ವಾಸ ಹೊಂದಿರುವ ಪ್ರಧಾನಿ ಎಲ್ಲಾ ವಿಚಾರಗಳನ್ನು ಸೂಕ್ತವಾಗಿ ನಿಭಾಯಿಸುವ ವ್ಯವಸ್ಥೆಯನ್ನು ಸರಕಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಭಾರತ-ಅಮೆರಿಕ ಅಣು ಒಪ್ಪಂದದ ಎಲ್ಲ ಹಂತಗಳಲ್ಲಿ ಪ್ರಾಧಿಕಾರವು ಮುಂದುವರಿಯುವಂತೆ ತಾನು ಇಚ್ಚಿಸುವುದಾಗಿ ಅವರು ನುಡಿದರು. ಇದಲ್ಲದೆ, ಒಪ್ಪಂದವನ್ನು ಕಾರ್ಯಗತಗೊಳಿಸುವ ಮುನ್ನ ಸರಕಾರವು ಸಂಸತ್ತಿಗೆ ಈ ವಿಚಾರವನ್ನು ತರುವುದಾಗಿ ಅವರು ನುಡಿದರು. ಅಲ್ಲದೆ ಒಪ್ಪಂದವು ಕಾರ್ಯಗತವಾಗುವ ಮುನ್ನ ಸಂಸತ್ತನ್ನು ಎದುರಿಸಲು ತಾನು ಸಿದ್ಧವಿರುವುದಾಗಿ ನುಡಿದರು.
ಈ ಒಪ್ಪಂದದಲ್ಲಿ ಅಗಾಧವಾದ ರಾಷ್ಟ್ರ ಹಿತಾಸಕ್ತಿ ಅಡಗಿದೆ ಎಂದು ನುಡಿದ ಪ್ರಧಾನಿ ಸದನದಲ್ಲಿ ಮತ್ತೆ ಈ ವಿಚಾರದ ಕುರಿತು ಚರ್ಚಿಸುವುದಾಗಿ ನುಡಿದರು.
ಭಾನುವಾರ ಎಡಪಕ್ಷಗಳು ಬೆಂಬಲ ಹಿಂತೆಗೆಯುವ ಬೆದರಿಕೆ ಹಾಕಿದ್ದು, ಈ ಕುರಿತು ಪ್ರಧಾನಿಯವರು ಸೋಮವಾರ ನೀಡಿರುವ ಸ್ಪಷ್ಟನೆಯು, ಸರಕಾರ ಅಣು ಒಪ್ಪಂದದಲ್ಲಿ ಮುಂದುವರಿಯುವ ಸುಳಿವು ನೀಡಿದೆ. ಈ ಒಪ್ಪಂದವು ಕಾರ್ಯಗತವಾದಲ್ಲಿ ಇದು ಪ್ರಧಾನಿ ಸಿಂಗ್ ಅವರ ಪ್ರಮುಖ ರಾಜತಾಂತ್ರಿಕ ಸಾಧನೆಯಾಗುತ್ತದೆ.
|