ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಡೆಹಿಡಿಲ್ಪಟ್ಟಿದ್ದ ಅಮರನಾಥ ಯಾತ್ರೆ ಪುನಾರಂಭ  Search similar articles
ಪ್ರತಿಕೂಲ ಹವಾಮಾನದಿಂದ ಒಂದು ದಿನದವರೆಗೆ ತಡೆಹಿಡಿಯಲ್ಪಟ್ಟಿದ್ದ ಅಮರನಾಥ ಯಾತ್ರೆ ಪುನಾರಂಭಗೊಂಡಿದೆ. ಬಿಗಿ ಭದ್ರತೆಯ ನಡುವೆ 3531 ಯಾತ್ರಾರ್ಥಿಗಳ ಹೊಸ ತಂಡ ಶಿಬಿರದಿಂದ ಪವಿತ್ರ ಗುಹಾ ದೇವಾಲಯಕ್ಕೆ ಹೊರಟಿದೆ.

70 ಮಕ್ಕಳು, 619 ಮಹಿಳೆಯರನ್ನೊಳಗೊಂಡಿದ್ದ ಭಕ್ತಾದಿಗಳ ತಂಡ ಭಗವತಿ ನಗರದ ಶಿಬಿರದಿಂದ ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ದೇವಾಲಯಕ್ಕೆ ಮುಂಜಾನೆ 5.30ರ ವೇಳೆಗೆ ಹೊರಟಿದೆ ಎಂದು ಪೋಲಿಸರು ತಿಳಿಸಿದರು.

ಯಾತ್ರಾರ್ಥಿಗಳನ್ನು ಹೊತ್ತಿದ್ದ ವಾಹನಗಳು ಸಿಎರ್‌ಪಿಎಫ್ ಸಿಬ್ಬಂದಿಗಳ ಬೆಂಗಾವಲಿನೊಂದಿಗೆ ಮುಂದೆ ಸಾಗಿದವು, ಎಂದು ಅವರು ಹೇಳಿದರು.

ದೇವಾಲಯದತ್ತ ಸಾಗುವ ದಾರಿಗಳಲ್ಲಿ ಪ್ರತಿಕೂಲ ಹವಾಮಾನ ಹಾಗು ಭಾರಿ ಮಳೆಯಿಂದಾಗಿ ನಿನ್ನೆ ಯಾತ್ರೆಯನ್ನು ಕೈ ಬಿಡಲಾಗಿತ್ತು.

ಜೂನ್ 17ರಿಂದ ಮೊದಲ್ಗೊಂಡ ಯಾತ್ರೆಗೆ ಇದುವರೆಗೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ 30,593 ಯಾತ್ರಾರ್ಥಿಗಳು ಅಮರನಾಥ ದೇವಾಲಯಕ್ಕೆ ಜಮ್ಮುವಿನ ಶಿಬಿರದಿಂದ ತೆರಳಿದ್ದಾರೆ.

ಸುಮಾರು 3,78,987 ಯಾತ್ರಾರ್ಥಿಗಳು ಲಿಡ್ಡರ್ ಕಣಿವೆಯ ಗುಹಾದೇವಾಲಯದಲ್ಲಿರುವ 'ಹಿಮ ಲಿಂಗ'ಕ್ಕೆ ಪ್ರಾರ್ಥನೆ ಅರ್ಪಿಸಿದ್ದಾರೆ.




ಮತ್ತಷ್ಟು
ಎಡಪಕ್ಷಗಳ ಬೆದರಿಕೆ ಹೊಸದೇನಲ್ಲ: ಪ್ರಧಾನಿ
ಅಕ್ಕಿ ರಪ್ತು ನಿಷೇಧ: ಕೇಂದ್ರದಿಂದ ಸು.ಕೋಗೆ ಅರ್ಜಿ
ಬಿಪಿಎಲ್ ಕುಟುಂಬಿಕರು ನೀಡಿದ ಲಂಚ 900 ಕೋಟಿ ರೂ.!
ಭೂವಿವಾದ: ಜಮ್ಮು ಬಂದ್‌ಗೆ ಬಿಜೆಪಿ ಕರೆ
ಭೂ ಬೇಡಿಕೆ ಹಿಂಪಡೆದ ಅಮರನಾಥ ಮಂಡಳಿ
ನಕ್ಸಲ್ ದಾಳಿ: 30 ಪೊಲೀಸರ ಸಾವು