ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು-ಕಾಶ್ಮೀರ: ಬಹುಮತ ಸಾಬೀತಿಗೆ ತಾಕೀತು  Search similar articles
ಪಿಡಿಪಿ ಪಕ್ಷವು ಬೆಂಬಲ ಹಿಂತೆಗೆದುಕೊಂಡಿರುವ ಕಾರಣ ಬಿಕ್ಕಟ್ಟಿಗೆ ಸಿಲುಕಿರುವ ಜಮ್ಮು ಕಾಶ್ಮೀರ ಸರಕಾರ ಜುಲೈ 7ರೊಳಗೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್‌ಗೆ ಮುಖ್ಯಮಂತ್ರಿ ರಾಜ್ಯಪಾಲ ಎನ್.ಎನ್.ವೋರಾ ತಿಳಿಸಿದ್ದಾರೆ.

ಅಮರನಾಥ್ ಮಂದಿರ ಮಂಡಳಿಗೆ ಅರಣ್ಯಭೂಮಿ ನೀಡಿರುವುದನ್ನು ವಿರೋಧಿಸಿ, ಆಡಳಿತರೂಢ ಕಾಂಗ್ರೆಸ್ ಪಕ್ಷದ ಮೈತ್ರಿಕೂಟಕ್ಕೆ ನೀಡಿದ ಬೆಂಬಲವನ್ನು ಪಿಡಿಪಿ ಹಿಂಪಡೆದಿದೆ.

ಮುಖ್ಯಮಂತ್ರಿ ಆಜಾದ್ ಅವರು, ತಾನು ಅಸೆಂಬ್ಲಿಯಲ್ಲಿ ಯಾವ ಸಮಯದಲ್ಲೂ ಬಹುಮತ ಸಾಬೀತುಪಡಿಸಲು ಸಿದ್ಧವಿರುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಆಡಳಿತರೂಢ ಕಾಂಗ್ರೆಸ್ ಮೈತ್ರಿಕೂಟದ ಸರಕಾರದಿಂದ ಪಿಡಿಪಿ ಹೊರಬಂದ ಪರಿಣಾಮ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದೆ.

87 ಸದಸ್ಯ ಬಲಹೊಂದಿರುವ ಜಮ್ಮು-ಕಾಶ್ಮೀರ ಅಸೆಂಬ್ಲಿಯಲ್ಲಿ ಪಿಡಿಪಿ 18ಸದಸ್ಯರನ್ನು ಹೊಂದಿದೆ. ಆದರೆ ಕಾಂಗ್ರೆಸ್ 21ಸದಸ್ಯ ಬಲಹೊಂದಿದ್ದು, ಇಬ್ಬರು ಸಿಪಿಎಂ ಶಾಸಕರು ಹಾಗೂ ಎಂಟು ಮಂದಿ ಪಕ್ಷೇತರರ ಬೆಂಬಲದೊಂದಿಗೆ ಬಹುಮತ ಸಾಬೀ ತುಪಡಿಸುವುದಾಗಿ ಆಜಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಪಿಎಂ ಹೇಳಿಕೆಯಲ್ಲೂ ಹೊಸದೇನಿಲ್ಲ: ಸಿಪಿಐ-ಎಂ ತಿರುಗೇಟು
ತಡೆಹಿಡಿಲ್ಪಟ್ಟಿದ್ದ ಅಮರನಾಥ ಯಾತ್ರೆ ಪುನಾರಂಭ
ಎಡಪಕ್ಷಗಳ ಬೆದರಿಕೆ ಹೊಸದೇನಲ್ಲ: ಪ್ರಧಾನಿ
ಅಕ್ಕಿ ರಪ್ತು ನಿಷೇಧ: ಕೇಂದ್ರದಿಂದ ಸು.ಕೋಗೆ ಅರ್ಜಿ
ಬಿಪಿಎಲ್ ಕುಟುಂಬಿಕರು ನೀಡಿದ ಲಂಚ 900 ಕೋಟಿ ರೂ.!
ಭೂವಿವಾದ: ಜಮ್ಮು ಬಂದ್‌ಗೆ ಬಿಜೆಪಿ ಕರೆ