ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಷಧಾರೆಯಿಂದ ಮುಂಬಯಿ ತತ್ತರ  Search similar articles
PTI
ಮುಂಬಯಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವು ಭಾಗಗಳಲ್ಲಿ ಹಾಗು ಹೊರವಲಯಗಳಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಇದರಿಂದ ರಸ್ತೆ, ರೈಲು ಮತ್ತು ವಿಮಾನ ಸೇವೆಗಳಲ್ಲಿ ವ್ಯತ್ಯಯವಾಗಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸ್ಥಳೀಯ ಹವಾಮಾನ ಇಲಾಖೆಯ ಪ್ರಕಾರ ದಕ್ಷಿಣ ಮುಂಬಯಿಯ ಕೊಲಬದಲ್ಲಿ ಅತ್ಯಧಿಕ 200ಮಿಮಿ ಮಳೆ ದಾಖಲಾಗಿದ್ದರೆ, ಸಾಂತಾಕ್ರೂಜ್‌ನಲ್ಲಿ 142.9ಮಿಮಿ ಮಳೆ ದಾಖಲಾಗಿದೆ.

ಬಾಂದ್ರ, ಸಿಯಾನ್, ಚೆಂಬೂರ್, ಘಾಟ್ಕೊಪರ್, ಅಂಧೇರಿ ಮತ್ತು ಹಲವಾರು ಕೆಳ ಪ್ರದೇಶಗಳಲ್ಲಿ ಸುಮಾರು ಒಂದೂವರೆ ಅಡಿಗಳಷ್ಟು ನೀರು ತುಂಬಿದೆ. ಮುಂಬೈ- ಪೂನಾ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು ವಾಹನ ಸಾಗಟಕ್ಕೆ ಅಡ್ಡಿಯುಂಟಾಗಿದೆ.

ಮುಸಲಧಾರೆಯಿಂದಾಗಿ ರೈಲು ಸೇವೆಗೆ ಭಾರೀ ಅಡಚಣೆಯುಂಟಾಗಿದ್ದು, ಸಂಪೂರ್ಣ ಸ್ಥಗಿತಗೊಂಡಿದೆ. ಕುರ್ಲಾ ವಿದ್ಯಾವಿಹಾರ ಪ್ರದೇಶಗಳು ಜಲಾವೃತವಾಗಿರುವ ಕಾರಣ ಕೇಂದ್ರೀಯ ರೈಲು ಸೇವೆಗೆ ಅಡಚಣೆಯಾಗಿದೆ. ಅದಾಗ್ಯೂ, ಪಶ್ಚಿಮ ಮತ್ತು ಹಾರ್ಬರ್ ಲೈನುಗಳಲ್ಲಿ ರೈಲುಗಳು 15ರಿಂದ 20 ನಿಮಿಷ ತಡವಾಗಿ ಸಾಗುತ್ತಿದೆ ಎಂದು ರೈಲ್ವೇ ಮೂಲಗಳು ಹೇಳಿವೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಟದಲ್ಲಿ ವಿಳಂಬ ಉಂಟಾಗಿದೆ. ಮುಂಬೈಯು ಮಳೆಯ ತೊಂದರೆಗೆ ಸಿಲುಕುತ್ತಿರುವುದು ಈ ವರ್ಷದಲ್ಲಿ ಇದು ಎರಡನೆಯ ಬಾರಿಯಾಗಿದೆ.

ಕಳೆದ ವರ್ಷವೂ ಭಾರೀ ಜಲಧಾರೆಯಿಂದಾಗಿ ಮುಂಬೈ ನಗರ ಅಸ್ತವ್ಯಸ್ತಗೊಂಡಿದ್ದು ಸಾವುನೋವುಗಳು ಸಂಭವಿಸಿದ್ದವು.
ಮತ್ತಷ್ಟು
ಅಣು ಒಪ್ಪಂದ: ಪ್ರಣಬ್-ಅಮರ್ ಸಿಂಗ್ ಭೇಟಿ
ಜಮ್ಮು-ಕಾಶ್ಮೀರ: ಬಹುಮತ ಸಾಬೀತಿಗೆ ತಾಕೀತು
ಪಿಎಂ ಹೇಳಿಕೆಯಲ್ಲೂ ಹೊಸದೇನಿಲ್ಲ: ಸಿಪಿಐ-ಎಂ ತಿರುಗೇಟು
ತಡೆಹಿಡಿಲ್ಪಟ್ಟಿದ್ದ ಅಮರನಾಥ ಯಾತ್ರೆ ಪುನಾರಂಭ
ಎಡಪಕ್ಷಗಳ ಬೆದರಿಕೆ ಹೊಸದೇನಲ್ಲ: ಪ್ರಧಾನಿ
ಅಕ್ಕಿ ರಪ್ತು ನಿಷೇಧ: ಕೇಂದ್ರದಿಂದ ಸು.ಕೋಗೆ ಅರ್ಜಿ