ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು ಉದ್ವಿಗ್ನ: ಗೋಲಿಬಾರ್, ಸೆಕ್ಷನ್ ಜಾರಿ  Search similar articles
ಅಮರನಾಥ ಮಂದಿರ ಭೂವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದಲ್ಲಿ ನಡೆಸುತ್ತಿರುವ ಮುಷ್ಕರ ತೀವ್ರಗೊಂಡಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಗುಂಡುಹಾರಾಟ ನಡೆದಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ. ಈ ಪ್ರಾಂತ್ಯವು ಸತತ ಎಂಟು ದಿನಗಳಿಂದ ಪ್ರತಿಭಟನೆಯನ್ನು ಕಾಣುತ್ತಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.

ಏತನ್ಮಧ್ಯೆ ಪ್ರತಿಭಟನೆ ನಡೆಸುತ್ತಿರುವವರೊಂದಿಗೆ ಟ್ಯಾಂಕರ್ ಸಂಘಟನೆಗಳೂ ಸೇರಿದ್ದು, ಅವರು ರಾಜ್ಯಕ್ಕೆ ಮುಂದಿನ ಎರಡು ದಿನಗಳ ಕಾಲ ಇಂಧನ ಪೂರೈಸುವುದಿಲ್ಲ ಎಂಬ ಬೆದರಿಕೆ ಹಾಕಿದ್ದಾರೆ.

ಬಿಜೆಪಿ-ಶಿವಸೇನಾ ಪ್ರಾಯೋಜಿತ ಪ್ರತಿಭಟನಾಕಾರರು ಜಮ್ಮು ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋರಾ ಅವರನ್ನು ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

144 ಸೆಕ್ಷನ್ ಜಾರಿ
ಏತನ್ಮಧ್ಯೆ, ಪರಿಸ್ಥಿತಿಯು ಕೈ ಮೀರುತ್ತಿರುವುದರಿಂದ ಜಮ್ಮುವಿನಲ್ಲಿ ಸೆಕ್ಷನ್ 144 ಜಾರಿಮಾಡಲಾಗಿದೆ. ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಾರೆ. ಹಿಂಸಾಚಾರದ ಪ್ರತಿಭಟನೆಯ ಹಿನ್ನೆಲೆಯಲ್ಲಿ 11 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ಯಾತ್ರಿಕರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ, ಅಮರನಾಥ ಮಂದಿರ ಮಂಡಳಿಗೆ ಅರಣ್ಯಭೂಮಿ ಹಸ್ತಾಂತರ ಪ್ರಸ್ತಾಪವನ್ನು ಹಿಂತೆಗೆದುಕೊಂಡಿರುವುದನ್ನು ವಿರೋಧಿಸಿ ಮತ್ತು ಮಂಡಳಿಯ ವಿದ್ಯಮಾನಗಳ ಉಸ್ತುವಾರಿಯನ್ನು ಸರಕಾರಕ್ಕೆ ವರ್ಗಾಯಿಸುವ ವೋರಾ ಅವರ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಕಳೆದ ವಾರ ಪೂರ್ತಿ ಅಮರನಾಥ ಮಂದಿರ ಮಂಡಳಿಗೆ ಭೂಮಿ ಹಸ್ತಾಂತರ ವಿರೋಧಿಸಿ ಪಿಡಿಪಿ ಮತ್ತಿತರ ಪಕ್ಷಗಳು ಚಳುವಳಿ ನಡೆಸಿದ್ದು, ಈ ಒತ್ತಾಯಕ್ಕೆ ಮಣಿದು ಭೂಹಸ್ತಾಂತರ ವಿಚಾರ ಕೈ ಬಿಡಲಾಗಿತ್ತು. ಇದನ್ನು ವಿರೋಧಿಸಿ ಪ್ರಸ್ತುತ ಪ್ರತಿಭಟನೆ ನಡೆಯುತ್ತಿದೆ.
ಮತ್ತಷ್ಟು
ವರ್ಷಧಾರೆಯಿಂದ ಮುಂಬಯಿ ತತ್ತರ
ಅಣು ಒಪ್ಪಂದ: ಪ್ರಣಬ್-ಅಮರ್ ಸಿಂಗ್ ಭೇಟಿ
ಜಮ್ಮು-ಕಾಶ್ಮೀರ: ಬಹುಮತ ಸಾಬೀತಿಗೆ ತಾಕೀತು
ಪಿಎಂ ಹೇಳಿಕೆಯಲ್ಲೂ ಹೊಸದೇನಿಲ್ಲ: ಸಿಪಿಐ-ಎಂ ತಿರುಗೇಟು
ತಡೆಹಿಡಿಲ್ಪಟ್ಟಿದ್ದ ಅಮರನಾಥ ಯಾತ್ರೆ ಪುನಾರಂಭ
ಎಡಪಕ್ಷಗಳ ಬೆದರಿಕೆ ಹೊಸದೇನಲ್ಲ: ಪ್ರಧಾನಿ