ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಧ್ಯಸ್ಥಿಕೆಗೆ ಮುಂದಾದ ಅಮರ್ ಸಿಂಗ್  Search similar articles
PTI
ಭಾರತ-ಅಮೆರಿಕ ಅಣುಒಪ್ಪಂದಕ್ಕೆ ಸಂಬಂಧಿಸಿದಂತೆ, ಸಮಾಜವಾದಿ ಪಕ್ಷದ ಅಮರ್ ಸಿಂಗ್ ಅವರು ಎಡಪಕ್ಷಗಳು ಮತ್ತು ಕಾಂಗ್ರೆಸ್ ನಡುವಣ ಸಂಧಾನ ಪ್ರಕ್ರಿಯೆಗೆ ಮುಂದಾಗಿದ್ದಾರೆ.

ಸೋಮವಾರ ರಾತ್ರಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರನ್ನು ಭೇಟಿಮಾಡಿದ್ದ ಅಮರ್ ಸಿಂಗ್ ಮಂಗಳವಾರ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರನ್ನು ಭೇಟಿಮಾಡಿದ್ದಾರೆ.

ಅವರು ಬುಧವಾರ ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣ್ ಅವರನ್ನು ಭೇಟಿಯಾಗಲಿದ್ದಾರೆ. ತಾನು ಬುಧವಾರ ನಾರಾಯಣನ್ ಅವರನ್ನು ಭೇಟಿಯಾಗಿರುವುದಾಗಿ ಹೇಳಿರುವ ಸಿಂಗ್, ಒಪ್ಪಂದದಲ್ಲಿ ಹೊಸ ಅಂಶಗಳು ಲಭ್ಯವಾದಲ್ಲಿ ಒಪ್ಪಂದವನ್ನು ಪರಿಗಣಿಸುವುದಾಗಿ ಹೇಳಿದ್ದಾರೆ.

ಸಮಾಜವಾದಿ ಪಕ್ಷಕ್ಕೆ ರಾಜಕೀಯ ವಿರೋಧಿಗಳಿಲ್ಲ
ಏತನ್ಮಧ್ಯೆ, ಕಾಂಗ್ರೆಸ್‌ಗೆ ಮತ್ತಷ್ಟು ನಿಕಟವಾಗುವ ಸುಳಿವು ನೀಡಿರುವ ಸಮಾಜವಾದಿ ಪಕ್ಷದ ಇನ್ನೋರ್ವ ಮುಖಂಡ ಮುಲಾಯಂ ಸಿಂಗ್ ಯಾದವ್ ತಮ್ಮ ಪಕ್ಷಕ್ಕೆ ರಾಜಕೀಯ ವಿರೋಧಿಗಳಿಲ್ಲ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷವು ಎಂ.ಕೆ.ನಾರಾಯಣನ್ ಅರನ್ನು ಭೇಟಿಯಾಗಲಿದ್ದು, ಈ ವೇಳೆ ಅವರು ಒಪ್ಪಂದ ಕುರಿತು ಪಕ್ಷಕ್ಕೆ ವಿವರಣೆ ನೀಡಲಿದ್ದಾರೆ.

ಈ ವಿದ್ಯಮಾನದಿಂದಾಗಿ ಎಡಪಕ್ಷಗಳು ಬೆಂಬಲ ಹಿಂಪಡೆದರೂ ಯುಪಿಎ ಅಣುಒಪ್ಪಂದದಲ್ಲಿ ಮುಂದುವರಿಯಲು ದಾರಿ ಸರಾಗವಾದಂತಾಗಿದೆ.
ಮತ್ತಷ್ಟು
ಜಮ್ಮು: ಭೂಮಿ ಹಸ್ತಾಂತರ ಆದೇಶ ರದ್ದು
ಜಮ್ಮು ಉದ್ವಿಗ್ನ: ಗೋಲಿಬಾರ್, ಸೆಕ್ಷನ್ ಜಾರಿ
ವರ್ಷಧಾರೆಯಿಂದ ಮುಂಬಯಿ ತತ್ತರ
ಅಣು ಒಪ್ಪಂದ: ಪ್ರಣಬ್-ಅಮರ್ ಸಿಂಗ್ ಭೇಟಿ
ಜಮ್ಮು-ಕಾಶ್ಮೀರ: ಬಹುಮತ ಸಾಬೀತಿಗೆ ತಾಕೀತು
ಪಿಎಂ ಹೇಳಿಕೆಯಲ್ಲೂ ಹೊಸದೇನಿಲ್ಲ: ಸಿಪಿಐ-ಎಂ ತಿರುಗೇಟು