ಜಮ್ಮು: ಸತತ ನಾಲ್ಕು ದಿನಗಳಿಂದ ಪ್ರತಿಭಟನೆ ಕಾಣುತ್ತಿರುವ ಜಮ್ಮುವಿನಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ನಗರದ ಕೆಲವು ಭಾಗಗಳಲ್ಲಿ ಮಂಗಳವಾರ ಹೇರಲಾಗಿರುವ ಕರ್ಫ್ಯೂ ಬುಧವಾರವೂ ಮುಂದುವರಿದಿದೆ.
ಆದರೆ, ವೈಷ್ಣವ ದೇವಿ ಯಾತ್ರಿಕರು ಇದರಿಂದ ಸಮಸ್ಯೆ ಎದರಿಸಲಾರರು ಎಂದು ಹೇಳಿರುವ ಅಧಿಕಾರಿಗಳು ಅವರ ರೈಲ್ವೇ ಮತ್ತು ಬಸ್ ಟಿಕೆಟ್‌ಗಳನ್ನು ಕರ್ಫ್ಯೂ ಪಾಸ್‌ಗಳೆಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಎಲ್ಲಾ ಶಾಲಾಕಾಲೇಜುಗಳನ್ನು ಮುಚ್ಚಲಾಗಿದೆ. ಅವಶ್ಯ ಸೇವೆಗಳಿಗೆ ಯಾವುದೇ ಬಾಧೆ ಇಲ್ಲ ಮತ್ತು ಸರಕಾರಿ ನೌಕರರಿಗೆ ಪ್ರಯಾಣಕ್ಕೆ ಅನುವು ನೀಡಲಾಗಿದೆ.
ಮುತ್ತಿ ಎಂಬಲ್ಲಿ ಗುಂಪು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದು, ಅಲ್ಲಿ ಮಂಗಳವಾರದಿಂದ ಕರ್ಫ್ಯೂ ಜಾರಿಮಾಡಲಾಗಿದೆ.
ಬಿಜೆಪಿ ಮುಷ್ಕರ ಮುಂದರಿಕೆ ವಿವಾದಿತ ಭೂಮಿಯನ್ನು ಅಮರನಾಥ್ ಮಂದಿರ ಮಂಡಳಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ಮತ್ತು ಸಮಾನ ಮನಸ್ಕ ಪಕ್ಷಗಳು ತಮ್ಮ ಚಳುವಳಿ ಮುಂದುವರಿಸಿವೆ.
ಏತನ್ಮಧ್ಯೆ, ಶಾಂತಿ ಕಾಪಾಡುವಂತೆ ಸರಕಾರವು ಕರೆ ನೀಡಿದೆ.
|