ಎಡಪಕ್ಷಗಳು ಯುಪಿಎ ಸರಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಂಡಿದ್ದೇ ಆದಲ್ಲಿ, ಲೋಕಸಭೆ ಅಧ್ಯಕ್ಷ ಸೋಮನಾಥ ಚಟರ್ಜಿಅವರನ್ನು ಸ್ಪೀಕರ್ ಹುದ್ದೆಯಿಂದ ಕೆಳಗಿಳಿಸುವ ಕುರಿತು ಎಡಪಕ್ಷಗಳು ಚಿಂತನೆ ನಡೆಸಿವೆ ಎನ್ನಲಾಗಿದೆ. ಭಾರತ ಅಮೆರಿಕ ಅಣು ಒಪ್ಪಂದದ ಕುರಿತು ಅಂತಿಮ ನಿಲುವನ್ನು ಸ್ಪಷ್ಟಪಡಿಸುವಂತೆ ಮೂರು ಎಡಪಕ್ಷಗಳು ಶುಕ್ರವಾರ ಸರಕಾರದಿಂದ ಸ್ಪಷ್ಟನೆ ಕೇಳಲಿದ್ದಾರೆ.
ಒಂದೊಮ್ಮೆ ಅಣುಒಪ್ಪಂದದಲ್ಲಿ ಯುಪಿಎ ಸರಕಾರ ಮುಂದುವರಿದುದೇ ಆದರೆ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಬೆಂಬಲ ಹಿಂತೆಗೆದುಕೊಳ್ಳಲು ಎಡಪಕ್ಷಗಲು ನಿರ್ಧರಿಸಿವೆ. ಯುಪಿಎನಲ್ಲಿ ಸಿಪಿಎಂ ನೇತೃತ್ವದ 59 ಎಡಪಕ್ಷಗಳ ಸದಸ್ಯರಿದ್ದಾರೆ. ಚಟರ್ಜಿ ಬೆಂಬಲಿತ ಪಕ್ಷದ ಪ್ರತಿನಿಧಿಯಾಗಿ ಲೋಕಸಭೆ ಅಧ್ಯಕ್ಷರಾಗಿದ್ದಾರೆ.
ಆದರೆ ಬೆಂಬಲ ಹಿಂತೆಗೆದುಕೊಂಡ ಬಳಿಕ, ಪಕ್ಷದ ಸದಸ್ಯ ಚಟರ್ಜಿ ಸ್ಪೀಕರ್ ಆಗಿ ಮುಂದುವರಿಯುವುದು ಸೂಕ್ತವಲ್ಲ ಎನ್ನುವುದು ಸಿಪಿಎಂ ಭಾವನೆಯಾಗಿದೆ. ಒಂದೊಮ್ಮೆ ಸ್ಪೀಕರ್ ಅವರನ್ನು ಹಿಂಪಡೆದರೆ, ಇತರೆ ಪಕ್ಷಗಳ ಬೆಂಬದೊಂದಿಗೆ ಯುಪಿಎ ಸರಕಾರ ಅಧಿಕಾರದಲ್ಲಿ ಮುಂದುವರಿದರೆ, ಸರಾಕರ ಹೊಸ ಸ್ಪೀಕರನ್ನು ಆಯ್ಕೆ ಮಾಡುವ ಅನಿವಾರ್ಯತೆಗೆ ಸಿಲುಕಲಿದೆ.
|