ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ-ಪರಮಾಣು ಸಾರ್ವಭೌಮತೆಗೆ ಧಕ್ಕೆ ಇಲ್ಲ: ಪಿಎಂ  Search similar articles
ಭಾರತ ಅಮೆರಿಕ ಪರಮಾಣು ಒಪ್ಪಂದದ ಕುರಿತಾಗಿ ಸ್ಪಷ್ಟವಾಗಿ ದೇಶಕ್ಕೆ ವಿವರಿಸುವಂತೆ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿರುವ ಬೆನ್ನಲ್ಲೇ, ಅಣು ಒಪ್ಪಂದದಿಂದ ದೇಶದ ಪರಮಾಣು ಸಾರ್ವಭೌಮತೆಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಪ್ರಧಾನ ಮಂತ್ರಿ ಸ್ಪಷ್ಟಪಡಿಸಿದ್ದು, ಈ ಮೂಲಕ ಅಣುಒಪ್ಪಂದದ ಮೇಲೆ ಎಡಪಕ್ಷ ಹಾಗೂ ಇತರ ಪಕ್ಷಗಳಿಗಿರುವ ಆತಂಕವನ್ನು ದೂರ ಮಾಡುವ ನಿರೀಕ್ಷೆಯನ್ನು ಯುಪಿಎ ಸರಕಾರವು ಹೊಂದಿದೆ.

ರಾಷ್ಟ್ರೀಯ ರಕ್ಷಣಾ ಸಲಹಾಗಾರ ಎಂ.ಕೆ.ನಾರಾಯಣ್ ಮತ್ತು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಕಳೆದ ಸಂಜೆ ಅಮರ್ ಸಿಂಗ್ ಅವರು ಮಾತುಕತೆ ನಡೆಸಿದ ನಂತರ ಅಮೆರಿಕದೊಂದಿಗಿನ ಅಣು ಒಪ್ಪಂದವು ಭಾರತದ ದೇಶೀಯ ಮತ್ತು ವಿದೇಶಿ ನೀತಿ ಸ್ವಾತಂತ್ರ್ಯದ ಮೇಲೆ ಪರಿಣಾಮ ಉಂಟುಮಾಡುತ್ತದೆಯೇ ಎಂಬುದಾಗಿ ಪ್ರಶ್ನಿಸಿದ್ದರು.

ಈ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಿರುವ ಪ್ರಧಾನಿ ಸಿಂಗ್, ಭಾರತ ಅಮೆರಿಕ ಪರಮಾಣು ಒಪ್ಪಂದವು ಯಾವುದೇ ಕಾರಣಕ್ಕೂ ಭಾರತದ ವಿದೇಶಿ ವ್ಯವಹಾರಗಳ ನಿರ್ಧಾರದ ಕುರಿತಾದ ಸ್ವಾಯತ್ತತ್ತೆಗೆ ಅಡ್ಡಿ ಉಂಟುಮಾಡುವುದಿಲ್ಲ ಎಂದಿದ್ದಾರೆ. ಅಲ್ಲದೆ, ದೇಶದ ಕೌಶಲ್ಯ ಕಾರ್ಯಕ್ರಮಗಳ ಮೇಲೂ ಇದು ಪ್ರಭಾವ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಣು ಒಪ್ಪಂದವು ಪರಮಾಣು ಪರೀಕ್ಷೆ ನಡೆಸುವ ಭಾರತದ ಹಕ್ಕಿಗೆ ಅಡ್ಡಿ ಉಂಟುಮಾಡುವುದಿಲ್ಲ ಎಂದು ಹೇಳುವ ಮೂಲಕ, ಅಮೆರಿಕದೊಂದಿಗಿನ ಅಣು ಒಪ್ಪಂದದ ಕುರಿತಾಗಿ ಬಿಜೆಪಿ ಪಕ್ಷಕ್ಕಿರುವ ಆತಂಕವನ್ನು ದೂರ ಮಾಡಲು ಪ್ರಯತ್ನಿಸಿದ್ದಾರೆ.
ಮತ್ತಷ್ಟು
ಸ್ಪೀಕರ್ ಚಟರ್ಜಿ ಸ್ಥಾನಕ್ಕೂ ಕುತ್ತು?
ಬಿಹಾರ: ರೈಲ್ವೆ ಹಳಿ ಧ್ವಂಸಗೊಳಿಸಿದ ನಕ್ಸಲರು
ಜುಲೈ 3: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬಿಜೆಪಿ ಕರೆ
4ನೆ ದಿನ: ಜಮ್ಮುವಿನಲ್ಲಿ ಕರ್ಫ್ಯೂ
ದೇಶಾದ್ಯಂತ ಲಾರಿ ಮುಷ್ಕರ ಆರಂಭ
ಮಧ್ಯಸ್ಥಿಕೆಗೆ ಮುಂದಾದ ಅಮರ್ ಸಿಂಗ್