ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿದಂಬರಂ ತಲೆದಂಡ ಕೇಳಲಿರುವ ಎಸ್‌ಪಿ?  Search similar articles
ಅಸ್ತಿತ್ವದ ಭೀತಿ ಎದುರಿಸುತ್ತಿರುವ ಮನಮೋಹನ್ ಸಿಂಗ್ ಸರಕಾರಕ್ಕೆ ಸಮಾಜವಾದಿ ಪಕ್ಷದ ಬೆಂಬಲ ಸುಲಭವಾಗಿ ದೊರೆಯಲಿದೆ ಎಂದು ಹೇಳಲಾಗದು. ಎಡಪಕ್ಷಗಳು ಬೆಂಬಲ ಹಿಂತೆಗೆದರೆ ಸರಕಾರದ ಉಳಿವಿನ ಕೀಲಿಕೈ ಹೊಂದಲಿರುವ ಸಮಾಜವಾದಿ ಪಕ್ಷವು, ಹಣಕಾಸು ಸಚಿವ ಸೇರಿದಂತೆ ಪ್ರಮುಖರನ್ನು ಕಿತ್ತೆಸೆಯುವ ಬೇಡಿಕೆ ಮಂಡಿಸುವ ಸಾಧ್ಯತೆಗಳಿವೆ.

ಸರಕಾರದ ರಕ್ಷಣೆಗೆ ಸಿದ್ಧವಾಗುತ್ತಿರುವ ಎಸ್‌ಪಿ, ವಿತ್ತ ಸಚಿವ ಪಿ.ಚಿದಂಬರಂ, ಪೆಟ್ರೋಲಿಯಂ ಸಚಿವ ಮುರಳಿ ದೇವೊರಾ, ಆರ್‌ಬಿಐ ಗವರ್ನರ್ ವೈ.ವಿ.ರೆಡ್ಡಿ ಹಾಗೂ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ರೊನೆನ್ ಸೇನ್ ಅವರ ತಲೆದಂಡ ಕೇಳುವ ಸಾಧ್ಯತೆಗಳಿವೆಯಲ್ಲದೆ, ಮಹಿಳಾ ಮೀಸಲಾತಿ ಮಸೂದೆಯನ್ನೂ ಮುಚ್ಚಿಡಲು ಆಗ್ರಹಿಸಬಹುದು ಎಂದು ಮೂಲಗಳು ವರದಿ ಮಾಡಿವೆ.

ಸಮಾಜವಾದಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನೇತೃತ್ವದಲ್ಲಿ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದೆ ಎಂದು ಮೂಲಗಳು ವಿವರಿಸಿವೆ.

ಹಣದುಬ್ಬರದಿಂದಾಗಿ ಯುಪಿಎ ಮೈತ್ರಿಕೂಟವು ಎದುರಿಸಬಹುದಾದ "ಆಡಳಿತವಿರೋಧಿ ಅಲೆ"ಯಿಂದ ಪಾರಾಗಲು ಚಿದಂಬರಂ, ದೇವೊರಾ ಮತ್ತು ರೆಡ್ಡಿ ಅವರ ತಲೆದಂಡಕ್ಕೆ ಆಗ್ರಹಿಸುತ್ತಿದ್ದರೆ, ರೊನೆನ್ ಸೇನ್ ಅವರು ಮುಲಾಯಂ ಸಿಂಗ್ ಆಹ್ವಾನದ ಹೊರತಾಗಿಯೂ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡದಂತೆ ತಡೆದಿದ್ದರು ಎಂಬುದು ಅದರ ಆಕ್ರೋಶಕ್ಕೆ ಕಾರಣ.

ಹಣದುಬ್ಬರ, ಏರುತ್ತಿರುವ ಬೆಲೆಗಳು ಮುಂತಾದ 'ಆರ್ಥಿಕತೆಯ ದುರಾಡಳಿತ'ಕ್ಕೆ ಕಾರಣರಾದ ತ್ರಿವಳಿಗಳನ್ನು ತೊಡೆದುಹಾಕಿದರೆ, ತಮ್ಮದು ಅವಕಾಶವಾದದ ಮೈತ್ರಿ ಎಂಬ ಹಣೆಪಟ್ಟೆ ತೊಲಗಬಹುದು ಎಂಬುದು ಎಸ್‌ಪಿ ಲೆಕ್ಕಾಚಾರ.
ಮತ್ತಷ್ಟು
ಅಣು ಒಪ್ಪಂದ-ಪರಮಾಣು ಸಾರ್ವಭೌಮತೆಗೆ ಧಕ್ಕೆ ಇಲ್ಲ: ಪಿಎಂ
ಸ್ಪೀಕರ್ ಚಟರ್ಜಿ ಸ್ಥಾನಕ್ಕೂ ಕುತ್ತು?
ಬಿಹಾರ: ರೈಲ್ವೆ ಹಳಿ ಧ್ವಂಸಗೊಳಿಸಿದ ನಕ್ಸಲರು
ಜುಲೈ 3: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬಿಜೆಪಿ ಕರೆ
4ನೆ ದಿನ: ಜಮ್ಮುವಿನಲ್ಲಿ ಕರ್ಫ್ಯೂ
ದೇಶಾದ್ಯಂತ ಲಾರಿ ಮುಷ್ಕರ ಆರಂಭ