ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಬಲ ಹಿಂತೆಗೆತದ ಸಮಯ: ಎಡಪಕ್ಷಗಳಲ್ಲಿ ಒಡಕು  Search similar articles
ಅಣು ಒಪ್ಪಂದದ ವಿಚಾರದಲ್ಲಿ ಮುಂದುವರಿಯುವ ಸೂಚನೆಯಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಜಿ-8 ಶೃಂಗಸಭೆ ಭೇಟಿಯನ್ನು ಪರಿಗಣಿಸಬೇಕೆಂಬ ಸಿಪಿಐ(ಎಂ)ನ ಧೋರಣೆಯನ್ನು ಸಿಪಿಐ ಒಪ್ಪಿಕೊಳ್ಳದೆ ಇರುವುದರಿಂದ, ಯುಪಿಎ ಸರಕಾರಕ್ಕೆ ತಾವು ನೀಡಿರುವ ಬೆಂಬಲ ಹಿಂಪಡೆದುಕೊಳ್ಳುವ ಸಮಯದ ಬಗ್ಗೆ ಎಡಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ.

ಪ್ರಧಾನ ಮಂತ್ರಿ ಅವರ ಸಂಭಾವ್ಯ ಭೇಟಿಗೂ ಎಡಪಕ್ಷಗಳ ನಿಲುವಿಗೂ ಸಂಬಂಧ ಕಲ್ಪಿಸಬಾರದು ಎಂದು ಸಲಹೆಯಿತ್ತ ಸಿಪಿಐನ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ಧಾನ್, ಅಣುಒಪ್ಪಂದದಲ್ಲಿ ಮುಂದುವರಿಯುವ ಬಗ್ಗೆ ಸರಕಾರದಿಂದ ಅಧಿಕೃತ ಹೇಳಿಕೆ ಹೊರಬೀಳುವ ಮೊದಲೇ ಎಡಪಕ್ಷಗಳು ಬೆಂಬಲ ವಾಪಸ್ ಪಡೆದರೆ ತಮ್ಮನ್ನು ತಾವೇ ಮೂರ್ಖರನ್ನಾಗಿಸಿದಂತೆ ಎಂದರು.

ಸಿಪಿಐ(ಎಂ)ನ ಪ್ರಕಾಶ್ ಕಾರಟ್ ಅವರನ್ನು ಭೇಟಿಯಾದ ನಂತರ ವರದಿಗಾರರಲ್ಲಿ ಮಾತನಾಡುತ್ತಿದ್ದ ಬರ್ಧಾನ್, "ಸರಕಾರವು ತಾವು ಒಪ್ಪಂದದ ವಿಚಾರದಲ್ಲಿ ಮುಂದುವರಿದಿಲ್ಲ ಎಂದು ಘೋಷಿಸಿದರೆ ನಮ್ಮನ್ನು ನಾವೇ ಮೂರ್ಖರನ್ನಾಗಿಸಿಕೊಂಡಂತಾಗುತ್ತದೆ" ಎಂದರು.

"ನನಗೆ ಜಿ-8 ಶೃಂಗಸಭೆ ಹಾಗು ಅಣುಒಪ್ಪಂದದ ನಡುವೆ ಯಾವುದೇ ಸಂಬಂಧ ಕಾಣಿಸುತ್ತಿಲ್ಲ" ಎಂದು ಅವರು ಹೇಳಿದರು.

ಕಾರಟ್ ಅವರ ನಿಲುವಿನ ಬಗ್ಗೆ ಪ್ರಶ್ನಿಸಿದಾಗ "ನಿಮಗೆ ಹೆಚ್ಚಿನ ಸ್ಪಷ್ಟನೆ ಬೇಕಾದಲ್ಲಿ ಕಾರಟ್ ಅವರನ್ನೆ ಕೇಳಿ" ಎಂದು ನುಡಿದ ಅವರು, ಬೆಂಬಲ ವಾಪಸ್ ಪಡೆಯಲು ಮನಮೋಹನ್ ಸಿಂಗ್ ಅವರ ಮರಳುವಿಕೆಯನ್ನು ಎಡಪಕ್ಷಗಳು ನಿರೀಕ್ಷಿಸಬೇಕು ಎಂದು ಸಲಹೆ ನೀಡಿದರು.

"ಪಿಎಮ್ ವಿದೇಶದಲ್ಲಿರುವಾಗ ಬೆಂಬಲ ವಾಪಸ್ ಪಡೆಯುವುದು ಸರಿಯಲ್ಲ. ಅವರು ಜಪಾನ್‌ನಲ್ಲಿದ್ದಾರೆ, ನಾವು ಅವರ ಅನುಪಸ್ಥಿತಿಯಲ್ಲಿ ಬೆಂಬಲ ಹಿಂಪಡೆಯುವುದು ಸೌಜನ್ಯವಲ್ಲ ಎಂದು ಅವರು ಹೇಳಿದರು.

ಈ ಮೊದಲು, ಉದ್ವಿಗ್ನಗೊಂಡಂತೆ ಕಂಡುಬಂದ ಬರ್ಧಾನ್, ಸರಕಾರವು ಒಪ್ಪಂದದ ವಿಚಾರದಲ್ಲಿ ಮುಂದುವರಿಯಲು ಸರ್ವಸನ್ನದ್ದವಾಗಿರುವಂತೆ ಕಂಡುಬರುತ್ತಿರುವುದರಿಂದ ಬೆಂಬಲ ವಾಪಸ್‌ಗೆ ಕಾಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನುಡಿದಿದ್ದರು.
ಮತ್ತಷ್ಟು
ಚಿದಂಬರಂ ತಲೆದಂಡ ಕೇಳಲಿರುವ ಎಸ್‌ಪಿ?
ಅಣು ಒಪ್ಪಂದ-ಪರಮಾಣು ಸಾರ್ವಭೌಮತೆಗೆ ಧಕ್ಕೆ ಇಲ್ಲ: ಪಿಎಂ
ಸ್ಪೀಕರ್ ಚಟರ್ಜಿ ಸ್ಥಾನಕ್ಕೂ ಕುತ್ತು?
ಬಿಹಾರ: ರೈಲ್ವೆ ಹಳಿ ಧ್ವಂಸಗೊಳಿಸಿದ ನಕ್ಸಲರು
ಜುಲೈ 3: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬಿಜೆಪಿ ಕರೆ
4ನೆ ದಿನ: ಜಮ್ಮುವಿನಲ್ಲಿ ಕರ್ಫ್ಯೂ