ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾನ್ ವಿರುದ್ದ ಸೇನಾ ಕಾರ್ಯಾಚರಣೆ ಬೇಡ: ಮುಖರ್ಜಿ  Search similar articles
ಇರಾನ್ ವಿರುದ್ದ ಯಾವುದೇ ಏಕಪಕ್ಷೀಯ ಕಾರ್ಯಾಚರಣೆ ಸ್ವೀಕಾರಾರ್ಹವಲ್ಲ ಹಾಗೂ ಅಂತಾರಾಷ್ಟ್ರೀಯ ಸಮುದಾಯವು ಇದಕ್ಕೆ ಒಪ್ಪಿಗೆ ಸೂಚಿಸಬಾರದು ಎಂದು ಭಾರತ ಹೇಳಿದೆ.

"ಇರಾನ್‌ಗೆ ಸಂಬಂಧಿಸಿದಂತೆ, ಯಾವುದೇ ಸೇನಾ ಕಾರ್ಯಾಚರಣೆ ನಡೆಸಬಾರದೆಂಬ ಈಜಿಪ್ಟ್‌ನ ವಿದೇಶಾಂಗ ಸಚಿವರ ನಿಲುವನ್ನು ನಾನು ಸಂಪೂರ್ಣವಾಗಿ ಸಮರ್ಥಿಸುತ್ತೇನೆ. ಅಲ್ಲದೆ ನಾವು ಯಾವುದೇ ರೀತಿಯ ವಿನಾಶಕಾರಿ ಕದನದ ವಿರೋಧಿಗಳು" ಎಂದು, ಈಜಿಪ್ಟ್‌ನ ವಿದೇಶಾಂಗ ಸಚಿವ ಅಹಮದ್ ಅಬುಲ್ ಘೈಟ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಭಾರತದ ವಿದೇಶಾಂಗ ವ್ಯವಹಾರ ಸಚಿವ ಪ್ರಣಬ್ ಮುಖರ್ಜಿ ಹೇಳಿದರು.

ಘೈಟ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಇರಾನ್‌ಗೆ ಸಂಬಂಧಿಸಿದ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಮತ್ತು ವಿಶ್ವಸಂಸ್ಥೆಯ ಸದಸ್ಯ ಹಾಗೂ ಸಾರ್ವಭೌಮ ರಾಷ್ಟ್ರವಾಗಿರುವ ಇರಾನ್ ಮೇಲೆ ಯಾವುದೇ ಏಕಪಕ್ಷೀಯ ಸೇನಾ ಕಾರ್ಯಾಚರಣೆ ನಡೆಸುವುದು ಸ್ವೀಕಾರ ಯೋಗ್ಯವಲ್ಲ ಮತ್ತು ಯಾರೂ ಇಂತಹ ಕಾರ್ಯಕ್ಕೆ ಮುಂದಾಗಬಾರದು. ಇದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಮ್ಮತವಲ್ಲ" ಎಂದು ನುಡಿದರು.

ಪಾಲಿಸ್ತೀನಿಯನ್ ಪ್ರದೇಶಗಳಲ್ಲಿ ಇಸ್ರೇಲ್‌ನ "ಉದ್ರಿಕ್ತ ಚಟುವಟಿಕೆ"ಗಳ ಬಗ್ಗೆ, ನವ ದೆಹಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಮತ್ತು ಈ ಎರಡೂ ರಾಷ್ಟ್ರಗಳು ಗಡಿರೇಖೆಯ ಬಳಿ ಶಾಂತಿಯುತವಾಗಿ ಇರಬೇಕೆಂದು ತಿಳಿಸಿವೆ.

ಇಸ್ರೇಲ್‌ ಅಥವಾ ಪಾಲಿಸ್ತೀನ್‌ ಇಂತಹ ಅವಿವೇಕದ ಚಟುವಟಿಕೆಗಳನ್ನು ತೀಕ್ಷ್ಣಗೊಳಿಸುವುದನ್ನು ಭಾರತ ಪ್ರೋತ್ಸಾಹಿಸುವುದಿಲ್ಲ ಮತ್ತು ಈಜಿಪ್ಟ್‌ ಅನ್ನು ಒಳಗೊಂಡಂತೆ ಎಲ್ಲ ರಾಷ್ಟ್ರಗಳು ಸೇರಿ ನಡೆಸುವ ಶಾಂತಿ ಪ್ರಯತ್ನದ ನ್ಯಾಯಯುತ ಕಾರ್ಯವನ್ನು ಬೆಂಬಲಿಸುತ್ತದೆ ಎಂದು ಮೂರು ದಿನಗಳ ಈಜಿಪ್ಟ್‌ ಭೇಟಿಯಲ್ಲಿರುವ ಮುಖರ್ಜಿ ಹೇಳಿದ್ದಾರೆ.
ಮತ್ತಷ್ಟು
ಬೆಂಬಲ ಹಿಂತೆಗೆತದ ಸಮಯ: ಎಡಪಕ್ಷಗಳಲ್ಲಿ ಒಡಕು
ಚಿದಂಬರಂ ತಲೆದಂಡ ಕೇಳಲಿರುವ ಎಸ್‌ಪಿ?
ಅಣು ಒಪ್ಪಂದ-ಪರಮಾಣು ಸಾರ್ವಭೌಮತೆಗೆ ಧಕ್ಕೆ ಇಲ್ಲ: ಪಿಎಂ
ಸ್ಪೀಕರ್ ಚಟರ್ಜಿ ಸ್ಥಾನಕ್ಕೂ ಕುತ್ತು?
ಬಿಹಾರ: ರೈಲ್ವೆ ಹಳಿ ಧ್ವಂಸಗೊಳಿಸಿದ ನಕ್ಸಲರು
ಜುಲೈ 3: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಬಿಜೆಪಿ ಕರೆ