ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಓಟ್ ಬ್ಯಾಂಕ್ ಓಲೈಕೆಗೆ ತೆಪ್ಪಗಿರುವ ಸರಕಾರ'  Search similar articles
ಬಂದ್ ವಿರುದ್ಧ ಕ್ರಮ ಕೈಗೊಳ್ಳದಿರುವ ಸರಕಾರದ ಮೇಲೆ ಸು.ಕೋ. ಟೀಕಾ ಪ್ರಹಾರ
ಚುನಾವಣೆಗಳು ಸನ್ನಿಹಿತವಾಗುತ್ತಿರುವುದರಿಂದ ರಾಜ್ಯ ಸರಕಾರಗಳು ಸ್ತಬ್ಧಗೊಂಡಿವೆ ಮತ್ತು ಪ್ರಭಾವಿ ಗುಂಪುಗಳು ಭುಜಬಲ ಪ್ರದರ್ಶಿಸಿ, ರಸ್ತೆ ಮತ್ತು ರೈಲು ತಡೆಗಳನ್ನು ನಡೆಸುವ ಮೂಲಕ ತಮ್ಮ ಒತ್ತೆಯಾಳುಗಳಂತೆ ಇರಿಸಿಕೊಂಡಿರುವ ಲಕ್ಷಗಟ್ಟಲೆ ಜನರನ್ನು ಕಾಪಾಡುವಲ್ಲಿ ಸೋಲುತ್ತಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರದಂದು ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಕಾನೂನು ವ್ಯವಸ್ಥೆಗೆ ಎದುರಾಗುವ ತೊಡಕುಗಳನ್ನು ನಿವಾರಿಸುವಲ್ಲಿ ಸರಕಾರದ ನಿಷ್ಕ್ರಿಯತೆಯ ಬಗ್ಗೆ ಸಾಮಾನ್ಯ ಜನರ ಅಸಮಾಧಾನವನ್ನು ಹೊರಗೆಡುಹುತ್ತ
ಸರ್ವೋಚ್ಚ ನ್ಯಾಯಾಲಯವು, ಕಾನೂನು ಮುರಿಯುವವರ ವಿರುದ್ದ "ಕಠಿಣ ಕ್ರಮ" ಕೈಗೊಳ್ಳುವ ಸರಕಾರದ ಪುನರುಚ್ಚರಿತ ಹೇಳಿಕೆಗಳು ಈ ದೇಶದ ಜನರನ್ನು ಮೂರ್ಖರನ್ನಾಗಿಸುವ ಒಂದು ತಂತ್ರವಷ್ಟೆ ಎಂದು ಹೇಳಿದೆ.

ಸಾಮಾನ್ಯ ಜನಜೀವನವನ್ನು ಹದಗೆಡಿಸುತ್ತಿರುವವರ ವಿರುದ್ಧ ನಿಷ್ಠುರ ಕ್ರಮ ಕೈಗೊಳ್ಳದಿರುವ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡದಿರುವ ಸರಕಾರದ ಮೇಲೆ ತನ್ನ ಟೀಕಾ ಪ್ರಹಾರವನ್ನು ಮುಂದುವರಿಸುತ್ತ, ನ್ಯಾಯಮೂರ್ತಿ ಅಲ್ತಮಾಸ್ ಕಬೀರ್ ಮತ್ತು ಡಿ.ಎಸ್ ಸಿಂಘ್ವಿ ಅರನ್ನೊಳಗೊಂಡ ನ್ಯಾಯಾಧೀಶರ ಪೀಠವು ಇದರಿಂದ "ಇಡೀ ರಾಷ್ಟ್ರ ಅಧಃಪತನ ಹೊಂದುತ್ತದೆ" ಎಂದಿದೆ.

ಇದು ಚುನಾವಣಾ ವರ್ಷವಾಗಿರುವುದರಿಂದ ತಮ್ಮ ಸಂಭಾವ್ಯ ಓಟ್ ಬ್ಯಾಂಕ್‌ಗಳನ್ನು ಕಳೆದುಕೊಳ್ಳುವ ಭಯದಿಂದ ಸರಕಾರಗಳು ಕಾನೂನನ್ನು ಉಲ್ಲಂಘಿಸಿ ಲಕ್ಷಗಟ್ಟಲೆ ಜನರನ್ನು ತೊಂದರೆಗೆ ಒಳಪಡಿಸುತ್ತಿರುವ ಗುಂಪುಗಳ ಬಗ್ಗೆ ನಿಷ್ಕ್ರಿಯತೆ ಪ್ರದರ್ಶಿಸುತ್ತಿವೆ ಎಂದು ನ್ಯಾಯಪೀಠ ನುಡಿದಿದೆ. ಮತ್ತು ಜನರಿಗೆ ನೆಮ್ಮದಿ ಒದಗಿಸಲು ನ್ಯಾಯಾಲಯ ಮುಂದಾದರೆ ಶಾಸಕಾಂಗವು "ನ್ಯಾಯಾಂಗದ ಹಸ್ತಕ್ಷೇಪ" ಎಂದು ಬೊಬ್ಬಿಡುತ್ತದೆ ಎಂದು ನ್ಯಾಯಾಧೀಶರು ಹೇಳಿದರು.
ಮತ್ತಷ್ಟು
ಲಾರಿ ಮುಷ್ಕರ ಅಂತ್ಯ
ವಿಜ್ಞಾನಿಗಳಲ್ಲಿ ಚರ್ಚಿಸಿ ಬೆಂಬಲ ನಿರ್ಧಾರ: ಯುಎನ್‌ಪಿಎ
ಸತ್ತಿದೆ ಎನ್ನಲಾದ ಮಗು ಜೀವಂತವಾಗಿತ್ತು!
ದಯಾ ಮರಣ ಬೇಡಿದ್ದ ರೋಗಿ ಈಗ ಸಂಧಿವಾತ ಮುಕ್ತ
ಇರಾನ್ ವಿರುದ್ದ ಸೇನಾ ಕಾರ್ಯಾಚರಣೆ ಬೇಡ: ಮುಖರ್ಜಿ
ಬೆಂಬಲ ಹಿಂತೆಗೆತದ ಸಮಯ: ಎಡಪಕ್ಷಗಳಲ್ಲಿ ಒಡಕು