ಭಾರತ-ಅಮೆರಿಕ ಅಣುಒಪ್ಪಂದವು ಭಾರತಕ್ಕೆ ಲಾಭದಾಯಕವಾಗಿದೆ ಮತ್ತು ಅವರು ಈ ವಿವಾದದ ಕುರಿತು ತಮ್ಮ ನಿಲುವನ್ನು ಅಚಲಗೊಳಿಸುವಾಗ ರಾಜಕೀಯಕ್ಕಿಂತ ಮಿಗಿಲಾಗಿ ದೇಶದ ಹಿತಾಸಕ್ತಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಗುರುವಾರದಂದು ಮಾಜಿ ರಾಷ್ಟ್ರಪತಿ ಮತ್ತು ವಿಜ್ಞಾನಿ ಅಬ್ದುಲ್ ಕಲಾಂ ಅವರು ಸಮಾಜವಾದಿ ಪಕ್ಷದ ಹಿರಿಯ ನಾಯಕರಿಗೆ ಸಲಹೆ ನೀಡಿದ್ದಾರೆ.
ಗುರುವಾರದಂದು ನಡೆದ ಯುಎನ್‌ಪಿಎದ ಸಮಾವೇಶದಲ್ಲಿ ಈ ವಿಷಯದ ಕುರಿತು ಪ್ರಸಿದ್ದ ತಜ್ಞ ವಿಜ್ಞಾನಿಗಳ ಅಭಿಪ್ರಾಯ ಪಡೆದು ಮುಂದಿನ ಕಾರ್ಯ ಯೋಜನೆಗಳನ್ನು ರೂಪಿಸುವ ತೀರ್ಮಾನ ಕೈಗೊಂಡ ನಂತರ, ಸಂಜೆ ಎಸ್.ಪಿಯ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರು ಕಲಾಂ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು.
"ಭಾರತ ಅಪೇಕ್ಷಿಸಿದರೆ ಯಾವುದೇ ಸಮಯದಲ್ಲಿ ಅಣುಒಪ್ಪಂದವನ್ನು ರದ್ದು ಮಾಡಬಹುದು" ಎಂದು ಕಲಾಂ ನಾಯಕರಿಗೆ ತಿಳಿಸಿದರು.
ಕಲಾಂರೊಂದಿಗೆ ಒಂದು ಗಂಟೆಗಿಂತಲೂ ಹೆಚ್ಚಿನ ಸಮಯದ ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಲಾಯಂ, ಅಣು ಒಪ್ಪಂದ ರಾಷ್ಟ್ರದ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಕಲಾಂ ತಮಗೆ ತಿಳಿಸಿರುವುದಾಗಿ ಹೇಳಿದರು.
"ಸುಪ್ರಸಿದ್ದ ಮತ್ತು ಗೌರವಾನ್ವಿತ ವಿಜ್ಞಾನಿ ಕಲಾಂ ಅವರೊಂದಿಗಿನ ತಮ್ಮ ಮಾತುಕತೆಯ ಬಗ್ಗೆ ಯುಎನ್‌ಪಿಎಯ ನಾಯಕರಿಗೆ ತಿಳಿಸುತ್ತೇವೆ. ಕಲಾಂ ದೇಶದ ಅಣು ವಿಜ್ಞಾನದ ಜನಕರಾಗಿದ್ದಾರೆ" ಎಂದು ಎಸ್.ಪಿಯ ಮುಖ್ಯಸ್ಥರು ನುಡಿದರು.
|