ಒರಿಸ್ಸಾದ ಪುರಿ ಜಗನ್ನಾಥ ರಥ ಯಾತ್ರೆಯ ಸಂದರ್ಭದಲ್ಲಿ ಶುಕ್ರವಾರ, ದೇವರ ವಿಗ್ರಹವನ್ನು ಸ್ಪರ್ಶಿಸಲು ಮುನ್ನುಗ್ಗಿದ ಯಾತ್ರಾರ್ಥಿಗಳ ಕಾಲ್ತುಳಿತಕ್ಕೆ ಸಿಲುಕಿ ಕನಿಷ್ಠ 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.
ಜಗತ್ತಿನ ಅಧಿಪತಿ ಎಂದು ಹಿಂದೂಗಳಿಂದ ನಂಬಲ್ಪಟ್ಟಿರುವ ಜಗನ್ನಾಥ ದೇವರ ದೇವಾಲಯದ ವಾರ್ಷಿಕ ವಿಧಿಯಲ್ಲಿ ಪಾಲ್ಗೊಳ್ಳಲು 10 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಸೇರಿದ್ದರು. ಒರಿಸ್ಸಾದ ರಾಜಧಾನಿ ಭುವನೇಶ್ವರದಿಂದ 40 ಮೈಲುಗಳ ದೂರದ ಪುರಿಯಲ್ಲಿ ಈ ದೇವಾಲಯವು ಸ್ಥಿತವಾಗಿದೆ.
ರಥದಲ್ಲಿ ಸಾಗಿಸಲ್ಪಡುತ್ತಿದ್ದ ದೇವಿ ಸುಭದ್ರೆಯ ಮೂರ್ತಿಯನ್ನು ಸ್ಪರ್ಶಿಸಲು ಭಕ್ತಸ್ತೋಮವು ಮುನ್ನುಗ್ಗಿದ್ದರಿಂದ ಈ ಅವಘಡ ಸಂಭವಿಸಿತು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ತಿಳಿಸಿದರು.
|