ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಹಮತಕ್ಕೆ ಬಂದ ಕಾಂಗ್ರೆಸ್-ಸಮಾಜವಾದಿ ಪಕ್ಷ  Search similar articles
ಭಾರತ-ಅಮೆರಿಕ ಪರಮಾಣು ಒಪ್ಪಂದದ ಹಿನ್ನೆಲೆಯಲ್ಲಿ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡಲ್ಲಿ ಸರಕಾರ ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಪರಸ್ಪರ ಸಹಮತಕ್ಕೆ ಬಂದಿವೆ.

ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯದಾಟದ ಕ್ಲೈಮಾಕ್ಸ್ ಹಂತವಾಗಿ, ಎರಡೂ ಪಕ್ಷಗಳು ತಮ್ಮ ದ್ವೇಷ ಮರೆತು ಒಂದಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿವೆ. ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಅವರು ಶುಕ್ರವಾರ ಪ್ರಧಾನಿ ನಿವಾಸಕ್ಕೆ ಧಾವಿಸಿ, ಮನಮೋಹನ್ ಸಿಂಗ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಬಳಿಕ ಅವರೆಲ್ಲರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಆಕೆಯ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

ಎರಡೂ ಪಕ್ಷಗಳು ಒಂದಾಗುತ್ತವೆಯೇ ಎಂಬ ಬಗ್ಗೆ ಉಭಯ ಪಕ್ಷಗಳೂ ಸೊಲ್ಲೆತ್ತಿಲ್ಲ ಮತ್ತು ಪ್ರಧಾನಿಗೆ ಬೆಂಬಲದ ಭರವಸೆ ನೀಡಿಲ್ಲ ಎಂದು ಹೇಳಿದವು. ಆದರೆ ಮಾಜಿ ರಾಷ್ಟ್ರಪತಿ, ಅಣು ವಿಜ್ಞಾನಿ ಡಾ.ಅಬ್ದುಲ್ ಕಲಾಂ ಅವರ ಸಲಹೆಯನ್ನೇ ಮುಂದಿಟ್ಟುಕೊಂಡು ಉಭಯ ಪಕ್ಷಗಳ ಮುಖಂಡರಿಂದ ವ್ಯಕ್ತವಾಗುವ ಪ್ರಬಲ ಹೇಳಿಕೆಗಳು ಇದನ್ನು ಪುಷ್ಟೀಕರಿಸುತ್ತಿವೆ.

ಕಾಂಗ್ರೆಸ್‌ಗೆ ಎಸ್ಪಿ ಮತ್ತಷ್ಟು ಸಮೀಪವಾಗುವ ಸುಳಿವು ನೀಡುವ ಮತ್ತೊಂದು ಪ್ರಕರಣವೊಂದರಲ್ಲಿ, ಅಧಿಕಾರದಿಂದ ಕೋಮುವಾದಿಗಳನ್ನು ದೂರವಿಡುವುದೇ ತಮ್ಮ ಆದ್ಯತೆ ಎಂದು ಮುಲಾಯಂ ಮತ್ತು ಅಮರ್ ಸಿಂಗ್ ಇಬ್ಬರೂ ಘೋಷಿಸಿದ್ದಾರೆ. ಅಣು ಒಪ್ಪಂದದ ಕುರಿತು ಪಕ್ಷವು ನಿರೀಕ್ಷಿಸುತ್ತಿದ್ದ ಹೊಸ ವಿವರಗಳು ಪ್ರಧಾನಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಿಂದ ಲಭ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.

ಆದರೆ, ಕಾಂಗ್ರೆಸ್ ಮುಖ್ಯ ವಕ್ತಾರ ವೀರಪ್ಪ ಮೊಯಿಲಿ ಅವರಂತೂ, ಇಬ್ಬರೂ ಸಮಾಜವಾದಿ ನಾಯಕರು ಪರಮಾಣು ಒಪ್ಪಂದಕ್ಕೆ ಪ್ರಧಾನಿ ಬಳಿ ಮತ್ತು ಸೋನಿಯಾ ಬಳಿ ಪೂರ್ಣ ಬೆಂಬಲ ಘೋಷಿಸಿದ್ದಾರೆ ಎಂದು ಪ್ರಕಟಿಸಿದ್ದಾರೆ. ಅಣು ಒಪ್ಪಂದದಲ್ಲಿ ಮುಂದುವರಿಯಲು ಯುಪಿಎ ಬಳಿ ಈಗ ಸಾಕಷ್ಟು ಸಂಖ್ಯಾಬಲ ಇದೆ ಎಂದು ತಿಳಿಸಿರುವ ಅವರು, ಸಮಾಜವಾದಿ ಪಕ್ಷಕ್ಕೆ ಧನ್ಯವಾದವನ್ನೂ ಘೋಷಿಸಿದ್ದಾರೆ.
ಮತ್ತಷ್ಟು
ಪುರಿ ರಥಯಾತ್ರೆ: ಕಾಲ್ತುಳಿತಕ್ಕೆ 6 ಜನರ ಬಲಿ
ಅಣು ಒಪ್ಪಂದ ರಾಷ್ಟ್ರದ ಹಿತಾಸಕ್ತಿಗೆ ಪೂರಕ: ಮುಲಾಯಂಗೆ ಕಲಾಂ
ಅಣುಬಂಧ: ಜು.7ರ 'ಎಡ' ಗಡುವಿಗೆ ಕಾಂಗ್ರೆಸ್ ತಿರಸ್ಕಾರ
ಅಮರನಾಥ: ವಿಎಚ್‌ಪಿಯಿಂದ ಒಂದು ವಾರ ಬಂದ್
'ಓಟ್ ಬ್ಯಾಂಕ್ ಓಲೈಕೆಗೆ ತೆಪ್ಪಗಿರುವ ಸರಕಾರ'
ಲಾರಿ ಮುಷ್ಕರ ಅಂತ್ಯ