ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್ಪಿ ಬಾಹ್ಯ ಬೆಂಬಲ; ಎಡರಂಗ ದೂರ ದೂರ...  Search similar articles
ಕೇಂದ್ರದಲ್ಲಿ ರಾಜಕೀಯ ಶಕ್ತಿಗಳ ಮರುಹೊಂದಾಣಿಕೆಯಾಗಿದ್ದು, ಸಮಾಜವಾದಿ ಪಕ್ಷವು ಯುಪಿಎ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಲು ಒಪ್ಪಿದೆ. ಈ ಮಧ್ಯೆ, ಅಣು ಒಪ್ಪಂದದಲ್ಲಿ ಸರಕಾರ ಮುಂದುವರಿದು, ಸದನದಲ್ಲಿ ವಿಶ್ವಾಸ ಮತ ಯಾಚಿಸಬೇಕಾಗಿ ಬಂದರೆ, ತಾವು ಅದರ ವಿರುದ್ಧ ಮತ ಚಲಾಯಿಸುವುದಾಗಿ ಎಡಪಕ್ಷಗಳು ಸ್ಪಷ್ಟಪಡಿವೆ.

ಒಂದು ವಾರದಿಂದ ಕಾಂಗ್ರೆಸ್-ಎಸ್ಪಿ ಮಧ್ಯೆ ನಡೆಯುತ್ತಿದ್ದ ರಾಜಕೀಯದಾಟವು ಕ್ಲೈಮಾಕ್ಸ್ ತಲುಪಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಸ್ಪಿ ನಾಯಕರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಅಮರ್ ಸಿಂಗ್, ತಮ್ಮ ಪಕ್ಷಗಳ ಮಧ್ಯೆ ಹಲವಾರು ವರ್ಷಗಳಿಂದ ಇದ್ದ ವೈಮನಸ್ಯ ಮರೆತುಬಿಟ್ಟರು.

39 ಸದಸ್ಯ ಬಲದ ಎಸ್ಪಿಯು ಅಧಿಕೃತವಾಗಿ ಈ ಒಪ್ಪಂದವನ್ನು ಘೋಷಿಸಿಲ್ಲವಾದರೂ, ಕಾಂಗ್ರೆಸ್ ಪಕ್ಷವು 'ದೇಶದ ಹಿತಾಸಕ್ತಿಗಾಗಿ' ಸಮೀಪ ಬಂದಿರುವ ಮತ್ತು ಎಡಪಕ್ಷಗಳನ್ನು ನಿರ್ಲಕ್ಷಿಸಿ, ಸರಕಾರ ಉಳಿಸುವಲ್ಲಿ 'ಸಕಾಲಿಕ' ಸಹಾಯ ಮಾಡಿದ ಸಮಾಜವಾದಿ ಪಕ್ಷಕ್ಕೆ ಧನ್ಯವಾದ ಸಮರ್ಪಿಸಲು ಸಮಯ ವ್ಯಯ ಮಾಡಲಿಲ್ಲ.

ಆದರೆ ಸಮಾಜವಾದಿ ಪಕ್ಷದ ಬೇಡಿಕೆ ಪಟ್ಟಿ ಏನೆಂಬುದು ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ. ಅದು ಕೇಂದ್ರ ಸಂಪುಟ ಸೇರುವುದಿಲ್ಲ, ಆದರೆ ಪೆಟ್ರೋಲಿಯಂ ಸಟಿವ ಮುರಳಿ ದೇವೊರಾ, ಹಣಕಾಸು ಸಚಿವ ಪಿ.ಚಿದಂಬರಂ ಬಗ್ಗೆ ಅದಕ್ಕೆ ಅಸಮಾಧಾನವಿದ್ದು, ಕಾಂಗ್ರೆಸ್ ಪಕ್ಷವು ಅವರನ್ನು ಎತ್ತಂಗಡಿ ಮಾಡಲಾರದು ಎಂದು ನಂಬಲಾಗುತ್ತಿದೆ.

ಈ ನಡುವೆ, ಔಟ್‌ಲುಕ್ ನಿಯತಕಾಲಿಕದ ಜತೆ ಮಾತನಾಡಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಸಂಸತ್ತಿನಲ್ಲಿ ಬಲಾಬಲ ಪರೀಕ್ಷೆ ನಡೆದಲ್ಲಿ, ಎಡರಂಗವು ಸರಕಾರದ ವಿರುದ್ಧ ಮತ ಚಲಾಯಿಸುವುದಾಗಿ ಸ್ಪಷ್ಟಪಡಿಸಿದರು. ಆದರೆ, ಐಎಇಎ ಜತೆ ಮಾತುಕತೆಗೆ ಮುಂದಾದರೆ, ಬೆಂಬಲ ಹಿಂತೆಗೆಯುವುದು ಖಚಿತ ಎಂಬುದನ್ನೂ ಸ್ಪಷ್ಟಪಡಿಸಿದರು.

ಇದಲ್ಲದೆ, ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಕೊಡುವ ಕಾಂಗ್ರೆಸನ್ನು ತಿರಸ್ಕರಿಸುವಂತೆ ಮುಂದಿನ ಮಹಾ ಚುನಾವಣೆಗಳಲ್ಲಿ ದೇಶಾದ್ಯಂತ ಜನಾಂದೋಲನ ನಡೆಸುವುದಾಗಿಯೂ ಕಾರಟ್ ಪ್ರಕಟಿಸಿದರು.
ಮತ್ತಷ್ಟು
ಸಹಮತಕ್ಕೆ ಬಂದ ಕಾಂಗ್ರೆಸ್-ಸಮಾಜವಾದಿ ಪಕ್ಷ
ಪುರಿ ರಥಯಾತ್ರೆ: ಕಾಲ್ತುಳಿತಕ್ಕೆ 6 ಜನರ ಬಲಿ
ಅಣು ಒಪ್ಪಂದ ರಾಷ್ಟ್ರದ ಹಿತಾಸಕ್ತಿಗೆ ಪೂರಕ: ಮುಲಾಯಂಗೆ ಕಲಾಂ
ಅಣುಬಂಧ: ಜು.7ರ 'ಎಡ' ಗಡುವಿಗೆ ಕಾಂಗ್ರೆಸ್ ತಿರಸ್ಕಾರ
ಅಮರನಾಥ: ವಿಎಚ್‌ಪಿಯಿಂದ ಒಂದು ವಾರ ಬಂದ್
'ಓಟ್ ಬ್ಯಾಂಕ್ ಓಲೈಕೆಗೆ ತೆಪ್ಪಗಿರುವ ಸರಕಾರ'