ಏರುತ್ತಿರುವ ದರಗಳು ದೇಶಾದ್ಯಂತ ಜನಜೀವನದ ಮೇಲೆ ಪ್ರಭಾವ ಬೀರಿದೆ ಮತ್ತು ಜೀವನ ವೆಚ್ಚ ಆಧಿಕ ಸ್ತರದಲ್ಲಿರುವ ದೆಹಲಿಯಂತಹ ನಗರಗಳಲ್ಲಿ ಪರಿಸ್ಥಿತಿ ಇನ್ನಷ್ಟು ದುಸ್ತರಗೊಂಡಿದೆ.
ಈಗ, ವಿವಾಹ ಋತು ಸಮೀಪಿಸುತ್ತಿರುವುದರಿಂದ, ಮದುವೆ ಸಮಾರಂಭಗಳಿಗೆ ತಯಾರಿ ನಡೆಸುತ್ತಿರುವ ಪರಿವಾರಗಳು ಆಯವ್ಯಯ ತಯಾರಿಕೆಯಲ್ಲಿ ಇಕ್ಕಟ್ಟಿಗೆ ಸಿಲುಕಿವೆ. ದೆಹಲಿಯಲ್ಲಿ ಈಗ ಯಾವುದೂ ಕೈಗೆಟಕುವಂತಿಲ್ಲ.
ಗಗನವೇರುತ್ತಿರುವ ದರಗಳಿಂದಾಗಿ, ತಮ್ಮ ಬಜೆಟ್‌ನೊಳಗೆ ಮದುವೆ ಮಾಡಿ ಮುಗಿಸಲು ಜನರು ತಮ್ಮ ಮದುವೆ ಸಿದ್ಧತೆಗಳ ಮೇಲೆ ಮರುಚಿಂತನೆ ನಡೆಸುವಲ್ಲಿ ವಿವಶರಾಗಿದ್ದಾರೆ .
ಇಂತಹ ಒಂದು ಕುಟುಂಬಗಳಲ್ಲಿ ಒಂದಾಗಿರುವ ಮಹಿಂದಿರತಾಸ್ ಅವರ ಮಗಳ ಮದುವೆಗೆ ಒಂದು ವಾರವಷ್ಟೆ ಉಳಿದಿದೆ, ಈ ಸಂದರ್ಭದಲ್ಲಿ ಅವರು ಖಾದ್ಯಪಟ್ಟಿ ಮತ್ತು ಅತಿಥಿಗಳ ಪಟ್ಟಿ ತಯಾರಿಸುವಲ್ಲಿ ನಿರತರಾಗಿರಬೇಕು. ಆದರೆ ಅವರು ಅದಕ್ಕೆ ಬದಲಾಗಿ ಬಿಲ್ಲುಗಳ ಕಡಿತದ ಬಗ್ಗೆ ಗಂಟೆಗಳನ್ನು ವ್ಯಯಿಸುತ್ತಾರೆ.
"ಬೆಲೆಗಳು 11 ಪ್ರತಿಶತದಷ್ಟು ಏರಿಕೆಯಾಗಿವೆ ಆದ್ದರಿಂದ ಅದಕ್ಕನುಗುಣವಾಗಿ ನಾವು ನಮ್ಮ ಅಯವ್ಯಯವನ್ನು ಸಹ 11 ಪ್ರತಿಶತಕ್ಕೆ ಇಳಿಸಿದ್ದೇವೆ" ಎನ್ನುತ್ತಾರೆ ವಧುವಿನ ತಂದೆ ಸುರೇಂದರ್ ಮಹಿಂದಿರತಾಸ್.
ದೆಹಲಿಯನ್ನು ತೀವ್ರವಾಗಿ ತಟ್ಟಿರುವ ಹಣದುಬ್ಬರ, ಈ ಪರಿವಾರವನ್ನು ಬಹು ತೊಂದರೆಗೆ ಸಿಲುಕಿಸಿದೆ. ಅವರು ಎರಡು ಟ್ರಕ್‌ಗಳನ್ನು ಹೊಂದಿದ್ದು, ಇದು ಅವರ ಪರಿವಾರಕ್ಕೆ ತಿಂಗಳಿಗೆ 20,000 ರೂಪಾಯಿ ಆದಾಯ ಒದಗಿಸುತ್ತದೆ. ವರ್ಷವಿಡೀ ಶ್ರಮಪಟ್ಟು ಉಳಿತಾಯ ಮಾಡಿದ ಮಹಿಂದಿರತಾಸ್ ತಮ್ಮ ಮಗಳಿಗೆ ಅದ್ಧೂರಿಯಾಗಿ ಮದುವೆ ಮಾಡಬಹುದು ಎಂದುಕೊಂಡಿದ್ದರು. ಆದರೆ ಈಗ ಪ್ರತಿದಿನವು ಹೊಸ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಿದ್ದಾರೆ.
"600 ಜನರ ಅದ್ಧೂರಿ ಸತ್ಕಾರ ಕೂಟದ ಬದಲಾಗಿ ನಾವು 400 ಜನರ ಸಣ್ಣ ಕೂಟವನ್ನು ನಡೆಸಲು ಯೋಚಿಸುತ್ತಿದ್ದೇವೆ. ಒಂದು ಪ್ಲೇಟ್ ಆಹಾರಕ್ಕೆ 1200ರೂ.ಇರುವ ಫಾರ್ಮ್ ಹೌಸ್‌ಗೆ ಬದಲಾಗಿ ಒಂದು ಪ್ಲೇಟ್‌ಗೆ 500ರೂ. ಇರುವ ಔತಣ ಕೂಟ ನಡೆಸಲು ಯೋಚಿಸಿದ್ದೇವೆ. ಬೆಲೆ ಏರಿಕೆಯ ಕಾರಣಕ್ಕಾಗಿ ಮದುವೆಯನ್ನು ನಿಲ್ಲಿಸುವುದು ಸಾಧ್ಯವಿಲ್ಲ, ಅದು ನಡೆಯಲೇ ಬೇಕು ಆದರೆ ಕೆಲವು ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗಿದೆ" ಎಂದು ಸುರೇಂದರ್ ಮಹಿಂದಿರತಾಸ್ ನುಡಿದರು.
ವಿವಾಹವು ಯೋಜಿಸಿದಂತೆ ಅದ್ದೂರಿಯಾಗಿ ನಡೆಯದಿದ್ದರು ಪರವಾಗಿಲ್ಲ, ಸುಖಮಯ ವಿವಾಹವಾದರೆ ಸಾಕು... ಇದು ವಧುವಿನಿಂದ ಅವಳ ಹೆತ್ತವರಿಗೆ ಸಂದೇಶ.
|