ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಬಿಕ್ಕಟ್ಟು: ಸ್ಪೀಕರ್ ಸ್ಥಾನಕ್ಕೆ ಕುತ್ತು..?  Search similar articles
ಎಡಪಕ್ಷಗಳು ಯುಪಿಎ ಸರಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆದರೆ ಲೋಕಸಭೆಯ ಸ್ಪೀಕರ್ ಸೋಮನಾಥ ಚಟರ್ಜಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಸಿಪಿಎಂನ ಪ್ರಾಥಮಿಕ ಸದಸ್ಯತ್ವದಲ್ಲಿ ಮುಂದುವರಿದಿರುವ ಚಟರ್ಜಿ, ಸಿಪಿಎಂನಿಂದ ಯಾವುದೇ ಅಧಿಕೃತ ಸೂಚನೆಗಳಿಲ್ಲದೆ ತಮ್ಮದೆ ಆದ ನಿರ್ಣಯ ಕೈಗೊಳ್ಳಲಿದ್ದಾರೆ. ಚಟರ್ಜಿ ಅವರ ರಾಜಕೀಯ ಘನತೆ, ಜ್ಯೇಷ್ಠತೆ ಮತ್ತು ಉನ್ನತ ಸಾಂವಿಧಾನಿಕ ಪದವಿಗೆ ಮನ್ನಣೆ ನೀಡುತ್ತಾ ಅವರ ಕಾರ್ಯ ಚಟುವಟಿಕೆಗಳ ಬಗ್ಗೆ ನಿರ್ದೇಶನ ನೀಡುವುದರಿಂದ ಮಾರ್ಕ್ಸಿಸ್ಟ್ ಪಕ್ಷವು ದೂರ ಉಳಿಯಲಿದೆ. "ಈ ವಿಷಯವು ಮಾತುಕತೆಗೆ ಬಂದಿಲ್ಲ. ಆದರೆ ಸ್ಪೀಕರ್ ಸರಿಯಾದ ಸಮಯದಲ್ಲಿ ತಮ್ಮದೇ ಆದ ತಿರ್ಮಾನವನ್ನು ತೆಗೆದುಕೊಳ್ಳುತ್ತಾರೆ"ಎಂದು ಸಿಪಿಎಂನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಚಟರ್ಜಿ ಅವರ ಅನಿವಾರ್ಯ ನಿರ್ಗಮನದಿಂದ ಕಾಂಗ್ರೆಸ್ ಒಂದಾದ ಮೇಲೊಂದರಂತೆ ಎರಡು ಬಲಾಬಲ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ: ವಿಶ್ವಾಸ ಮತ ಮತ್ತು ಹೊಸ ಲೋಕಸಭಾ ಅಧ್ಯಕ್ಷರ ಚುನಾವಣೆ. ಕಾಂಗ್ರೆಸ್ ಪಕ್ಷವು ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆಯೇ ಅಥವಾ ಸಮಾಜವಾದಿ ಪಕ್ಷವೂ ಸೇರಿದಂತೆ ತನ್ನ ಮಿತ್ರ ಪಕ್ಷಗಳಿಗೆ ಅವಕಾಶ ಬಿಟ್ಟುಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಕನಿಷ್ಠ ಮಿತಿಯ ಬಹುಮತದ ಮೇಲೆ ಸರಕಾರ ನಿಂತಿರುವುದರಿಂದ ಸಭಾಧ್ಯಕ್ಷರ ಪಾತ್ರವು ಮಹತ್ವದ್ದೆನಿಸಿದೆ.

ಮೊದಲನೆ ಬಾರಿಗೆ 1971ರಲ್ಲಿ ಲೋಕಸಭೆ ಪ್ರವೇಶಿಸಿದ ಚಟರ್ಜಿ, ದೇಶದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಂಸತ್ ಸದಸ್ಯರಲ್ಲಿ ಒಬ್ಬರು. ಯುಪಿಎ ಮತ್ತು ಎಡಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಲೋಕಸಭೆಯ ಸ್ಪೀಕರ್ ಅಗಿ ಚುನಾಯಿತರಾದ ಚಟರ್ಜಿ ಜೂನ್ 4, 2004ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

ಈಗ, ಯುಪಿಎ ಮತ್ತು ಎಡಪಕ್ಷಗಳ ನಡುವಿನ ಒಡಕು, ಚಟರ್ಜಿ ಅವರು ಸ್ಪೀಕರ್ ಅಗಿ ಮುಂದುವರಿಯುವುದನ್ನು ರಾಜಕೀಯವಾಗಿ ಮತ್ತು ನೈತಿಕವಾಗಿ ಅಸಹನೀಯಗೊಳಿಸಿದೆ.
ಮತ್ತಷ್ಟು
ವಿವಾಹದ ಅಬ್ಬರಕ್ಕೆ ಕುತ್ತು ತಂದಿರುವ ಹಣದುಬ್ಬರ
ಬುಷ್‌ಗಿಂತ ಆಡ್ವಾಣಿ ಅಪಾಯಕಾರಿ: ಅಮರ್ ಸಿಂಗ್
ವಿಶ್ವಾಸ ಮತ ಕೋರಿ: ಪ್ರಧಾನಿಗೆ ಬಿಜೆಪಿ ಒತ್ತಾಯ
ಪುರಿ ದುರಂತ: ತನಿಖೆಗೆ ಸರಕಾರ ಆದೇಶ
ಎಸ್ಪಿ ಬಾಹ್ಯ ಬೆಂಬಲ; ಎಡರಂಗ ದೂರ ದೂರ...
ಸಹಮತಕ್ಕೆ ಬಂದ ಕಾಂಗ್ರೆಸ್-ಸಮಾಜವಾದಿ ಪಕ್ಷ