ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಂಡಮಾರುತದ ಎಚ್ಚರಿಕೆ ನೀಡುವ ಇರುವೆಗಳು  Search similar articles
ಪ್ರತಿ ವರ್ಷ ಮಾನ್ಸೂನ್ ಕಾಲಿರಿಸುತ್ತಿದ್ದಂತೆಯೆ, ಪ್ರಕೃತಿ ತನ್ನ ಆವೇಶವನ್ನು ಹೊರಗೆಡಹುತ್ತದೆ. ಆದರೆ ಒಂದು ಸಣ್ಣ ಗ್ರಾಮವಾದ ಉತ್ತರ ದುರ್ಗಪುರದ ನಿವಾಸಿಗಳು ಕಲಿತಿರುವ ಪಾಠ, ಪ್ರಕೃತಿ ಮಾತೆ ಎರಗಲಿರುವ ಅವಘಡದ ಬಗ್ಗೆ ಸಾಕಷ್ಟು ಮುನ್ಸೂಚನೆಗಳನ್ನು ನೀಡುತ್ತಾಳೆ ಮತ್ತು ಇದನ್ನು ಅರ್ಥ ಮಾಡಿಕೊಂಡು ತಮ್ಮನ್ನು ಅಣಿಗೊಳಿಸಿಕೊಂಡಲ್ಲಿ ಇವುಗಳು ಉಪಯುಕ್ತವಾಗುತ್ತವೆ ಎಂಬುದು.

ಪಶ್ಚಿಮ ಬಂಗಾಳದ ತೀರ ಪ್ರದೇಶದಲ್ಲಿನ ಕುಲ್ಫಿಯ ಸಮೀಪದಲ್ಲಿರುವ ಉತ್ತರ ದುರ್ಗಪುರ ಗ್ರಾಮದ ನಿವಾಸಿಗಳು ಇದರಿಂದಾಗಿ ಗಂಭೀರ ದುರಂತಗಳನ್ನು ನಿವಾರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

"ಮನೆಗಳಲ್ಲಿ ಇರುವೆಗಳು ತಮ್ಮ ಮೊಟ್ಟೆಗಳನ್ನು ಎತ್ತರದ ಸ್ಥಾನಗಳಿಗೆ ಕೊಂಡೊಯ್ಯುವುದು, ಬಸವನ ಹುಳು ಎತ್ತರದ ಭೂಪ್ರದೇಶದತ್ತ ಸಾಗುವುದು, ಮಿಡತೆಗಳ ಸಮೂಹಗಳು ಗಾಬರಿಗೊಂಡಂತೆ ಅಡ್ಡಾದಿಡ್ಡಿಯಾಗಿ ಚಲಿಸುವುದು, ಪ್ರಕ್ಷುಬ್ಧ ಹವಾಮಾನದೊಂದಿಗೆ ಬಲವಾದ ಗಾಳಿ ಮತ್ತು ಚಂಡಮಾರುತದ ಸೂಚನೆ ನೀಡುತ್ತದೆ" ಎಂದು ಗ್ರಾಮದ ನಿವಾಸಿ ಅಂಬ ಘರಾಮಿ ಹೇಳುತ್ತಾರೆ.

ನೈಸರ್ಗಿಕ ಸೂಚಕಗಳಿಗೆ ಹೊರತಾಗಿ ಕೋಲ್ಕತ್ತಾದಲ್ಲಿ, ಅಲ್ ಇಂಡಿಯಾ ರೇಡಿಯೊ ಪ್ರಸಾರ ಮಾಡುವ ಹವಾಮಾನ ವರದಿಗಳು ಮತ್ತು ಮೀನುಗಾರರಿಗೆ ನೀಡುವ ಚಂಡಮಾರುತ ಎಚ್ಚರಿಕೆಗಳನ್ನು ಸಹ ಗ್ರಾಮಸ್ಥರು ಅವಲಂಬಿಸುತ್ತಾರೆ.

ಹರಿಚರಣ್ ಹಾಲ್ದಾರ್ ಮತ್ತು ಅಭಯ ಚರಣ್ ಮಂದಲ್ ಅವರು ಮಾನ್ಸೂನ್ ಮೊದಲ್ಗೊಳ್ಳುವ ಮೊದಲು ಯಾವುದೇ ಹವಾಮಾನ ವರದಿಗಳು ತಪ್ಪಿ ಹೋಗದಂತೆ ಒಂದು ಜೊತೆ ಹೆಚ್ಚುವರಿ ಬ್ಯಾಟರಿ ಸೆಲ್ಲುಗಳನ್ನು ಮತ್ತು ರಿಪೇರಿ ಮಾಡಿಸಿದ ಟ್ರಾನ್ಸಿಸ್ಟರ್‌ಗಳನ್ನು ಇಟ್ಟುಕೊಳ್ಳುತ್ತಾರೆ.

ಹಾಲ್ದಾರ್ ಮತ್ತು ಮಂದಲ್ ಪ್ರಕಾರ ನೈಸರ್ಗಿಕ ವಿಪತ್ತುಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ.
ಮತ್ತಷ್ಟು
ಅಣು ಬಿಕ್ಕಟ್ಟು: ಸ್ಪೀಕರ್ ಸ್ಥಾನಕ್ಕೆ ಕುತ್ತು..?
ವಿವಾಹದ ಅಬ್ಬರಕ್ಕೆ ಕುತ್ತು ತಂದಿರುವ ಹಣದುಬ್ಬರ
ಬುಷ್‌ಗಿಂತ ಆಡ್ವಾಣಿ ಅಪಾಯಕಾರಿ: ಅಮರ್ ಸಿಂಗ್
ವಿಶ್ವಾಸ ಮತ ಕೋರಿ: ಪ್ರಧಾನಿಗೆ ಬಿಜೆಪಿ ಒತ್ತಾಯ
ಪುರಿ ದುರಂತ: ತನಿಖೆಗೆ ಸರಕಾರ ಆದೇಶ
ಎಸ್ಪಿ ಬಾಹ್ಯ ಬೆಂಬಲ; ಎಡರಂಗ ದೂರ ದೂರ...