ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೃತೀಯ ರಂಗ 'ಪರಮಾಣು' ವಿಭಜನೆ?  Search similar articles
ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಯುಎನ್‌ಪಿಎಯ ಅಂಗ ಪಕ್ಷಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರೊಂದಿಗೆ ತೃತೀಯ ರಂಗವೆಂದೇ ಬಿಂಬಿಸಲ್ಪಟ್ಟಿರುವ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಒಪ್ಪಂದ ಬೆಂಬಲಿಸಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಅಮರ್ ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಭರವಸೆ ನೀಡಿದ ಬಳಿಕ ಪ್ರತಿಕ್ರಿಯಿಸಿರುವ ಐಎನ್ಎಲ್‌ಡಿ ಮುಖ್ಯಸ್ಥ ಓಂ ಪ್ರಕಾಶ್ ಚೌತಾಲ, ಯುಎನ್‌ಪಿಎಯು ಸಮಾಜವಾದಿ ಪಕ್ಷದ ಮುಖ ನೋಡುವುದಿಲ್ಲ ಎಂದಿದ್ದಾರೆ.

ಭಾನುವಾರ ಯುಎನ್‌ಪಿಎ ಸದಸ್ಯ ಪಕ್ಷಗಳ ಸಭೆ ನಡೆಯಲಿದ್ದು, ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿರುವ ಚೌತಾಲ, ಎಸ್ಪಿಯು ಯುಎನ್‌ಪಿಎಯ ಭಾಗವಾಗಿ ಉಳಿದಿಲ್ಲವೆಂಬುದು ನೋವು ತಂದಿದೆ. ಮುಲಾಯಂ ಅವರು ಈ ಮೈತ್ರಿಕೂಟದ ಸ್ಥಾಪಕ ಸದಸ್ಯರಾಗಿಯೂ ಈ ರೀತಿ ಆಗಿದ್ದು, ಮುಲಾಯಂ ಸಿಂಗ್ ಆರಂಭದಿಂದಲೂ ಅಣು ಒಪ್ಪಂದ ವಿರೋಧಿಸುತ್ತಲೇ ಇದ್ದರು ಎಂದಿದ್ದಾರೆ.

ಸಮಾಜವಾದಿ ಪಕ್ಷವು ಯುಎನ್‌ಪಿಎಯಿಂದ ತಾನಾಗಿಯೇ ಹೊರ ಹೋಗಿದೆ ಎಂದು ತಿಳಿಸಿದ ಲೋಕದಳ ಮುಖ್ಯಸ್ಥ ಓಂ ಪ್ರಕಾಶ್ ಚೌತಾಲ, ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿ ವಿರುದ್ಧ ಮತ ಚಲಾಯಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಈ ಮೊದಲು ಕೂಡ ಸಮಾಜವಾದಿ ಪಕ್ಷವನ್ನು ಅವಮಾನಿಸಿದೆ. ಈಗ ಮೂರನೇ ಬಾರಿಗೆ ಅವರು ಅವಮಾನಿತರಾಗಲು ಹೊರಟಿದ್ದಾರೆ. ಅದು ಅವರ ಹಣೆಬರಹ ಎಂದೂ ಚೌತಾಲ ಹೇಳಿದ್ದಾರೆ.

ಈ ಮಧ್ಯೆ, ಯುಎನ್‌ಪಿಎ ಅಂಗ ಪಕ್ಷ ಅಸೋಮ್ ಗಣ ಪರಿಷತ್ (ಎಜಿಪಿ) ಹೇಳಿಕೆಯೊಂದನ್ನು ನೀಡಿ, ಮುಲಾಯಂ ನೇತೃತ್ವದ ಪಕ್ಷವನ್ನು ಮೈತ್ರಿಕೂಟದಲ್ಲಿ ಉಳಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ಯುಎನ್‌ಪಿಎ ಪಕ್ಷಗಳೆಲ್ಲಾ ಸೇರಿ ನಿರ್ಣಯ ಕೈಗೊಳ್ಳಲಿವೆ ಎಂದು ತಿಳಿಸಿದೆ.

ಕಾಂಗ್ರೆಸ್ಸೇತರ, ಬಿಜೆಪಿಯೇತರ ಎಂದು ಹೇಳಿಕೊಳ್ಳುತ್ತಿರುವ ಯುಎನ್‌ಪಿಎಯಲ್ಲಿ ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷ, ತೆಲುಗು ಗೇಶಂ, ಎಜಿಪಿ, ಐಎನ್ಎಲ್‌ಡಿಗಳಿವೆ. ಇದೀಗ ಎಸ್ಪಿ ತನ್ನದೇ ದಾರಿಯಲ್ಲಿ ತೆರಳಿದ್ದರಿಂದ, ಉಳಿದ ಪಕ್ಷಗಳೂ ತಮ್ಮ ತಮ್ಮ ದಿಕ್ಕಿನಲ್ಲಿ ಪ್ರಯಾಣಿಸುವ ಸಾಧ್ಯತೆಗಳಿವೆ.
ಮತ್ತಷ್ಟು
ಚಂಡಮಾರುತದ ಎಚ್ಚರಿಕೆ ನೀಡುವ ಇರುವೆಗಳು
ಅಣು ಬಿಕ್ಕಟ್ಟು: ಸ್ಪೀಕರ್ ಸ್ಥಾನಕ್ಕೆ ಕುತ್ತು..?
ವಿವಾಹದ ಅಬ್ಬರಕ್ಕೆ ಕುತ್ತು ತಂದಿರುವ ಹಣದುಬ್ಬರ
ಬುಷ್‌ಗಿಂತ ಆಡ್ವಾಣಿ ಅಪಾಯಕಾರಿ: ಅಮರ್ ಸಿಂಗ್
ವಿಶ್ವಾಸ ಮತ ಕೋರಿ: ಪ್ರಧಾನಿಗೆ ಬಿಜೆಪಿ ಒತ್ತಾಯ
ಪುರಿ ದುರಂತ: ತನಿಖೆಗೆ ಸರಕಾರ ಆದೇಶ