ಅಮರನಾಥ್ ಯಾತ್ರೆಗೆ ತೆರಳುವ ಮಾರ್ಗಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಮರನಾಥ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಹಲ್‌ಗಾಂವ್‌ನಿಂದ 45 ಕಿ.ಮಿ.ದೂರದಲ್ಲಿರುವ ಹಾಗೂ ಬಲ್ತಾಲ್‌ದಿಂದ 12 ಕಿ.ಮಿ. ದೂರವಿರುವ ಮಾರ್ಗಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು ತುಂಬಾ ಜಾರುತ್ತಿರುವುದರಿಂದ ಅಮರನಾಥ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಧು ಪಡಾವ್‌ನಿಂದ ಅಮರನಾಥ್ ದೇವಸ್ಥಾನಕ್ಕೆ ತೆರಳುತ್ತಿರುವ ಯಾತ್ರಿಗಳನ್ನು ಮುಂದುವರಿಯದಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
|