ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಮುಂದುವರಿದಲ್ಲಿ ಯುಪಿಎ ಸರಕಾರಕ್ಕೆ ಬೆಂಬಲ ಹಿಂತೆಗೆಯುತ್ತೇನೆ ಎನ್ನುವ ಎಡಪಕ್ಷಗಳ ಬೆದರಿಕೆ ಹೊಸತಲ್ಲ ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಎಡಪಕ್ಷಗಳ ಬೆದರಿಕೆಯಲ್ಲಿ ಯಾವುದೇ ಹೊಸತನವಿಲ್ಲ.ಕಳೆದ ಕೆಲ ವರ್ಷಗಳಿಂದ ಯುಪಿಎ ಸರಕಾರಕ್ಕೆ ಬೆಂಬಲ ಹಿಂತೆಗೆಯುವ ಬೆದರಿಕೆ ಹಾಕುತ್ತಿದ್ದಾರೆ. ಸಿಪಿಎಂ ಪಕ್ಷಗಳಿಗೆ ಭಾರತಕ್ಕಿಂತ ಚೀನಾ ದೇಶದತ್ತ ವಾಲುವುದಕ್ಕೆ ಬದ್ದರಾಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ನಾನು ಕೂಡಾ ಕಾಂಗ್ರೆಸ್‌ನಲ್ಲಿದ್ದೆ. ಆದರೆ ಈ ಮಟ್ಟಿಗೆ ಕಾಂಗ್ರೆಸ್ ರಾಜಕೀಯವಾಗಿ ದಿವಾಳಿಯಾಗಿರುವುದನ್ನು ನಾನು ನೋಡಿರಲಿಲ್ಲ. ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.
|