ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಡರಂಗದ ಡೆಡ್‌ಲೈನ್: ಪ್ರಧಾನಿ ಜಪಾನ್‌ಗೆ  Search similar articles
ಭಾರತ-ಅಮೆರಿಕ ಅಣ್ವಸ್ತ್ರ ಒಪ್ಪಂದದ ಕುರಿತಂತೆ ಯುಪಿಎ ಸರಕಾರಕ್ಕೆ ಎಡಪಕ್ಷಗಳು ನೀಡಿರುವ ಅಂತಿಮ ಗಡುವು ಇಂದು ಕೊನೆಗೊಳ್ಳುತ್ತಿರುವಂತೆಯೇ, ಪ್ರಧಾನಿ ಮನಮೋಹನ್ ಸಿಂಗ್ ಅವರು ಮಹತ್ವದ ಜಿ-8 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ನತ್ತ ಪ್ರಯಾಣ ಬೆಳೆಸಿದರು.

ಪರಮಾಣು ಒಪ್ಪಂದದ ಕುರಿತಾಗಿ ಮುಂದಿನ ಹೆಜ್ಜೆ ಇಡುವುದೇ ಎಂಬ ಬಗ್ಗೆ ಎಡಪಕ್ಷಗಳು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಸ್ಪಷ್ಟ ಉತ್ತರ ನೀಡಿಲ್ಲ. ಇದಕ್ಕೆ ಪ್ರಧಾನ ಕಾರಣವೆಂದರೆ, ಎಡಪಕ್ಷಗಳನ್ನು ಧಿಕ್ಕರಿಸಿದರೂ, ಹೊರಗಿನಿಂದ ನೀಡುತ್ತಿರುವ ಬೆಂಬಲ ಹಿಂತೆಗೆದುಕೊಂಡರೆ, ಅದನ್ನು ಬಚಾವ್ ಮಾಡಲು ಸಮಾಜವಾದಿ ಪಕ್ಷ ಈಗಾಗಲೇ ಒಪ್ಪಿಗೆ ನೀಡಿದೆ.

ಎಡಪಕ್ಷಗಳು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದರಿಂದಾಗಿ, ಈ ಪತ್ರಕ್ಕೆ ಉತ್ತರಿಸುವುದು ಪ್ರಣಬ್ ಕೆಲಸ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ವೀರಪ್ಪ ಮೊಯಿಲಿ ಸುದ್ದಿಗಾರರಿಗೆ ಹೇಳಿದ್ದಾರೆ.

ಈ ಹಿಂದೆ, ಎಡಪಕ್ಷಗಳು ನೀಡಿದ್ದ ಅಂತಿಮ ಗಡುವನ್ನು ಕಾಂಗ್ರೆಸ್ ತಿರಸ್ಕರಿಸಿದ್ದು, ಸಾರ್ವಭೌಮ ಸರಕಾರ ಅಥವಾ ಪಕ್ಷಕ್ಕೆ ಎಡಪಕ್ಷಗಳು ಡೆಡ್‌ಲೈನ್ ವಿಧಿಸುವಂತಿಲ್ಲ ಎಂದು ಸ್ಪಷ್ಟೋಕ್ತಿಗಳಲ್ಲಿ ಹೇಳಿತ್ತು.

ಇದೀಗ ಜಪಾನ್‌ಗೆ ತೆರಳಿರುವ ಪ್ರಧಾನಿ ಸಿಂಗ್ ಅವರು ಜಿ-8 ಸಮಾವೇಶದ ಪಾರ್ಶ್ವದಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರನ್ನು ಭೇಟಿಯಾಗಿ ಈ ವಿವಾದಾತ್ಮಕ ಒಪ್ಪಂದದ ಕುರಿತು ಬುಧವಾರ ಮಾತುಕತೆ ನಡೆಸಲಿದ್ದಾರೆ.

ಈ ಮಧ್ಯೆ, ಬೆಂಬಲ ಹಿಂತೆಗೆದುಕೊಳ್ಳಲು ಪ್ರಧಾನಿ ಜಪಾನ್‌ನಿಂದ ಹಿಂತಿರುಗಲೇಬೇಕಿಲ್ಲ ಎಂದು ಎಡಪಕ್ಷಗಳು ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಯಾವುದೇ ಕ್ಷಣ ಈ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ ಎಂಬ ಬಗ್ಗೆ ಸುಳಿವು ನೀಡಿದ್ದವು.
ಮತ್ತಷ್ಟು
ರಾಜಕೀಯವಾಗಿ ಕಾಂಗ್ರೆಸ್ ದಿವಾಳಿ-ಮಮತಾ
ಪ್ರತಿಭಟನೆ:ಗೋಲಿಬಾರ್‌ನಲ್ಲಿ ಒಬ್ಬನ ಸಾವು
ಹವಾಮಾನ ವೈಪರೀತ್ಯ ಅಮರನಾಥ್ ಯಾತ್ರೆ ರದ್ದು
ತೃತೀಯ ರಂಗ 'ಪರಮಾಣು' ವಿಭಜನೆ?
ಚಂಡಮಾರುತದ ಎಚ್ಚರಿಕೆ ನೀಡುವ ಇರುವೆಗಳು
ಅಣು ಬಿಕ್ಕಟ್ಟು: ಸ್ಪೀಕರ್ ಸ್ಥಾನಕ್ಕೆ ಕುತ್ತು..?