ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು ಸರಕಾರ ಪತನ; ಅಜಾದ್ ರಾಜೀನಾಮೆ  Search similar articles
PIB
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್ ಅವರು ಸೋಮವಾರ ವಿಶ್ವಾಸ ಮತ ಗಳಿಸುವಲ್ಲಿ ಸೋತಿದ್ದು, ಈ ಹಿನ್ನೆಲೆಯಲ್ಲಿ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅಮರಾನಾಥ ಮಂದಿರ ಮಂಡಳಿಗೆ ಅರಣ್ಯ ಭೂಮಿ ಹಸ್ತಾಂತರ ವಿವಾದಕ್ಕೆ ಸಂಬಂಧಿಸಿದಂತೆ, ಇದನ್ನು ವಿರೋಧಿಸಿ ಪಿಡಿಪಿ ಪಕ್ಷವು ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದು, ಇದರಿಂದಾಗಿ ಸರಕಾರ ಬಹುಮತದ ಕೊರತೆ ಎದುರಿಸುತ್ತಿತ್ತು.

ಸೋಮವಾರ ಮುಂಜಾನೆ ಶಾಸನ ಸಭೆಯಲ್ಲಿ ವಿಶ್ವಾಸಮತಯಾಚನೆ ಗೊತ್ತುವಳಿ ಮಂಡಿಸಿದ ಅಜಾದ್, ತನ್ನ ಸರಕಾರವು 'ಶುದ್ಧ ರಾಜಕೀಯದ' ಪರವಾಗಿದ್ದು, ಕುದುರೆ ವ್ಯಾಪಾರ ನಡೆಸದು ಎಂದು ನುಡಿದರು.

ಪಿಡಿಪಿಯ ಬೆಂಬಲ ಹಿಂತೆಗೆತದಿಂದ ಅಲ್ಪಸಂಖ್ಯಾತವಾದ ಸರಕಾರ ನಿರೀಕ್ಷೆಯಂತೆ ವಿಶ್ವಾಸ ಮತಗಳಿಸುವಲ್ಲಿ ಸೋತಿದ್ದು, ಈ ಹಿನ್ನೆಲೆಯಲ್ಲಿ ಅಜಾದ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಮತ್ತಷ್ಟು
ತಲ್ವಾರ್ ವಿರುದ್ಧ ಇನ್ನೂ ಪುರಾವೆ ಇಲ್ಲ
ಎಡರಂಗದ ಡೆಡ್‌ಲೈನ್: ಪ್ರಧಾನಿ ಜಪಾನ್‌ಗೆ
ರಾಜಕೀಯವಾಗಿ ಕಾಂಗ್ರೆಸ್ ದಿವಾಳಿ-ಮಮತಾ
ಪ್ರತಿಭಟನೆ:ಗೋಲಿಬಾರ್‌ನಲ್ಲಿ ಒಬ್ಬನ ಸಾವು
ಹವಾಮಾನ ವೈಪರೀತ್ಯ ಅಮರನಾಥ್ ಯಾತ್ರೆ ರದ್ದು
ತೃತೀಯ ರಂಗ 'ಪರಮಾಣು' ವಿಭಜನೆ?