ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಸ್ರೇಲ್ ಉನ್ನತ ರಾಜತಾಂತ್ರಿಕರ ಭಾರತ ಭೇಟಿ  Search similar articles
ಇಸ್ರೇಲ್ ವಿದೇಶಾಂಗ ವ್ಯವಹಾರ ಸಚಿವಾಲಯದ ಉನ್ನತ ಅಧಿಕಾರಿ ಅಹರಾನ್ ಅಬ್ರಮೊವಿಚ್ ಅವರು ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ತಮ್ಮ ಈ ಭೇಟಿಯ ವೇಳೆಗೆ ಅವರು ನವದೆಹಲಿ ನಾಯಕರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಅಲ್ಲದೆ, ಮಧ್ಯಪ್ರಾಚ್ಯದಲ್ಲಿನ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಮಾತುಕತೆಯಂಗವಾಗಿ ಮತ್ತು ಎರಡೂ ರಾಷ್ಟ್ರಗಳಿಗೆ ಸಂಬಂಧಿಸುವಂತಹ ಅಂತಾರಾಷ್ಟ್ರೀಯ ವಿಚಾರಗಳಿಗೆ ಗಮನಹರಿಸಲು ರಾಜತಾಂತ್ರಿಕರು ಭಾರತಕ್ಕೆ ಭೇಟಿ ನೀಡಿರುವುದಾಗಿ ಇಸ್ರೇಲ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಅಬ್ರಮೊವಿಚ್ ಅವರು ಪ್ರಾಂತ್ಯದ ಬೆಳವಣಿಗೆಗಳ ಕುರಿತೂ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ. ನಾರಾಯಣನ್ ಅವರು ಇಸ್ರೇಲ್‌ನ ಬದ್ಧವೈರಿ ಇರಾನ್‌ಗೆ ಭೇಟಿ ನೀಡಿರುವ ಕೆಲವೇ ದಿನಗಳಲ್ಲಿ ಇಸ್ರೇಲ್ ಅಧಿಕಾರಿ ಭಾರತಕ್ಕೆ ಭೇಟಿ ನೀಡಿರುವುದು ಮಹತ್ವವೆನಿಸಿದೆ.

ಇದು ಅಬ್ರಮೊವಿಚ್ ಅವರ ಪ್ರಥಮ ಭಾರತ ಭೇಟಿಯಾಗಿದ್ದು, ಅವರು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಮತ್ತಷ್ಟು
ಜಮ್ಮು ಸರಕಾರ ಪತನ; ಅಜಾದ್ ರಾಜೀನಾಮೆ
ತಲ್ವಾರ್ ವಿರುದ್ಧ ಇನ್ನೂ ಪುರಾವೆ ಇಲ್ಲ
ಎಡರಂಗದ ಡೆಡ್‌ಲೈನ್: ಪ್ರಧಾನಿ ಜಪಾನ್‌ಗೆ
ರಾಜಕೀಯವಾಗಿ ಕಾಂಗ್ರೆಸ್ ದಿವಾಳಿ-ಮಮತಾ
ಪ್ರತಿಭಟನೆ:ಗೋಲಿಬಾರ್‌ನಲ್ಲಿ ಒಬ್ಬನ ಸಾವು
ಹವಾಮಾನ ವೈಪರೀತ್ಯ ಅಮರನಾಥ್ ಯಾತ್ರೆ ರದ್ದು