ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಹಾರ: ಬಸ್ ಕಮರಿಗೆ ಉರುಳಿ 6 ಸಾವು  Search similar articles
ಬಿಹಾರದ ನಳಂದ ಜಿಲ್ಲೆಯಲ್ಲಿ ಮಿನಿಬಸ್ಸೊಂದು ಕಮರಿಗೆ ಉರುಳಿದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ ಆರು ಮಂದಿ ಸಾವನ್ನಪ್ಪಿರುವ ದುರ್ಘಟನೆ ಸೋಮವಾರ ಸಂಭವಿಸಿದೆ.

ಬಸ್ ಹರ್ನೌತ್-ಬಿಹಾರ್‌ಶರೀಫ್ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಗೊನಾವ ಎಂಬ ಗ್ರಾಮದಿಂದ ಬಿಹಾರ್‌ಶರೀಫ್‌ಗೆ ತೆರಳುತ್ತಿದ್ದು, ಇದ್ದಕ್ಕಿದ್ದಂತೆ ದಿಕ್ಕು ತಪ್ಪಿ, ರೈಲ್ವೇ ಕೋಚ್ ಫ್ಯಾಕ್ಟರಿಯ ಬಳಿ ಕಂದಕ್ಕೆ ಉರುಳಿತು ಎಂದು ವರದಿ ತಿಳಿಸಿದೆ.

ಇದುವರೆಗೆ ಆರು ದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನಷ್ಟು ದೇಹಗಳು ಬಸ್ಸಿನಡಿ ಸಿಲುಕಿರಬಹುದು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಬಹುದೆಂದು ನಿರೀಕ್ಷಿಸಿರುವುದಾಗಿ ಮೂಲಗಳು ಹೇಳಿವೆ.
ಮತ್ತಷ್ಟು
ಕಾಬೂಲ್ ಸ್ಫೋಟ: ಉನ್ನತ ಮಟ್ಟದ ಸಭೆ
ಇಸ್ರೇಲ್ ಉನ್ನತ ರಾಜತಾಂತ್ರಿಕರ ಭಾರತ ಭೇಟಿ
ಜಮ್ಮು ಸರಕಾರ ಪತನ; ಅಜಾದ್ ರಾಜೀನಾಮೆ
ತಲ್ವಾರ್ ವಿರುದ್ಧ ಇನ್ನೂ ಪುರಾವೆ ಇಲ್ಲ
ಎಡರಂಗದ ಡೆಡ್‌ಲೈನ್: ಪ್ರಧಾನಿ ಜಪಾನ್‌ಗೆ
ರಾಜಕೀಯವಾಗಿ ಕಾಂಗ್ರೆಸ್ ದಿವಾಳಿ-ಮಮತಾ