ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಎಇಎಯೊಂದಿಗೆ ಒಪ್ಪಂದ ಮುಂದುವರಿಕೆ: ಪ್ರಧಾನಿ ಸ್ಪಷ್ಟನೆ  Search similar articles
ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯೊಂದಿಗೆ ವಿವಾದಿತ ಭಾರತ ಅಮೆರಿಕ ಪರಮಾಣು ಒಪ್ಪಂದದಲ್ಲಿ ಸರಕಾರವು ಮುಂದುವರಿಯಲಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸೋಮವಾರ ಘೋಷಿಸಿದ್ದಾರೆ.

ವಿಯೆನ್ನಾದ ಜಿ8 ಶೃಂಗಸಭೆಯಲ್ಲಿ ಈ ವಿಚಾರವನ್ನು ತಿಳಿಸಿದ ಅವರು, ಒಪ್ಪಂದ ಪ್ರಕ್ರಿಯೆಯು ಶೀಘ್ರವಾಗಿಯೇ ಮುಂದುವರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯೊಂದಿಗಿನ ಭಾರತ ಅಮೆರಿಕ ಅಣು ಒಪ್ಪಂದ ಪ್ರಕ್ರಿಯೆಯು ಶೀಘ್ರವಾಗಿಯೇ ಮುಂದುವರಿಯಲಿದ್ದು, ಒಂದು ವೇಳೆ ಎಡಪಕ್ಷಗಳು ಬೆಂಬಲವನ್ನು ಹಿಂತೆಗೆದುಕೊಂಡಲ್ಲಿ ಸಂಸತ್ ಎದುರಿಸುವ ಭೀತಿಯನ್ನು ಸರಕಾರವು ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ಭಾರತ ಅಮೆರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಸರಕಾರವು ಐಎಇಎ ಸುರಕ್ಷತಾ ಒಪ್ಪಂದದಲ್ಲಿ ಮುಂದುವರಿಯಲಿದೆಯೇ ಎಂಬುದಾಗಿ ಕೇಳಿ ಎಡಪಕ್ಷಗಳು ಬರೆದಿರುವ ಪತ್ರಕ್ಕೆ ಉತ್ತರಿಸಿರುವ ಕಾಂಗ್ರೆಸ್, ಈ ವಿವಾದದ ಕುರಿತು ಜುಲೈ 10ರಂದು ಯುಪಿಎ ಎಡಪಕ್ಷಗಳ ಸಮಿತಿಯು ಇನ್ನೊಂದು ಸುತ್ತಿನ ಸಭೆಯ ಪ್ರಸ್ತಾಪವಿಟ್ಟಿದೆ.

ಈ ಪ್ರಸ್ತಾಪದ ಬೆನ್ನಲ್ಲೇ, ಐಎಇಎನೊಂದಿಗೆ ಒಪ್ಪಂದವನ್ನು ಮುಂದುವರಿಸುವುದಾಗಿ ವಿಯೆನಾದ ಜಿ8 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ಸಿಂಗ್ ಘೋಷಿಸಿದ್ದಾರೆ.
ಮತ್ತಷ್ಟು
ಐಎಇಎ: ಸರಕಾರದಿಂದ ಇನ್ನೊಂದು ಸಭೆಯ ಪ್ರಸ್ತಾಪ
ಬಿಹಾರ: ಬಸ್ ಕಮರಿಗೆ ಉರುಳಿ 6 ಸಾವು
ಕಾಬೂಲ್ ಸ್ಫೋಟ: ಉನ್ನತ ಮಟ್ಟದ ಸಭೆ
ಇಸ್ರೇಲ್ ಉನ್ನತ ರಾಜತಾಂತ್ರಿಕರ ಭಾರತ ಭೇಟಿ
ಜಮ್ಮು ಸರಕಾರ ಪತನ; ಅಜಾದ್ ರಾಜೀನಾಮೆ
ತಲ್ವಾರ್ ವಿರುದ್ಧ ಇನ್ನೂ ಪುರಾವೆ ಇಲ್ಲ