ಕೇಂದ್ರೀಯ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್, ತಮ್ಮ ರೈಲ್ವೇ ಬಜೆಟನ್ನು ಮಂಡಿಸುವ ವೇಳೆಗೆ ಹಿಂದಿ ಕನವವೊಂದನ್ನು ಆಂಗ್ಲಭಾಷೆಗೆ ಅನುವಾದಿಸುವ ವೀಡಿಯೋ ಕ್ಲಿಪ್ ಒಂದು ಯೂಟ್ಯೂಬ್‌ನಲ್ಲಿ ಸೂಪರ್ ಹಿಟ್ ಆಗಿದೆ.
ಜನಪ್ರಿಯ ವೀಡಿಯೋ ಶೇರಿಂಗ್ ವೆಬ್‌ಸೈಟೊಂದರಲ್ಲಿ ಯಾದವ್ ಅವರು ತಮ್ಮ ರೈಲ್ವೇ ಸಾಧನೆಗಳನ್ನು ಮನವರಿಕೆ ಮಾಡಲು ಹಿಂದಿ ಕವನವೊಂದನ್ನು ವಾಚಿಸುತ್ತಿದ್ದಾರೆ. ಫೆಬ್ರವರಿ 26, 2008ರ ಈ ವೀಡಿಯೋ ಕ್ಲಿಪ್ ವಿಶ್ವಾದ್ಯಂತ ಸುಮಾರು 3.5 ಲಕ್ಷಕ್ಕಿಂತಲೂ ಹೆಚ್ಚು ಹಿಟ್‌ಗಳನ್ನು ಧಕ್ಕಿಸಿಕೊಂಡಿದೆಯಂತೆ!
ಬಜೆಟ್ ಮಂಡಿಸುತ್ತಿದ್ದ ಯಾದವ್ ಅರೆಕ್ಷಣ ನಿಲ್ಲಿಸಿ, "ನಾನಿದನ್ನು ಇಲ್ಲಿಯೇ ಇಂಗ್ಲೀಷ್‌ಗೆ ಅನುವಾದಿಸುತ್ತೇನೆ" ಎನ್ನುತ್ತಾ ಇಡಿಯ ಪದ್ಯವನ್ನು ಹಿಂದಿಯಲ್ಲಿ ವಾಚಿಸಿ ಒಂದಷ್ಟು ನಗುಸೂಸಿ ಇಂಗ್ಲೀಷ್‌ಗೆ ಭಾಷಾಂತರಿಸಲು ಯತ್ನಿಸುವ ದೃಶ್ಯ ಅಸಂಖ್ಯಾತ ವೀಕ್ಷಕರನ್ನು ಸೆಳೆದಿದೆ.
ಒತ್ತರಿಸಿ ಬರುತ್ತಿರುವ ನಗುವನ್ನು ತಡೆಯಲು ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು, ಲಾಲೂ ಅವರ ಈ ಪ್ರಯತ್ನವನ್ನು ಕಂಡು ಮುಖಕ್ಕೆ ಕೈ ಅಡ್ಡವಿಸಿರುವ ನಗುತ್ತಿರುವ ಚಿತ್ರವೂ ಈ ಕ್ಲಿಪ್ಪಿಂಗ್‌ನಲ್ಲಿದೆ.
ನಾನು ಅದ್ಭುತವಾದ ಕಾರ್ಯವೆಸಗಿದ್ದೇನೆಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷವೂ ಪ್ರತಿದಿನ ತಾನು ಕೋಟಿಗಟ್ಟಲೆ ಸಂಪಾದಿಸಿರುವುದಾಗಿ ಯಾದವ್ ಹೇಳಿಕೊಂಡಿದ್ದಾರೆ.
ತಾನೊಂದು ಹಣ್ಣಿನ ಗಿಡ ನೆಟ್ಟಿರುವುದಾಗಿ ಹೇಳಿರುವ ಲಾಲೂ, ಪ್ರತಿವರ್ಷ ಇದು ಫಲಬೀರುತ್ತಿದೆ ಎಂದು ಹೇಳಿದ್ದಾರೆ.
ಲಾಲೂ ಅವರ ಈ ಪದ್ಯದಿಂದ ಸದನದಲ್ಲಿ ವಿನೋದ ಲಾಸ್ಯವಾಡಿದ್ದು, ಸ್ಪೀಕರ್ ಚಟರ್ಜಿಯವರು ರೈಲ್ವೇಯು ಇನ್ಯಾವುದೇ ಸಮಸ್ಯೆಯನ್ನು ಎದುರಿಸದು ಎಂದು ಹೇಳುವ ದೃಶ್ಯವು ಕ್ಲಿಪ್ಪಿಂಗ್‌ನಲ್ಲಿದೆ.
|