ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಪಿಎಯಿಂದ ಹೊರ ನಡೆದ ಎಡಪಕ್ಷಗಳು  Search similar articles
ಅಣು ಒಪ್ಪಂದ ಕುರಿತ ಕಳೆದ ಹಲವು ದಿನಗಳಿಂದ ಯುಪಿಎ ಮತ್ತು ಎಡಪಕ್ಷಗಳ ನಡುವೆ ನಡೆಯುತ್ತಿದ್ದ ರಾಜಕೀಯ ನಾಟಕ ಕೊನೆಗೂ ಒಂದು ಹಂತಕ್ಕೆ ಬಂದಿದ್ದು, ಎಡಪಕ್ಷಗಳು ಮಂಗಳವಾರದ ಸಭೆಯಲ್ಲಿ ಬೆಂಬಲ ಹಿಂತೆಗೆಯಲು ನಿರ್ಧರಿಸಿದ್ದಾರೆ. ಯಾವುದೇ ಸಮಯದಲ್ಲೂ ಈ ಕುರಿತ ಔಪಚಾರಿಕ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು, ತಮ್ಮ ಸರಕಾರವು ಅಣುಒಪ್ಪಂದಕ್ಕೆ ಅವಶ್ಯವಿರುವ ಐಎಇಎಯೊಂದಿಗೆ ಸುರಕ್ಷತಾ ಒಪ್ಪಂದದಲ್ಲಿ ಮುಂದುವರಿಯುವುದಾಗಿ ಘೋಷಿಸಿರುವ ಒಂದು ದಿನದ ಬಳಿಕ ಎಡಪಕ್ಷಗಳ ಈ ನಿರ್ಧಾರ ಹೊರಬಿದ್ದಿದೆ.

ಎಡಪಕ್ಷಗಳ ಸಮನ್ವಯ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಬುಧವಾರಾಷ್ಟ್ರಪತಿ ಪ್ರತಿಭಪಾಟೀಲಅವರನ್ನಭೇಟಿಯಾಗಿ ಬೆಂಬವಾಪಸಾತಿ ಪತ್ರವನ್ನಸಲ್ಲಿಸುವುದಾಗಿ ಹೇಳಿದರು.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿಯವರಿಗೆ ಪತ್ರವೊಂದನ್ನು ಕಳುಹಿಸಿರುವುದಾಗಿ ಹೇಳಿದ ಕಾರಟ್, ಜುಲೈ 10 ರಂದು ಕರೆದಿರುವ ಯುಪಿಎ-ಎಡಪಕ್ಷಗಳ ಸಮಿತಿ ಸಭೆಯು ಅರ್ಥರಹಿತವಾದುದು ಎಂದು ಪತ್ರದಲ್ಲಿ ಹೇಳಿರುವುದಾಗಿ ತಿಳಿಸಿದರು.

ಏತನ್ಮಧ್ಯೆ ಸರಕಾರವು ಸಂಸತ್ತಿನಲ್ಲಿ ವಿಶ್ವಾಸಮತ ಯಾಚಿಸುವಂತೆ ಸೂಚಿಸಲು ಎಡಪಕ್ಷಗಳು ರಾಷ್ಟ್ರಪತಿಯನ್ನು ಕೋರಲು ನಿರ್ಧರಿಸಿದ್ದಾರೆ.

"ವಿಶ್ವಾಸಕ್ಕೆ ಭಂಗವಾಗಿದೆ. ಮತ್ತು ಸಂಬಂಧವು ಹಳಸಿದೆ ಹಾಗಾಗಿ ವಿದೇಶದಲ್ಲಿರುವ ಪ್ರಧಾನಿ ಮರಳಲು ನಾವು ಕಾಯುವುದಿಲ್ಲ" ಎಂದು ಕ್ರಾಂತಿಕಾರಿ ಸಮಾಜವಾದಿ ಪಕ್ಷದ ನಾಯಕ ಟಿ.ಜೆ.ಚಂದ್ರಚೂಡನ್ ಅವರು ಎಡಪಕ್ಷಗಳ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಸಿಪಿಐ-ಎಂ ಮುಖ್ಯಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಪ್ರಕಾಶ್ ಕಾರಟ್, ಸಿಪಿಐನ ಎ.ಬಿ.ಬರ್ದನ್ ಮತ್ತು ಇತರ ಸಿಪಿಐ ನಾಯಕರಾದ ಡಿ.ರಾಜ, ಆರ್ಎಸ್‌ಪಿ ನಾಯಕರಾದ ಚಂದ್ರಚೂಡನ್, ಅಬನಿ ರಾಯ್ ಮತ್ತು ಫಾರ್ವರ್ಡ್ ಬ್ಲಾಕ್‌ನ ದೇವವೃತ ಬಿಸ್ವಾಸ್ ಮತ್ತು ಜಿ.ದೇವರಾಜನ್ ಅವರುಗಳು ಸಭೆಯಲ್ಲಿ ಭಾಗವಹಿಸಿದ್ದರು.

ಬುಧವಾರ ಎಡಪಕ್ಷಗಳು ರಾಷ್ಟ್ರತಿಯವರನ್ನು ಭೇಟಿಯಾಗಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ತುರ್ತುಸಭೆ ಕರೆದಿದೆ.
ಮತ್ತಷ್ಟು
ಯೂಟ್ಯೂಬ್‌ನಲ್ಲೂ ಲಾಲೂ ಶೈನಿಂಗ್
ಐಎಇಎಯೊಂದಿಗೆ ಒಪ್ಪಂದ ಮುಂದುವರಿಕೆ: ಪ್ರಧಾನಿ ಸ್ಪಷ್ಟನೆ
ಐಎಇಎ: ಸರಕಾರದಿಂದ ಇನ್ನೊಂದು ಸಭೆಯ ಪ್ರಸ್ತಾಪ
ಬಿಹಾರ: ಬಸ್ ಕಮರಿಗೆ ಉರುಳಿ 6 ಸಾವು
ಕಾಬೂಲ್ ಸ್ಫೋಟ: ಉನ್ನತ ಮಟ್ಟದ ಸಭೆ
ಇಸ್ರೇಲ್ ಉನ್ನತ ರಾಜತಾಂತ್ರಿಕರ ಭಾರತ ಭೇಟಿ