ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದ: ಪಿಎಂರಿಂದ ಬುಷ್ ಭೇಟಿ  Search similar articles
ಪ್ರಧಾನಿ ಅಮೆರಿಕದೊಂದಿಗಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಬೆಂಬಲ ಕೋರಿ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಮತ್ತು ಅಣು ಸರಬರಾಜು ಸಮೂಹದ ಸದಸ್ಯರನ್ನು ಭೇಟಿಯಾಗಲಿದ್ದಾರೆ.

ಜಿ-8 ಸಮ್ಮೆಳನಕ್ಕೆ ಆಗಮಿಸಿದ ಎಲ್ಲ ನಾಯಕರು ಉಳಿದುಕೊಂಡಿರುವ ಟೋಯದಿಂದ ಬುಷ್ ಅವರನ್ನು ಭೇಟಿಯಾಗಲು ಪ್ರಧಾನಿ ಸಿಂಗ್ 200ಕಿ.ಮೀ.ಗಳ ದೂರ ಕ್ರಮಿಸಲಿದ್ದಾರೆ

ಮಾತುಕತೆಯು ಬೆಳಗಿನ 8 ಗಂಟೆಗೆ ಮೊದಲು ನಡೆಯಲಿದೆ. ಆನಂತರ ಪ್ರಧಾನ ಮಂತ್ರಿ ಜಿ-8ನ ಉಪಹಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಅಣು ಒಪ್ಪಂದದ ಪ್ರಗತಿಯ ಕುರಿತು ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿ ಸಿಂಗ್ ಅಣು ಒಪ್ಪಂದದ ಕುರಿತು ಮತ್ತು ಎಡಪಕ್ಷಗಳ ತೀವ್ರ ವಿರೋಧ ಮತ್ತು ಸಂಸತ್ತಿನಲ್ಲಿ ಎದುರಾಗಲಿರುವ ಸಮಸ್ಯೆಗಳ ಸಂಭವನೀಯತೆ ಮತ್ತು ರಾಷ್ಟ್ರ ರಾಜಕೀಯದಲ್ಲಾದ ಇತ್ತೀಚಿನ ಬೆಳವಣಿಗೆಗಳು, ತಮಗೆ ದೊರಕಿರುವ ಹೊಸ ಮತ್ತು ನಿರ್ಣಾಯಕ ಬೆಂಬಲಗಳ ಬಗ್ಗೆ ಬುಷ್‌ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

ಭಾರತ ಕೇಂದ್ರಿತ ರಕ್ಷಣಾ ಒಪ್ಪಂದವನ್ನು ಪಡೆದುಕೊಳ್ಳಲು ಅಟೋಮಿಕ್ ಎನರ್ಜಿ ವಾಚ್ ಡಾಗ್(ಐಎಇಎ)ಯನ್ನು ಸಂಧಿಸುವ ಸರಕಾರದ ಯೋಜನೆ ಮತ್ತು ಈ ವಿಷಯವನ್ನು ಎನ್.ಎಸ್.ಜಿ.ಗೆ ಒಯ್ಯುವ ವಿಚಾರಗಳು ಈ ಮಾತುಕತೆಯ ಸಂದರ್ಭದಲ್ಲಿ ರೂಪು ತಳೆಯಲಿವೆ ಎಂದು ನಿರೀಕ್ಷಿಸಲಾಗಿದೆ.
ಮತ್ತಷ್ಟು
ಯುಪಿಎಯಿಂದ ಹೊರ ನಡೆದ ಎಡಪಕ್ಷಗಳು
ಯೂಟ್ಯೂಬ್‌ನಲ್ಲೂ ಲಾಲೂ ಶೈನಿಂಗ್
ಐಎಇಎಯೊಂದಿಗೆ ಒಪ್ಪಂದ ಮುಂದುವರಿಕೆ: ಪ್ರಧಾನಿ ಸ್ಪಷ್ಟನೆ
ಐಎಇಎ: ಸರಕಾರದಿಂದ ಇನ್ನೊಂದು ಸಭೆಯ ಪ್ರಸ್ತಾಪ
ಬಿಹಾರ: ಬಸ್ ಕಮರಿಗೆ ಉರುಳಿ 6 ಸಾವು
ಕಾಬೂಲ್ ಸ್ಫೋಟ: ಉನ್ನತ ಮಟ್ಟದ ಸಭೆ