ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆಯಲ್ಲಿ ಬಹುಮತ: ಓಟಿನ ಶೋಧದಲ್ಲಿ ಯುಪಿಎ  Search similar articles
ಎಡಪಕ್ಷಗಳು ಬೆಂಬಲ ಹಿಂತೆಗೆದ ಹೊರತಾಗಿಯೂ ಕೇಂದ್ರದ ಯುಪಿಎ ಸರಕಾರವು ಲೋಕಸಭೆಯಲ್ಲಿ ವಿಶ್ವಾಸ ಮತ ಗೆಲ್ಲುವುದೇ? ಇದಕ್ಕೆ ಸಾಕಷ್ಟು ಸಂಖ್ಯಾಬಲವನ್ನು ಅದು ಹೊಂದಿದೆಯೇ?

541 ಸದಸ್ಯ ಬಲದ ಲೋಕಸಭೆಯಲ್ಲಿ ಸರಕಾರ ಉಳಿಯಬೇಕಿದ್ದರೆ ಬೇಕಾಗಿರುವ ಸಂಖ್ಯೆ 272. ಸದ್ಯದ ಮಟ್ಟಿಗೆ ಯುಪಿಎ ಮೈತ್ರಿಕೂಟದ ಬಳಿ 225 ಓಟುಗಳಿವೆ. ಕಾಂಗ್ರೆಸ್ ಸರಕಾರದ ಹೊಸ ಮಿತ್ರ ಸಮಾಜವಾದಿ ಪಕ್ಷದ 39 ಸಂಸದರು ಸೇರಿದಲ್ಲಿ 264 ಆಗುತ್ತದೆ. ಆದರೆ ಎಸ್ಪಿಯಲ್ಲಿ ಕೂಡ ಕಾಂಗ್ರೆಸ್ ಬೆಂಬಲಿಸಲು ಒಪ್ಪದಿರುವ 'ಬಂಡುಕೋರ'ರೂ ಇರಬಹುದು.

ಹೀಗೆ ಅಸಮಾಧಾನಗೊಂಡವರು ಸರಕಾರದ ವಿರುದ್ಧ ಮತ ಚಲಾಯಿಸಬಹುದು ಅಥವಾ ವಿಶ್ವಾಸ ಮತದ ಅಧಿವೇಶನದಲ್ಲಿ ಪಾಲ್ಗೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ. ಸರಕಾರಕ್ಕೆ 35 ಎಸ್ಪಿ ಸಂಸದರು ಬೆಂಬಲಿಸಿದರೆ, 260 ದೊರೆಯುತ್ತದೆ.

ಇನ್ನು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ 3, ದೇವೇಗೌಡರ ಜನತಾ ದಳ ಎಸ್ 2 ಸ್ಥಾನಗಳನ್ನು ಈಗಾಗಲೇ ಯುಪಿಎಗೆ ಭರವಸೆ ನೀಡಿದೆ.

ಇದು ಹೊರತಾಗಿ ಕಾಂಗ್ರೆಸ್ ಪಕ್ಷವು ಗಾಳ ಹಾಕಲು ಸಾಧ್ಯವಿರುವ ಪಕ್ಷಗಳ ಪಟ್ಟಿ ಕೆಳಗೆ ನೀಡಲಾಗಿದೆ.

ಸ್ವತಂತ್ರರು - 3
ಮಿಜೋ ನ್ಯಾಷನಲ್ ಫ್ರಂಟ್ - 1
ಎಸ್‌ಡಿಎಫ್ - 1
ಎನ್ಎಲ್‌ಪಿ -1
ನ್ಯಾಷನಲ್ ಕಾನ್ಫರೆನ್ಸ್ - 2
ಶಿರೋಮಣಿ ಅಕಾಲಿ ದಳ - 8
ತೃಣಮೂಲ ಕಾಂಗ್ರೆಸ್ - 2
ಬಿಎನ್‌ಪಿ - 1
ಟಿಆರ್ಎಸ್ - 3

ಇವುಗಳಲ್ಲಿ ಕನಿಷ್ಠ 7 ಸ್ಥಾನಗಳನ್ನು ಹೊಂಚಿಕೊಳ್ಳುವುದು ಕಾಂಗ್ರೆಸ್‌ಗೆ ಕಷ್ಟವೇನಲ್ಲ. ಇದೇ ಕಾರಣಕ್ಕೆ ಯುಪಿಎ, ಎಡಪಕ್ಷಗಳ ಒತ್ತಡಕ್ಕೆ ಮಣೆ ಹಾಕಿಲ್ಲ ಮತ್ತು ಅವುಗಳು ನೀಡಿದ ಡೆಡ್‌ಲೈನ್‌ಗೆ ಕೂಡ ಸೊಪ್ಪು ಹಾಕಿಲ್ಲ.

ಸರಳ ಬಹುಮತ ಕಷ್ಟವೇನಲ್ಲ. 272ಕ್ಕಿಂತಲೂ ಹೆಚ್ಚು ಮತಗಳನ್ನು ಸೆಳೆದುಕೊಂಡು ಸರಕಾರ ಭದ್ರಪಡಿಸಿಕೊಳ್ಳಬಹುದು. ಆ ಮತಗಳನ್ನು ಹೊಂಚಿಕೊಳ್ಳುವುದೂ ಕಷ್ಟವಲ್ಲ, ಆದರೆ ಅವುಗಳ ಮೌಲ್ಯ ಹೊಂದಿಸುವುದೇ ಕಷ್ಟಕರ ಅಂಶ.
ಮತ್ತಷ್ಟು
ಅಣು ಒಪ್ಪಂದ: ಪಿಎಂರಿಂದ ಬುಷ್ ಭೇಟಿ
ಯುಪಿಎಯಿಂದ ಹೊರ ನಡೆದ ಎಡಪಕ್ಷಗಳು
ಯೂಟ್ಯೂಬ್‌ನಲ್ಲೂ ಲಾಲೂ ಶೈನಿಂಗ್
ಐಎಇಎಯೊಂದಿಗೆ ಒಪ್ಪಂದ ಮುಂದುವರಿಕೆ: ಪ್ರಧಾನಿ ಸ್ಪಷ್ಟನೆ
ಐಎಇಎ: ಸರಕಾರದಿಂದ ಇನ್ನೊಂದು ಸಭೆಯ ಪ್ರಸ್ತಾಪ
ಬಿಹಾರ: ಬಸ್ ಕಮರಿಗೆ ಉರುಳಿ 6 ಸಾವು