ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಒಪ್ಪಂದದ ಹಿಂದೆ 'ಒಪ್ಪಂದ' : ಅಡ್ವಾಣಿ ಆರೋಪ  Search similar articles
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ನೂತನ ಮೈತ್ರಿ ಪಕ್ಷಗಳತ್ತ ದೃಷ್ಟಿ ಹಾಯಿಸುವುದನ್ನು ಗಮನಿಸಿದರೆ, ಅಣು ಒಪ್ಪಂದದ ಹಿಂದೆ ಇನ್ನೊಂದು ಒಪ್ಪಂದವಾಗಿರುವುದು ವ್ಯಕ್ತವಾಗುತ್ತದೆ ಎಂಬುದಾಗಿ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಆರೋಪಿಸಿದ್ದು, ಈ ಕುರಿತಾಗಿ ಸ್ಪಷ್ಟನೆ ನೀಡುವಂತೆ ಪ್ರಧಾನಮಂತ್ರಿಯವರಿಗೆ ಆಗ್ರಹಿಸಿದ್ದಾರೆ.

ಈ ವರೆಗೆ ಕಹಿಯಾಗಿದ್ದ ಕಾಂಗ್ರೆಸ್ ಮತ್ತು ಸಮಾಜವಾದಿ ನಡುವಿನ ಸಂಬಂಧದ ನಡುವೆ ಇದ್ದಕ್ಕಿದ್ದಂತೆ ಬಾಂಧವ್ಯ ಮೂಡಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಅಲ್ಲದೆ ಇದು ವ್ಯಾಪಕಾವಗಿ ಊಹಾಪೋಹಗಳಿಗೂ ಕಾರಣವಾಗಿದೆ ಎಂದು ಅಡ್ವಾಣಿ ತಿಳಿಸಿದ್ದಾರೆ.

ಹಣಕಾಸು ಅವ್ಯವಹಾರ ಹಾಗೂ ಆರ್ಥಿಕ ಅಪರಾಧಗಳಿಂದ ನಿರ್ದಿಷ್ಟ ವ್ಯಕ್ತಿಯನ್ನು ರಕ್ಷಿಸಲು ಸರಕಾರವು ಸರಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ ಮತ್ತು ಈ ಒಪ್ಪಂದದ ಹಿಂದೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದು ಪ್ರಧಾನಿ ಸ್ಪಷ್ಟನೆ ನೀಡಬೇಕೆಂದು ಅಡ್ವಾಣಿ ಒತ್ತಾಯಿಸಿದ್ದಾರೆ.

ಸಮಾಜವಾದಿ ಪಕ್ಷವು ಯಾವುದೇ ಸಚಿವ ಸ್ಥಾನದಲ್ಲಿ ಆಸಕ್ತಿ ಹೊಂದದಿರುವ ಕಾರಣ, ಯಾವುದೇ ಕೊಡುಕೊಳ್ಳುವಿಕೆ ನಡೆದಿಲ್ಲ ಎಂಬುದಾಗಿ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಏನೇ ಆದರೂ, ಭೃಷ್ಟಾಚಾರ ಆರೋಪದಲ್ಲಿ ಸಿಕ್ಕಿಹಾಕಿಕೊಂಡಿರುವ ಕೆಲವು ಸಮಾಜವಾದಿ ಪಕ್ಷದ ನಾಯಕರನ್ನು ರಕ್ಷಿಸುವ ಸಲುವಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಹೊಂದಾಣಿಕೆ ಉಂಟಾಗಿದೆ ಎಂಬ ಊಹಾಪೋಹಗಳು ರಾಜಕೀಯ ವಲಯಗಳಲ್ಲಿ ಎದ್ದಿವೆ.

ಅಲ್ಲದೆ, ಪಕ್ಷಕ್ಕೆ ಸಮೀಪವಿರಬಹುದೆನ್ನಲಾದ ಕೆಲವು ಕೈಗಾರಿಕಾ ಸಂಸ್ಥೆಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲವು ಸರಕಾರಿ ನೀತಿಗಳನ್ನು ಬದಲಾಯಿಸುವಂತೆಯೂ ಯುಪಿಎ ಸರಕಾರದೊಂದಿಗೆ ಮನವಿ ಮಾಡಿರುವ ಸಾಧ್ಯತೆಯೂ ಇದೆ.
ಮತ್ತಷ್ಟು
ಲೋಕಸಭೆಯಲ್ಲಿ ಬಹುಮತ: ಓಟಿನ ಶೋಧದಲ್ಲಿ ಯುಪಿಎ
ಅಣು ಒಪ್ಪಂದ: ಪಿಎಂರಿಂದ ಬುಷ್ ಭೇಟಿ
ಯುಪಿಎಯಿಂದ ಹೊರ ನಡೆದ ಎಡಪಕ್ಷಗಳು
ಯೂಟ್ಯೂಬ್‌ನಲ್ಲೂ ಲಾಲೂ ಶೈನಿಂಗ್
ಐಎಇಎಯೊಂದಿಗೆ ಒಪ್ಪಂದ ಮುಂದುವರಿಕೆ: ಪ್ರಧಾನಿ ಸ್ಪಷ್ಟನೆ
ಐಎಇಎ: ಸರಕಾರದಿಂದ ಇನ್ನೊಂದು ಸಭೆಯ ಪ್ರಸ್ತಾಪ