ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದು ಎಡಪಕ್ಷಗಳಿಂದ ಪಾಟೀಲ್ ಭೇಟಿ  Search similar articles
ಯುಪಿಎ ಸರಕಾರಕ್ಕೆ ನೀಡಿರುವ ಬಾಹ್ಯ ಬೆಂಬಲವನ್ನು ವಿದ್ಯುಕ್ತವಾಗಿ ಹಿಂತೆಗೆದುಕೊಳ್ಳುವ ನಿಟ್ಟಿನಲ್ಲಿ, ಎಡಪಕ್ಷಗಳು ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಅವರನ್ನು ಬುಧವಾರ ಭೇಟಿ ಮಾಡಲಿವೆ.

ನಾಲ್ಕು ಎಡಪಕ್ಷಗಳಾದ ಸಿಪಿಎ, ಸಿಪಿಐ, ಫಾರ್ವರ್ಡ್ ಬ್ಲಾಕ್ ಮತ್ತು ಆರ್ಎಸ್‌ಪಿ ಯುಪಿಎ ಸರಕಾರಕ್ಕೆ ನೀಡಿರುವ ಬಾಹ್ಯ ಬೆಂಬಲವನ್ನು ಹಿಂತೆಗೆಯುವ ತಮ್ಮ ಪತ್ರವನ್ನು ಅಧಿಕೃತವಾಗಿ ಅಧ್ಯಕ್ಷೆ ಪಾಟೀಲ್ ಅವರಿಗೆ ಸಲ್ಲಿಸಲಿದ್ದು, ಸದನದಲ್ಲಿ ವಿಶ್ವಾಸಮತವನ್ನು ಸಾಬೀತುಪಡಿಸುವಂತೆ ಒತ್ತಾಯಿಸಲಿದ್ದಾರೆ.

ಸದನದಲ್ಲಿ ವಿಶ್ವಾಸಮತವನ್ನು ಸಾಬೀತುಪಡಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸೂಚಿಸುವಂತೆ ರಾಷ್ಟ್ರಾಧ್ಯಕ್ಷೆ ಪಾಟೀಲ್ ಅವರಿಗೆ ಒತ್ತಾಯಿಸಲಿದ್ದೇವೆ ಎಂದು ಫಾರ್ವರ್ಡ್ ಬ್ಲಾಕ್‌ನ ಪ್ರಧಾನ ಕಾರ್ಯದರ್ಶಿ ದೇಬ್ರತಾ ಬಿಸ್ವಾಸ್ ತಿಳಿಸಿದ್ದಾರೆ.

ಪಾಟೀಲ್‌ಗೆ ಅಗ್ನಿಪರೀಕ್ಷೆ

ಈ ಮಧ್ಯೆ, ಎಡಪಕ್ಷಗಳು ಯುಪಿಎಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸುವುದರೊಂದಿಗೆ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸಂಸತ್ತಿನಲ್ಲಿ ವಿಶ್ವಾಸಮತ ಕೋರುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸೂಚಿಸಬೇಕೇ ಎಂಬ ಕುರಿತಾಗಿ ಪ್ರತಿಭಾ ಪಾಟೀಲ್ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಅಲ್ಲದೆ, ಯುಪಿಎ ಸರಕಾರ ಸದನದಲ್ಲಿ ಬಲಾಬಲ ಪರೀಕ್ಷೆಯಲ್ಲಿ ಗೆಲ್ಲುವುದಕ್ಕೆ ಬೇಕಾದ ಸದಸ್ಯರ ಬೆಂಬಲ ಹೊಂದಿದೆಯೇ ಎಂಬ ಕುರಿತು ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ತೀವ್ರ ಊಹಾಪೋಹಗಳ ಹಿನ್ನೆಲೆಯಲ್ಲಿ ಎಲ್ಲರ ಗಮನವೂ ಪಾಟೀಲ್ ಅವರತ್ತ ಸರಿದಿದ್ದು, ಪ್ರತಿಭಾ ಪಾಟೀಲ್ ಅವರಿಗೆ ಇದೊಂದು ರಾಜಕೀಯ ಅಗ್ನಿಪರೀಕ್ಷೆಯ ಕಾಲವಾಗಿದೆ.
ಮತ್ತಷ್ಟು
ಅಣುಒಪ್ಪಂದದ ಹಿಂದೆ 'ಒಪ್ಪಂದ' : ಅಡ್ವಾಣಿ ಆರೋಪ
ಲೋಕಸಭೆಯಲ್ಲಿ ಬಹುಮತ: ಓಟಿನ ಶೋಧದಲ್ಲಿ ಯುಪಿಎ
ಅಣು ಒಪ್ಪಂದ: ಪಿಎಂರಿಂದ ಬುಷ್ ಭೇಟಿ
ಯುಪಿಎಯಿಂದ ಹೊರ ನಡೆದ ಎಡಪಕ್ಷಗಳು
ಯೂಟ್ಯೂಬ್‌ನಲ್ಲೂ ಲಾಲೂ ಶೈನಿಂಗ್
ಐಎಇಎಯೊಂದಿಗೆ ಒಪ್ಪಂದ ಮುಂದುವರಿಕೆ: ಪ್ರಧಾನಿ ಸ್ಪಷ್ಟನೆ