ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ - ಅಮೆರಿಕಕ್ಕೆ ಅಣುಒಪ್ಪಂದ ಅತ್ಯಗತ್ಯ: ಬುಷ್  Search similar articles
ಭಾರತದ ರಾಜಕೀಯದಲ್ಲಾಗುತ್ತಿರುವ ಪ್ರಕ್ಷುಬ್ಧ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಆತ್ಮವಿಶ್ವಾಸ ಭರಿತರಾಗಿಯೇ ಇರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರದಂದು ಭಾರತ-ಅಮೆರಿಕ ಅಣು ಒಪ್ಪಂದದ ಪ್ರಗತಿಯ ಕುರಿತು ಅಧ್ಯಕ್ಷ ಜಾರ್ಜ್ ಡಬ್ಲು ಬುಷ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಅಣು ಒಪ್ಪಂದವು ಎರಡೂ ರಾಷ್ಟ್ರಗಳಿಗೆ ಬಹಳ ಮುಖ್ಯವಾದುದು ಎಂದ ಅಮೆರಿಕ ಅಧ್ಯಕ್ಷ ಭಾರತೀಯ ನಾಯಕನ "ದೇಶೀಯ ನಾಯಕತ್ವ"ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಭಯ ನಾಯಕರು, ಎಡಪಕ್ಷಗಳು ಆಧಿಕೃತವಾಗಿ ಬೆಂಬಲ ಹಿಂತೆಗೆಯುವ ಕೆಲವು ಗಂಟೆಗಳ ಮೊದಲು ಭೇಟಿಯಾಗಿ ಮಾತುಕತೆ ನಡೆಸಿದರು.

"ಅಮೆರಿಕದೊಂದಿಗೆ ನಮ್ಮ ಸಂಬಂಧವು ಹಿಂದೆಂದು ಇಂದಿನಷ್ಟು ಉತ್ತಮ ಸ್ಥಿತಿಯಲ್ಲಿರಲಿಲ್ಲ. ಮತ್ತು ಇದನ್ನು ಸಾಧಿಸುವುದೇ ನನ್ನ ಸರಕಾರದ ಗುರಿಯಾಗಿತ್ತು... ಹವಾಮಾನ ಬದಲಾವಣೆಯ ವಿಷಯವಿರಲಿ.. ವಿಶ್ವ ಆರ್ಥಿಕತೆಯ ವಿಷಯವಿರಲಿ, ಭಾರತ ಮತ್ತು ಅಮೆರಿಕ ಭುಜಕ್ಕೆ ಭುಜ ಕೊಟ್ಟು ಎತ್ತರಕ್ಕೆ ನಿಲ್ಲಬೇಕು ಮತ್ತು ಇದು ನಡೆಯಲಿದೆ," ಎಂದು ನಿರ್ಧರಿತ ವೇಳೆಗಿಂತ ವಿಸ್ತರಿಸಲ್ಪಟ್ಟ 50 ನಿಮಿಷಗಳ ಭೇಟಿಯ ನಂತರ ಸಿಂಗ್ ತಿಳಿಸಿದರು.

ಸಿಂಗ್ ಮತ್ತು ಬುಷ್ ಒಬ್ಬರಿಗೊಬ್ಬರು ಶ್ಲಾಘನೆ ವ್ಯಕ್ತಪಡಿಸಿದರು ಮತ್ತು ಎರಡೂ ರಾಷ್ಟ್ರಗಳ ನಡುವೆ ನಿಕಟ ಸಂಬಂಧದ ಅಗತ್ಯತೆಯ ಕುರಿತು ಮಾತುಕತೆ ನಡೆಸಿದರು.

"ನಾನು ಪ್ರಧಾನ ಮಂತ್ರಿ ಮತ್ತು ಭಾರತವನ್ನು ಬಹಳ ಗೌರವಿಸುತ್ತೇನೆ ಮತ್ತು ಅಮೆರಿಕವು ಮಿತ್ರ ರಾಷ್ಟ್ರಗಳೊಂದಿಗೆ ಸಂಬಂಧದ ಬಲವರ್ಧನೆಯ ಕುರಿತು ಮಾತ್ರವಲ್ಲದೆ, ವಿಶ್ವದ ಕೆಲವು ಸಮಸ್ಯಗಳನ್ನು ಎದುರಿಸಲೂ ತನ್ನ ಕಾರ್ಯ ಮುಂದುವರಿಸುವುದು ಅವಶ್ಯಕವಾಗಿದೆ" ಎಂದು ಅಧ್ಯಕ್ಷರು ನುಡಿದರು.
ಮತ್ತಷ್ಟು
ಇಂದು ಎಡಪಕ್ಷಗಳಿಂದ ಪಾಟೀಲ್ ಭೇಟಿ
ಅಣುಒಪ್ಪಂದದ ಹಿಂದೆ 'ಒಪ್ಪಂದ' : ಅಡ್ವಾಣಿ ಆರೋಪ
ಲೋಕಸಭೆಯಲ್ಲಿ ಬಹುಮತ: ಓಟಿನ ಶೋಧದಲ್ಲಿ ಯುಪಿಎ
ಅಣು ಒಪ್ಪಂದ: ಪಿಎಂರಿಂದ ಬುಷ್ ಭೇಟಿ
ಯುಪಿಎಯಿಂದ ಹೊರ ನಡೆದ ಎಡಪಕ್ಷಗಳು
ಯೂಟ್ಯೂಬ್‌ನಲ್ಲೂ ಲಾಲೂ ಶೈನಿಂಗ್