ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಬಲ ಹಿಂತೆಗೆದ ಎಡರಂಗ: ರಾಷ್ಟ್ರಪತಿ ಹೆಜ್ಜೆ ಏನು?  Search similar articles
ಎಡಪಕ್ಷಗಳು ಬುಧವಾರ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಯುಪಿಎ ಸರಕಾರಕ್ಕೆ ನೀಡುತ್ತಿರುವ ಬೆಂಬಲವನ್ನು ಅಧಿಕೃತವಾಗಿ ಹಿಂತೆಗೆದುಕೊಂಡಿದ್ದು, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಇದು ಮೊದಲ ರಾಜಕೀಯ ಪರೀಕ್ಷೆ. ಅವರು ಪ್ರತಿಪಕ್ಷಗಳ ಒತ್ತಡಕ್ಕೆ ಮಣಿಯುತ್ತಾರೆಯೇ ಅಥವಾ ವಿಶ್ವಾಸ ಮತ ಯಾಚನೆಗೆ ಸೂಚನೆಯನ್ನು ನೀಡುವುದಿಲ್ಲವೇ ಎಂಬುದು ಎಲ್ಲರ ಕುತೂಹಲ.

ಇದೀಗ, ರಾಷ್ಟ್ರಪತಿಯವರು ಸರಕಾರದ ಬಳಿ ಸಾಕಷ್ಟು 'ಸಂಖ್ಯಾಬಲ' ಇದೆ ಎಂದುಕೊಂಡು ಬಲಾಬಲ ಪರೀಕ್ಷೆಗೆ ಸೂಚನೆ ನೀಡದೇ ಮುಂದುವರಿದಲ್ಲಿ, ಅವರು ಕಾಂಗ್ರೆಸ್ ಪರವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಎದುರಿಸಬೇಕಾಗುತ್ತದೆ ಮತ್ತು ಪ್ರತಿಪಕ್ಷ ಬಿಜೆಪಿಯು ಇದನ್ನು ಬಲುದೊಡ್ಡ ವಿಷಯವನ್ನಾಗಿಯೂ ಬಿಂಬಿಸಬಹುದಾಗಿದೆ.

ಯುಪಿಎ ಈಗಾಗಲೇ ಅಲ್ಪಸಂಖ್ಯೆಗೆ ಇಳಿದಿದ್ದು, ಅಣ್ವಸ್ತ್ರ ಒಪ್ಪಂದಕ್ಕೆ ಸಂಬಂಧಿಸಿ ಅದಕ್ಕೆ ಮುಂದುವರಿಯುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಬಿಜೆಪಿ ಈಗಾಗಲೇ ಹೇಳುತ್ತಿದೆ. ಅಣ್ವಸ್ತ್ರ ಒಪ್ಪಂದದಂತಹಾ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಸದನದಲ್ಲಿ ಬಹುಮತ ಇರುವ ಸರಕಾರ ಮಾತ್ರ ಮಾಡಿಕೊಳ್ಳಬಹುದು ಎಂದು ಪ್ರತಿಪಕ್ಷ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಸಾಂವಿಧಾನಿಕ ತಜ್ಞರ ಪ್ರಕಾರ ಪಾಟೀಲ್ ಮುಂದೆ ಎರಡು ಆಯ್ಕೆಗಳಿವೆ. ಬಹುಮತ ಸಾಬೀತುಪಡಿಸುವಂತೆ ಸರಕಾರವನ್ನು ಕೋರುವುದು ಇಲ್ಲವೇ 2004ರಲ್ಲಿ ಸಮಾಜವಾದಿ ಪಕ್ಷ ಮತ್ತು ಇತರರು ನೀಡಿದ ಬೆಂಬಲ ಪತ್ರದ ಪ್ರಕಾರ ಮುಂದುವರಿಯುವುದು.

ಕೆಲವು ಎಸ್ಪಿ ಸಂಸದರು ಒಪ್ಪಂದಕ್ಕೆ ವಿರುದ್ಧವಾಗಿದ್ದಾರೆ ಮತ್ತು ಪಕ್ಷವು ಸಚೇತಕಾಜ್ಞೆ ನೀಡಿದರೂ, ಒಪ್ಪಂದದ ವಿರುದ್ಧ ಸದನದಲ್ಲಿ ಮತ ಚಲಾಯಿಸುವುದಾಗಿ ಹೇಳಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರು ಬಲಾಬಲ ಸಾಬೀತುಪಡಿಸಲು ಸರಕಾರವನ್ನು ಕೇಳಬೇಕಾಗುತ್ತದೆ ಎಂಬುದು ಸಂವಿಧಾನ ತಜ್ಞರ ಅಭಿಮತ.

ಆದರೆ, ಬಹುಮತ ಸಾಬೀತುಪಡಿಸುವಂತೆ ಸರಕಾರವನ್ನು ರಾಷ್ಟ್ರಪತಿಯವರು ಕೇಳಬೇಕಾಗಿಲ್ಲ. ಯಾಕೆಂದರೆ ಹೊಸ ಸರಕಾರಕ್ಕೆ ಮಾತ್ರವೇ ಅವರು ಈ ರೀತಿ ಆದೇಶಿಸಬಹುದಾಗಿದೆ. ಈಗೇನಿದ್ದರೂ ಅವಿಶ್ವಾಸ ಗೊತ್ತುವಳಿ ಮಂಡಿಸುವುದು ಪ್ರತಿಪಕ್ಷಗಳ ಕೆಲಸ ಎಂದು ಇನ್ನು ಕೆಲವು ತಜ್ಞರು ಹೇಳುತ್ತಾರೆ.
ಮತ್ತಷ್ಟು
ಭಾರತ - ಅಮೆರಿಕಕ್ಕೆ ಅಣುಒಪ್ಪಂದ ಅತ್ಯಗತ್ಯ: ಬುಷ್
ಇಂದು ಎಡಪಕ್ಷಗಳಿಂದ ಪಾಟೀಲ್ ಭೇಟಿ
ಅಣುಒಪ್ಪಂದದ ಹಿಂದೆ 'ಒಪ್ಪಂದ' : ಅಡ್ವಾಣಿ ಆರೋಪ
ಲೋಕಸಭೆಯಲ್ಲಿ ಬಹುಮತ: ಓಟಿನ ಶೋಧದಲ್ಲಿ ಯುಪಿಎ
ಅಣು ಒಪ್ಪಂದ: ಪಿಎಂರಿಂದ ಬುಷ್ ಭೇಟಿ
ಯುಪಿಎಯಿಂದ ಹೊರ ನಡೆದ ಎಡಪಕ್ಷಗಳು