ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬುಹುಮತ ಸಾಬೀತಿಗೆ ಎಡಪಕ್ಷಗಳ ಒತ್ತಾಯ  Search similar articles
PTI
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿಯಾಗಿ ಯುಪಿಎ ಸರಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವ ಪತ್ರಸಲ್ಲಿಸಿರುವ ಎಡಪಕ್ಷಗಳ ನಾಯಕರು, ಸರಕಾರ ಸಂಸತ್ತಿನಲ್ಲಿ ತನ್ನ ಬಹುಮತ ಸಾಬೀತು ಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಸಿಪಿಎಂ, ಸಿಪಿಐ, ಫಾರ್‌ವರ್ಡ್ ಬ್ಲಾಕ್ ಮತ್ತು ಆರ್‌ಎಸ್‌ಪಿಗಳು ಬೆಂಬಲ ಹಿಂತೆಗೆತದ ಆಧಿಕೃತ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಲಿದ್ದು ವಿಶ್ವಾಸ ಮತಯಾಚನೆಗೆ ಒತ್ತಾಯಿಸಿದ್ದಾರೆ.

ಈಗ ಎಲ್ಲರ ದೃಷ್ಟಿ ಪ್ರತಿಭಾ ಪಾಟೀಲ್ ಅವರ ಮೇಲೆ ಕೇಂದ್ರಿಕೃತವಾಗಿದ್ದ ಆವರೀಗ ಅಗ್ನಿ ಪರೀಕ್ಷೆಗೀಡಾಗಿದ್ದಾರೆ. ಪ್ರತಿಭಾ ಪಾಟೀಲ್ ಅವರು ಅತಿ ಶೀಘ್ರದಲ್ಲಿ ಸರಕಾರವು ಬಹುಮತ ಹೊಂದಿದೆ ಎಂದು ದೃಢೀಕರಣ ಪಡಿಸುವಂತೆ ಸರಕಾರಕ್ಕೆ ಸೂಚಿಸುವ ಒತ್ತಡಕ್ಕೆ ಸಿಲುಕಲಿದ್ದು, ಇದು ಅವರ ಪಾಲಿನ ಪ್ರಥಮ ರಾಜಕೀಯ ಪರೀಕ್ಷೆಯಾಗಲಿದೆ.

ಫಾರ್‌ವರ್ಡ್ ಬ್ಲಾಕ್‌ನ ಪ್ರಧಾನ ಕಾರ್ಯದರ್ಶಿ ದೇವವೃತ ಬಿಸ್ವಾಸ್ "ನಾವು ರಾಷ್ಟ್ರಪತಿಯವರ ಬಳಿ ಪ್ರಧಾನಮಂತ್ರಿಯವರು ಬಹುಮತ ಸಾಬೀತು ಪಡಿಸುವಂತೆ ಸೂಚಿಸಲು ಮನವಿ ಮಾಡುತ್ತೇವೆ ಮತ್ತು ಶೀಘ್ರ ವಿಶ್ವಾಸ ಮತ ಯಾಚನೆಗೆ ಒತ್ತಾಯಿಸಲಿದ್ದೇವೆ" ಎಂದು ಹೇಳಿದ್ದಾರೆ.

ಎಡಪಕ್ಷಗಳ ಒತ್ತಾಯಕ್ಕೆ ದನಿಗೂಡಿಸಿರುವ ಬಿಜೆಪಿ ನಾಯಕ ರಾಜನಾಥ್ ಸಿಂಗ್ "ಸರಕಾರ ವಿಶ್ವಾಸ ಮತ ಯಾಚನೆಗೆ ಮುಂದಾಗಬೇಕು" ಎಂದು ಹೇಳಿದ್ದಾರೆ.
ಮತ್ತಷ್ಟು
ಬೆಂಬಲ ಹಿಂತೆಗೆದ ಎಡರಂಗ: ರಾಷ್ಟ್ರಪತಿ ಹೆಜ್ಜೆ ಏನು?
ಭಾರತ - ಅಮೆರಿಕಕ್ಕೆ ಅಣುಒಪ್ಪಂದ ಅತ್ಯಗತ್ಯ: ಬುಷ್
ಇಂದು ಎಡಪಕ್ಷಗಳಿಂದ ಪಾಟೀಲ್ ಭೇಟಿ
ಅಣುಒಪ್ಪಂದದ ಹಿಂದೆ 'ಒಪ್ಪಂದ' : ಅಡ್ವಾಣಿ ಆರೋಪ
ಲೋಕಸಭೆಯಲ್ಲಿ ಬಹುಮತ: ಓಟಿನ ಶೋಧದಲ್ಲಿ ಯುಪಿಎ
ಅಣು ಒಪ್ಪಂದ: ಪಿಎಂರಿಂದ ಬುಷ್ ಭೇಟಿ