ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರಪತಿಗೆ ಬೆಂಬಲ ಪತ್ರ ಒಪ್ಪಿಸಿದ ಎಸ್ಪಿ  Search similar articles
ಅತ್ತ ಎಡಪಕ್ಷಗಳು ಯುಪಿಎಗೆ ನೀಡಿರುವ ಬೆಂಬಲ ಹಿಂತೆಗೆತದ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿರುವಂತೆ, ಇತ್ತ ಸಮಾಜವಾದಿ ಪಕ್ಷವು ಸರಕಾರಕ್ಕೆ ಬೆಂಬಲ ನೀಡುವ ಪತ್ರವನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿದೆ.

ಪಕ್ಷದ ಚಿನ್ನೆಡೆಯಡಿ ಸ್ಫರ್ಧಿಸಿರುವ ಎಲ್ಲಾ ಸಂಸದರ ಹೆಸರನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಪಟ್ಟಿಯು ಒಳಗೊಂಡಿದೆ ಎಂದು ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ. ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರೊಂದಿಗೆ ರಾಷ್ಟ್ರಪತಿಯವನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಈ ಎಲ್ಲಾ ಸದಸ್ಯರು ಸಂಸತ್ತಿನಲ್ಲಿ ಪಕ್ಷವು ಹೊರಡಿಸುವ ವಿಪ್ ಅನುಸರಿಸಲಿದ್ದಾರೆ ಎಂದು ಸಿಂಗ್ ನುಡಿದರು.

ಆದರೆ ಬೆಂಬಲ ನೀಡುವ ಸದಸ್ಯರ ನಿಖರ ಸಂಖ್ಯೆಯನ್ನು ಅವರು ತಿಳಿಸಿಲ್ಲ. ಅಮಾನತ್ತುಗೊಂಡಿರುವ ಪಕ್ಷದ ಸಂಸದ ಬೆನ್ನಿ ಪ್ರಸಾದ್ ವರ್ಮಾ ಅವರನ್ನು ಬುಧವಾರ ಬೆಳಿಗ್ಗೆ ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಅವರು ಅಮಾನತ್ತುಗೊಂಡಿರುವ ಇನ್ನೊರ್ವ ಸದಸ್ಯ ಅತಿಕ್ ಅಹ್ಮದ್ ಅವರೂ ಕಾಂಗ್ರೆಸನ್ನು ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಮತ್ತಷ್ಟು
ಬುಹುಮತ ಸಾಬೀತಿಗೆ ಎಡಪಕ್ಷಗಳ ಒತ್ತಾಯ
ಬೆಂಬಲ ಹಿಂತೆಗೆದ ಎಡರಂಗ: ರಾಷ್ಟ್ರಪತಿ ಹೆಜ್ಜೆ ಏನು?
ಭಾರತ - ಅಮೆರಿಕಕ್ಕೆ ಅಣುಒಪ್ಪಂದ ಅತ್ಯಗತ್ಯ: ಬುಷ್
ಇಂದು ಎಡಪಕ್ಷಗಳಿಂದ ಪಾಟೀಲ್ ಭೇಟಿ
ಅಣುಒಪ್ಪಂದದ ಹಿಂದೆ 'ಒಪ್ಪಂದ' : ಅಡ್ವಾಣಿ ಆರೋಪ
ಲೋಕಸಭೆಯಲ್ಲಿ ಬಹುಮತ: ಓಟಿನ ಶೋಧದಲ್ಲಿ ಯುಪಿಎ